ಶುಕ್ರದೆಸೆ ನ್ಯೂಸ್:- ಕ್ಷೇತ್ರದಲ್ಲಿ ಸ್ವಾಭಿಮಾನಿ ಮತದಾರರ ವ್ಯಾಪಕ ಬೆಂಬಲವೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಜಗಳೂರು ಸುದ್ದಿ:ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆರಂಭದಿಂದಲೂ ನಮ್ಮ ಸ್ವಾಭಿಮಾನಿ ಅಭಿಮಾನಿಗಳು ನನ್ನ ಗೆಲುವಿಗೆ ದೇಣಿಗೆ ನೀಡಿ ಕ್ಷೇತ್ರದ ಸ್ವಾಭಿಮಾನಿಗಳ ವ್ಯಾಪಕ ಬೆಂಬಲ ಗೆಲುವಿನ ಉತ್ಸಾಹ ನನಗೆ ಹೆಚ್ಚಿಸಿದೆ ಎಂದು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ರವರು ತಾಲೂಕಿನ ಬಿದರಕೆರೆ ತೋಟದ ಮನೆ ಅವರ ನಿವಾಸದ ಆವರಣದಲ್ಲಿ ಸ್ವಾಭಿಮಾನಿ ಪಕ್ಷೇತರ ಕಾರ್ಯಕರ್ತರ ಸಭೆಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದರು.
ನಾನು ಕಳೆದ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದಲ್ಲಿ ಉತ್ತಮ ಆಡಳಿತಾ ನಡೆಸುವ ಮೂಲಕ ಕ್ಷೇತ್ರದಲ್ಲಿನ ಜನತೆಗೆ ಅಗತ್ಯ ಸೇವೆ ನೀಡಿ ಗಂಗಾಕಲ್ಯಾಣ,ಸೂರು ,ಗ್ರಾಮೀಣ ಭಾಗದಲ್ಲಿನ ಸಿಸಿ ರಸ್ತೆ,ಅಭಿವೃದ್ದಿ ಕಾಮಗಾರಿಗಳೇ ನನಗೆ ಗೆಲುವಿನ ಶ್ರೀರಕ್ಷೆಯಾಗಿ ಪ್ರತಿ ಗ್ರಾಮಗಳಲ್ಲಿ ರಾತ್ರಿ 12 ಗಂಟೆವರೆಗೂ ಅಪಾರ ಬೆಂಬಲ ಸ್ವಾಗತ ಕಂಡು ಮೂಕವಿಸ್ಮಿತನಾಗಿ ಜನರ ಭಾವನಾತ್ಮಕ ಸಂಬಂಧವನ್ನು ಗಳಿಸಿರುವೆ.ನಮ್ಮ ಸ್ವಾಭಿಮಾನಿ ಕಾರ್ಯಕರ್ತ ಬೆಂಬಲಿಗರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಮೇ.10 ರವರೆಗೆ ಇದೇ ರೀತಿ ಬೆಂಬಲದೊಂದಿಗೆ ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಮತದಾರರಿಗೆ ನಮ್ಮ ತೆಂಗಿನ ಮರದ ಗುರುತಿಗೆ ಹೆಚ್ ಪಿ ರಾಜೇಶ್ ಗೆ ಅಧಿಕ ಮತಗಳನ್ನು ಹಾಕಿಸಿ ಕ್ಷೇತ್ರದ ಕಡೆ ನಿಬ್ಬೆರಗಾಗಿ ರಾಜ್ಯವೇ ತಿರುಗಿ ನೋಡುವಂತೆ ಮಾಡಲು ನಿಮ್ಮ. ಸೇವೆಯನ್ನ ನಾನು ಬೇಡುವೆ ಎಂದು ಕರೆ ನೀಡಿದರು
ರಾಷ್ಟ್ರೀಯ ಪಕ್ಷಗಳಿಗೆ ನಾನೇ ಪೈಪೋಟಿಯಾಗಿದ್ದು ನನನ್ನೆ ಟಾರ್ಗೆಟ್ ಮಾಡಿ ಪಕ್ಷದ ಹಾಲಿ ಮಾಜಿ ಮುಖ್ಯಮಂತ್ರಿಗಳು ಇರುವ ಮತ್ತು ಪ್ರಣಾಳಿಕೆಗಳನ್ನು ಹೊಂದಿರುವ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ನಡೆಯಬೇಕಿತ್ತು.ಆದರೆ ಇಲ್ಲಿ ಅವರಿಬ್ಬರೂ ಒಂದಾಗಿದ್ದು.ನೇರ ಹಣಾಹಣಿ ನನ್ನ ಮಧ್ಯೆ ಇದೆ.ನನಗೆ ಸ್ವಾಭಿಮಾನಿಗಳ ಶಕ್ತಿಯೇ ಪ್ರಣಾಳಿಕೆಗಳು ನಿಮ್ಮ ತೀರ್ಮಾನಕ್ಕೆ ನಾನು ಬದ್ದನಾಗಿರುವೆ ಹೋರಾಟ ಮಾಡುವೆ ಕ್ಷೇತ್ರಕ್ಕೆ ಉತ್ತಮ ವ್ಯಕ್ತಿತ್ವವುಳ್ಳ ಶಾಸಕ ಅಗತ್ಯವಿದೆ.ಇಲ್ಲಿ ಜನಿಸಿದ ನಾನೇ ಪುಣ್ಯವಂತ ಎಂದು ಆನಂದ ಬಾಷ್ಪ ಸುರಿಸಿದರು.
