ತಳಮಟ್ಟದಿಂದ ಬಿಜೆಪಿ ಮಹಿಳಾ ಮೋರ್ಚಾ ಸಂಘಟನೆ ಬಲವರ್ಧನೆಗೆ ಶ್ರಮಿಸುವೆ:ರೂಪಾವತಿ ರಮೇಶ್
ಜಗಳೂರು ಸುದ್ದಿ,
ಜಗಳೂರು,ನ.7:ವಿಧಾನಸಭಾ ಕ್ಷೇತ್ರವ್ಯಾಪಿ ತಳಮಟ್ಟದಿಂದ ಬಿಜೆಪಿ ಮಹಿಳಾ ಮೋರ್ಚಾ ಸಂಘಟನೆ ಬಲವರ್ಧನೆಗೆ ಶ್ರಮಿಸಲಾಗುವುದು ಎಂದು ಬಿಜೆಪಿ ಮಹಿಳಾಮೋರ್ಚಾದ ತಾಲ್ಲೂಕು ಅಧ್ಯಕ್ಷೆ ರೂಪಾವತಿರಮೇಶ್ ತಿಳಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ,ಎಚ್.ಪಿ.ರಾಜೇಶ್,ಜಿಲ್ಲಾಧ್ಯಕ್ಷರಾದ ಚೇತನಾ ಶಿವಕುಮಾರ,ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ ಮರುಳಾರಾಧ್ಯ ಅವರ ಶಿಫಾರಸ್ಸಿನಂತೆ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಗಿದೆ.ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯು ತನ್ನದೇ ಸಿದ್ದಾಂತ,ಶಿಸ್ತನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಪಕ್ಷದ ಆಡಳಿತಕ್ಕೆ ತರಲು ಪೂರಕವಾಗಿ ಮಹಿಳಾ ಮೋರ್ಚಾದ ಸಂಘಟನಾ ಕಾರ್ಯಚಟುವಟಿಕೆಗಳನ್ನು ನಡೆಸಲಾಗುವುದು.ಬಿಜೆಪಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯಡಿ ಮಹಿಳೆಯರಿಗೆ ಸ್ವಯಂಉದ್ಯೋಗ ಒದಗಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ರೇಖಾ ಶಿವರಾಜ್,ಜಿಲ್ಲಾಕಾರ್ಯದರ್ಶಿ ರೇಖಾ ,ತಾಲ್ಲೂಕು ಕಾರ್ಯದರ್ಶಿ ಗಂಗಮ್ಮ,ಉಪಾಧ್ಯಕ್ಷೆ ಪ್ರೇಮಲೀಲಾ,ಖಜಾಂಚಿ ಗಂಗಮ್ಮ,ಸದಸ್ಯೆ ಶಿವಮ್ಮ,ಮುಖಂಡ ಶಿವಕುಮಾರಸ್ವಾಮಿ ಸೇರಿದಂತೆ ಇದ್ದರು.
ಬಿಜೆಪಿ ಮಹಿಳಾಮೋರ್ಚಾದ ಪದಾಧಿಕಾರಿಗಳು:ತಾಲ್ಲೂಕುಉಪಾಧ್ಯಕ್ಷರಾಗಿ ವೀಣಾ,ಖೈರುನ್ನೀಸಾ,ವೀಣಾ,ಸುನಿತ,ಭಾಗ್ಯಮ್ಮ,ಕಾರ್ಯದರ್ಶಿಗಳಾಗಿಪಿ.ಟಿ.ಮಾಲತಿ,ಗಂಗಮ್ಮ ಡಿ.ಜಿ,ನಾಗರತ್ನಮ್ಮ,ರೇಖಾಮಂಜಪ್ಪ,ಪ್ರೇಮಲೀಲಾ,ಎನ್.ಶೋಭಾ,ಕೋಶಾಧ್ಯಕ್ಷೆ ಮಾದನಹಳ್ಳಿ ಗಂಗಮ್ಮ,ಸದಸ್ಯರಾಗಿ ದಿವ್ಯ,ಅನಿತಾ,ಕೌಶಲ್ಯ,ಮೀನಾಕ್ಷಿ,ಶಿವಮ್ಮ,ನೀಲಮ್ಮ,ಜಯಶ್ರೀ,ಬಡಮ್ಮ,ಮಂಜುಳಾ,ನೇತ್ರಮ್ಮ,ಮಂಜುಬಾಯಿ,
ಕಲ್ಪನಾ,ಶಾಂತಮ್ಮ,ಅನಿತ,ವಿಜಯಮ್ಮ,ಗಾಯಿತ್ರಿ,ಶಾಂತಮ್ಮ,ವನಜಾಕ್ಷಮ್ಮ,ಉಮಾ,ಚೌಡಮ್ಮ ಆಯ್ಕೆಯಾಗಿರುತ್ತಾರೆ.
