By shukradeshe news
editor m.rajappa vyasgondanahalli
Kannada | online news portal |Kannada news online date ನವೆಂಬರ್ 7 _11_2026

ಕೊಡದಗುಡ್ಡದಲ್ಲಿ ದೀಪಾವಳಿಹಬ್ಬ,ಕನ್ನಡರಾಜ್ಯೋತ್ಸವ ಆಚರಣೆ ರಸಮಂಜರಿ ಕಾರ್ಯಕ್ರಮ:ಅನಂತಮೂರ್ತಿ ನಾಯ್ಕ.

ಜಗಳೂರು,ನ.7

:ತಾಲ್ಲೂಕಿನ ಕೊಡದಗುಡ್ಡ ಗ್ರಾಮದಲ್ಲಿ ನ.10‌ಮಂಗಳವಾರದಂದು ಸಂಜೆ 6 ಗಂಟೆಗೆ ಕನ್ನಡರಾಜ್ಯೋತ್ಸವದಿನಾಚರಣೆ,ದೀಪಾವಳಿ ಹಬ್ಬದ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪತ್ರಕರ್ತರ ಅನಂತಮೂರ್ತಿ ನಾಯ್ಕ‌ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೊಡದಗುಡ್ಡ ವೀರಭದ್ರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಬಂಜಾರ ಸಮುದಾಯ‌ಹಾಗೂ ವೀರಶೈವಸಮಾಜದವರು ಒಳಗೊಂಡಿದ್ದು ಸರ್ವರೂ ಒಗ್ಗೂಡಿ ದೀಪಾವಳಿ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದೆ.ರಸಮಂಜರಿ ಗಾಯನ ಕಾರ್ಯಕ್ರಮವೂ ಜರುಗಲಿದ್ದು ಶಾಸಕ ಬಿ.ದೇವೇಂದ್ರಪ್ಪ,ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ,ಎಚ್.ಪಿ.ರಾಜೇಶ್,ಕೆಪಿಸಿಸಿ ಎಸ್ ಟಿ ಘಟಕದ‌ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ವಿಎಸ್ ಎಸ್ ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ,ಬಿಸ್ತುವಳ್ಳಿ ಬಾಬು,ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

You missed

error: Content is protected !!