ಸ್ವಾಭಿಮಾನದ ರಥವನ್ನು ಪಾದಗಟ್ಟೆಗೆ ತಲುಪಿಸಿ:ಮೇ.8
ಸೋಮವಾರದಂದು ರೋಡ್ ಶೋ ಉಚ್ಛಾಯ ಎಳೆಯೋಣ.ಭರದಿಂದ ಸಾಗುತ್ತಿರುವ ಸ್ವಾಭಿಮಾನದ ರಥ ಯಾರೇ ಅಡ್ಡಿಪಡಿಸಿದರೂ ನಿಷ್ಠೆಯಿಂದ ಎಳೆದು ಪಾದಗಟ್ಟೆಗೆ ತಲುಪಿಸಿ ಎಂದು ಮನವಿ ಮಾಡಿದರು.
ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗುವಲ್ಲಿ ಮೋಸವಾಗಿದೆ.ಈ ಬಗ್ಗೆ ಕೇಳಿದರೆ ಬಿಫಾರಂ ನೀಡಿದ ವರಿಷ್ಠರಲ್ಲಿಯೇ ಉತ್ತರವಿಲ್ಲ.ಕ್ಷೇತ್ರದ ಜನತೆಯ ಆಶೀರ್ವಾದದಿಂದ ಗೆದ್ದು ಬರುವೆ.ನಂತರ ಸಭೆ ಕರೆದು ಯಾವ ಪಕ್ಷ ಸೇರಬೇಕು ಎಂಬುದನ್ನು ತಮ್ಮ ನಿರ್ಧಾರದಂತೆ ನಡೆದುಕೊಳ್ಳುವೆ ಎಂದು ವಚನ ನೀಡಿದರು.
:ಲಿಂಗಾಯತ ಸಮುದಾಯವರ ಬೆಂಬಲ ಲಿಂಗಾಯತ ಸಮಾಜ ಬೆಂಬಲ ಯಾರಿಗೆ ಎಂಬುದರ ಬಗ್ಗೆ ಬಿಜೆಪಿ ಪಕ್ಷದ ಸಂಸದ ಜಿಎಂ ಸಿದ್ದೇಶ್ವರ್ ಮಾಹಿತಿಯಿಲ್ಲ.ಈ ಬಾರಿ ಚುನಾವಣೆ ಫಲಿತಾಂಶ ನಂತರ ಅರ್ಥವಾಗುತ್ತದೆ.ನಾವು ಲಿಂಗಾಯತರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸುತ್ತಿಲ್ಲವೆ ಎಂದು ಮಾಜಿ ಶಾಸಕ ಗುರುಸಿದ್ದನಗೌಡ್ರು ಪುತ್ರ ಅರವಿಂದ್ ಗೌಡ ಅವರು ಸ್ಪಷ್ಟನೆ ನೀಡಿದರು.
ಸಂದರ್ಭದಲ್ಲಿ ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ,ಗುರುಸಿದ್ದನಗೌಡ ಪುತ್ರ ಪ್ರವೀಣ್ ಗೌಡ,
ಮುಖಂಡರಾದತಿಪ್ಪೇಸ್ವಾಮಿಗೌಡ,ಪುರುಷೋತ್ತಮನಾಯ್ಕ,ಯು.ಜಿ.ಶಿವಕುಮಾರ್,ಗಿರೀಶ್ಒಡೆಯರ್,ಕುಬೇಂದ್ರಪ್ಪ,ಆನಂದರಾಜ್,ಬಸವರಾಜ್,ಹಜರತ್ ಅಲಿ,ಬೈರೇಶ್,ದೇವರಾಜ್,ಸೂರಲಿಂಗಪ್ಪ,ಎಂಸ್ ಪಾಟೀಲ್,ಸೇರಿದಂತೆ ಇದ್ದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನನನ್ನು ಟಾರ್ಗಟ್ ಮಾಡಿದ್ದು ನನ್ನ ಗೆಲುವಿಗೆ ಆಪಾರವಾದ ಜನಸಾಗರವೆ ಶ್ರೀರಕ್ಷೆಯಾಗಲಿದೆ.