ಅಗತ್ಯ ವಸ್ತುಗಳ ಬೆಲೆ ಏರಿಕೆ ಅತಿಯಾದ ತೆರಿಗೆ ವಸೂಲಿ ಮತ್ತು ಅತಿ ಸುಳ್ಳು ಹೇಳುವುದೇ ಬಿಜೆಪಿ ಸರ್ಕಾರದ ಅಜೆಂಡಾ ಎಂದು ರಾಜ್ಯ ಸಭಾ ಸದಸ್ಯ ಎಲ್ ಹನುಮಂತಯ್ಯ ಪ್ರದಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಜನ ಸಾಮಾನ್ಯ ಬಡವರ ಸಂಕಷ್ಟಗಳಿಗೆ ಸ್ವಂದಿಸಿ ಕೆಲಸ ಮಾಡುವವನೆ ನಿಜವಾದ ಜನ ನಾಯಕ ಆದರೆ ಪ್ರಧಾನಿ ಮೋದಿಯವರು ಅವರ ಮನೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಊಟ ತಿನಿಸುವ ಮೋದಿ ದೇಶದ ಬಡ ಜನರ ಹಸಿವಿನ ಸಂಕಷ್ಟಗಳ ಬಗ್ಗೆ ಎಂದು ತುಟಿ ಬಿಚ್ಚಿ ಮಾತನಾಡದೆಯಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಮೋದಿ ವಿರುದ್ದ ಗುಡುಗಿದರು. ಜಗಳೂರು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರ ನಿವಾಸದಲ್ಲಿ‌ ಇಂದು ನಡೆದ ಚುನಾವಣೆ ಪ್ರಚಾರದ ಸಭೆಯಲ್ಲಿ ಹೆಚ್ಚು ಮಾದಿಗ ಸಮುದಾಯದವರಿಗಾಗಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರದ ಸಭೆಯನ್ನುದ್ದೆಶಿಸಿ ಎಲ್ ಹನುಮಂತಯ್ಯ ಮಾತನಾಡಿದರು ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಾಲ್ಕು ಸಾವಿರ ಕೋಟಿ ರೂಗಳ ಅಭಿವೃದ್ಧಿ ನಿಗಮಗಳ ಸಾಲ ಮನ್ನಾ ಮಾಡಿ ಎಸ್ಸಿ ಎಸ್ಟಿ ಕಾಯ್ದೆ ಜಾರಿ ಮಾಡಿ ಪರಿಣಾಮಕಾರಿಯಾಗಿ ಎಲ್ಲಾ ವರ್ಗದ ಜನರ ಹಿತಾಸಕ್ತಿ ಕಾಪಾಡುವಂತಹ ಆಡಳಿತಕ್ಕೆ ಸಾಕ್ಷಿಯಾಗಿದ್ದಾರೆ.ಬಡವರಿಗೆ ಅನ್ನ ಭಾಗ್ಯ ಇಂದಿರಾ ಕ್ಯಾಂಟಿನ್ ಶುದ್ದ ನೀರಿನ ಘಟಕ‌ ಸೇರಿದಂತೆ ಅನೇಕ ಜನಪರ ಕಲ್ಯಾಣ ಮಾಡಿರುತ್ತಾರೆ. ಇದೀಗ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನಿಕವಾಗಿ‌ ಬಡವರ ಹಿತಾ ಕಾಯುವಂತ ಆಡಳಿತ ನಡೆಸುವ ಬದಲು ಬಹುರಾಷ್ಟ್ರೀಯ ಕಂಪನಿಗಳ ಶ್ರೀಮಂತ ಮಾಲಿಕರ ಪರವಾಗಿ ಆಡಳಿತ ನಡೆಸುತ್ತಿದೆ.ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಜಾತಿ ಜಾತಿಗಳ ಮದ್ಯೆ ಕೋಮುವಾದ ಸೃಷ್ಠಿಸಿ ಹಿಟ್ಲರ್ ಆಡಳಿತ ನಡೆಸುವಂತ ದುಸ್ಥಿತಿಗೆ ದೇಶ ತಲುಪಿದೆ. ಅನೇಕ ವಸ್ತುಗಳ ಮೇಲೆ ಅತಿಯಾದ ತೆರಿಗೆ ವಿಧಿಸಿ ಜನಸಾಮಾನ್ಯರ ಬದುಕಿನ ಮೇಲೆ ಚೆಲ್ಲಾಟವಾಡುವ ಬಿಜೆಪಿ ಸರ್ಕಾರಕ್ಕೆ ದೇಶದ ಜನ ಈ ಸಾರ್ವತ್ರಿಕ ಚುನಾವಣೆಯಲ್ಲಿ ಬುದ್ದಿ ಕಲಿಸುವರು . ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಹುಮತಗಳಿಂದ ಗೆಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಡಳಿತಕ್ಕೆ ತರುವುದು ಶತಸಿದ್ದ .