ಜಗಳೂರು ಸುದ್ದಿ:- ಬಿ ಜೆ ಪಿ ಮುಖಂಡ ‌ಕಾನನಕಟ್ಟೆ ಕೆ ಎಸ್ ಪ್ರಭುಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ತಾಲ್ಲೂಕಿನ ಕಾನನಕಟ್ಟೆ ಕೆ ಎಸ್ ಪ್ರಭುಗೌಡರವರು ಈ ಹಿಂದೆ ಹಾಲಿ ಶಾಸಕ ಎಸ್ ವಿ ರಾಮಚಂದ್ರರವರ ಬೆಂಬಲಿಗರಾಗಿ ಬಿ ಜೆ ಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಆದರೆ ಇದೀಗ ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರ ಪರವಾಗಿ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯರವರ ನೇತೃತ್ವದಲ್ಲಿ ಪಟ್ಟಣದ ಸುದೀರರೆಡ್ಡಿ‌ ನಿವಾಸದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಗುರುತಿನ ಚಿಹ್ನೆ ಸ್ವಿಕರಿಸುವ ಮೂಲಕ ಸೇರ್ಪಡೆಗೊಂಡರು..ಈ ವೇಳೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿ ನಂತರ ಸುದ್ದಿಗಾರರೊಂದಿಗೆ ಕಾನನಕಟ್ಟೆ ಕೆ ಎಸ್. ಪ್ರಭು ಮಾತನಾಡಿದರು ಬಿಜೆಪಿ ಪಕ್ಷ ಕೋಮುವಾದಿ ಪಕ್ಷವಾಗಿದ್ದು ಅಲ್ಲಿ ತಾರತಮ್ಯ ಧೋರಣೆಗಳು ಹೆಚ್ಚಾಗಿವೆ.ಅತಿಯಾದ ಭ್ರಷ್ಟಾಚಾರ 40 ಪರಿಷಂಟ್ ಕ್ಷೇತ್ರದಲ್ಲಿ ತಾಂಡವಾಡುತ್ತಿದೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ ನಂಬಿ ಮೂಲದಲ್ಲಿ ನಾನು ಇದೆ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದೆ ಆದರೆ ಬದಲಾದ ರಾಜಕೀಯ ವಿದ್ಯಾಮಾನದಲ್ಲಿ ನಾನು ಬಿಜೆಪಿ ಪಕ್ಷಕ್ಕೆ ಈ ಹಿಂದೆ ಸೇರ್ಪಡೆಯಾಗಿದ್ದೆ ಆದರೆ ಆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲ ಸರ್ಕಾರದ ಯೋಜನೆಗಳ ಆರ್ಹಫಲಾನುಭವಿಗಳಿಗೆ ಸರಿಯಾಗಿ ಸಿಗದೇ ಉಳ್ಳವರ ಪಾಲಾಗಿವೆ ಇವೆಲ್ಲವುಗಳುನ್ನು ಕಂಡ ನಾನು ಅಸಮಾಧಾನಗೊಂಡು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆನೆ .ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪರವರುನ್ನು ಅತ್ಯಂತ ಬಹುಮತಗಳಿಂದ ಗೆಲಿಸುವುದೇ ನಮ್ಮ ಗುರಿಯಾಗಿದೆ ಎಂದರು.ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ ಕೆ ಎಸ್ ಪ್ರಭಣ್ಣರವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ನಮ್ಮಗೆ ಆನೆ ಬಲ ಬಂದಂತಾಗಿದೆ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸರ್ವೆ ಸಾಮಾನ್ಯವಾಗಿ ಮೊನ್ನೆಯಿಂದಲೆ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದು ಈ ಬಾರಿ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದರು. .ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಷಂಷೀರ್ ಆಹಮದ್.ಮಾಜಿ ಬ್ಲಾಕ್ ಕಾಂಗೈ ಅಧ್ಯಕ್ಷ ಪಿ ಎಸ್ ಸುರೇಶ್ ಗೌಡ್ರು.ಮುಖಂಡರಾದ ಪ್ರಕಾಶರೆಡ್ಡಿ.ಮುಖಂಡ ಸುದೀರಣ್ಣ.ದೇವಿಕೆರೆ ಮುಖಂಡ ಗುರುಸ್ವಾಮಿ.ಯುವ ಘಟಕದ ಮುಖಂಡ ರಂಗಸ್ವಾಮಿ.ಆದರ್ಶ.ಕಾರ್ಮಿಕ ಘಟಕದ ಗುತ್ತಿದುರ್ಗದ ರುದ್ರೇಶ್.ಗಿಡ್ಡನಕಟ್ಟೆ ತಿಪ್ಪೇಸ್ವಾಮಿ. ಕಾಟಜ್ಜ.ಚಂದ್ರಣ್ಣ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!