ಮಾದಿಗ ಸಮುದಾಯದ ಬಾಂದವರು ರಾಜ್ಯದಲ್ಲಿ‌ 120 ಮತ ಕ್ಷೇತ್ರದಲ್ಲಿ ಹೆಚ್ಚು ಜನಾ ಸಂಖ್ಯೆಯಿದ್ದು ನಾವು ನಿರ್ಣಾಯಿಸುವ ಪಕ್ಷವನ್ನೆ ಅಧಿಕಾರಕ್ಕೆ ತರುವಷ್ಟು ಜನಾಸಂಖ್ಯೆ ಬಲವಿದೆ ಆದರೆ ಒಗ್ಗಟಿನ ಕೊರತೆಯಿದೆ. ಆದ್ದರಿಂದ ಒಗ್ಗಟ್ಟಿನಿಂದ ಜಗಳೂರು ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಮಾದಿಗ ಸಮುದಾಯದ ಮತಗಳುನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪಗೆ ಬೆಂಬಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಿಮ್ಮ ಶಕ್ತಿ ಅಗತ್ಯವಾಗಿದೆ‌ ಎಂದು ಕಿವಿ‌ಮಾತು ಹೇಳಿದರು. ಕೆಪಿಸಿಸಿ ಕಾರ್ಯಧರ್ಶಿ ಅಸಗೋಡು ಜಯಸಿಂಹ ಮಾತನಾಡಿ ಕಾಂಗ್ರೆಸ್ ಪಕ್ಷ ದೀನದುರ್ಬಲರ ಪಕ್ಷವಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕೊಡುಗೆ ಅಪಾರವಾಗಿದೆ. ಇದೀಗ ಜಗಳೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ದೇವೆಂದ್ರಪ್ಪರವರಿಗೆ ಮೆ 10 ರಂದು ನಡೆಯುವ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡುವ ಮೂಲಕ ಬೆಂಬಲಿಸಿದರೆ ನಮ್ಮ ಪಕ್ಷದ ಅಭ್ಯರ್ಥಿ ಕ್ಷೇತ್ರದಲ್ಲಿ ಉತ್ತಮ ಆಡಳಿತ ನಡೆಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾತನಾಡಿ ಮಾಜಿ ಶಾಸಕರಿಗೆ ಹಾಗೂ ಹಾಲಿ ಶಾಸಕರಿಗೆ ಆವಕಾಶ ಕೊಟ್ಟಂತೆ ನನಗೂ ಒಂದು ಬಾರಿ ಆವಕಾಶ ಕೋಡಿ‌ ನಿಮ್ಮ ಅಗತ್ಯ ಸೇವೆ ಮಾಡವೆ. ಕ್ಷೇತ್ರದಲ್ಲಿ ನಾವು ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಿದ್ದು ಕೋವಿಡ್ ಸಂದರ್ಭದಲ್ಲಿ ವಿವಿಧ ಶೋಷಿತ ಸಮುದಾಯಗಳ ಸೇವೆಗೆ ಆಭಯ ಅಸ್ತ ಚಾಚಿರುವೆ ಆದ್ದರಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ವರ್ಧಿಸಲು ಕಾಂಗ್ರೆಸ್ ಪಕ್ಷದ ವರೀಷ್ಠರು ನನನ್ನು ಗುರುತಿಸಿ ಟಿಕೆಟ್ ನೀಡಿದೆ ನಾನು ಎಲ್ಲಾ ಸಮುದಾಯಗಳ ಹಿತಾಸಕ್ತಿ ತಕ್ಕಂತೆ ಸೇವೆ ಮಾಡುವೆ ಎಂದು ಮತ ಯಾಚಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ .ಪಾಲಯ್ಯ ಮಾತನಾಡಿದರು.

ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ,ಪಲ್ಲಾಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ ,ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ,ಹನುಮಂತಾಪುರ ಶಿವಕುಮಾರ್,ವಕೀಲ ಪುಣಭಗಟ್ಟಿ ನಿಂಗಪ್ಪ,ಮಹೇಶ್,ವಕೀಲ ಪ್ರಕಾಶ್,ಗೊಣೇಶ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!