By shukradeshe news
editor m.rajappa vyasgondanahalli
Kannada | online news portal |Kannada news online date october 2 _11_2026
ಸುದ್ದಿ ಜಗಳೂರು

ಬರಗಾಲದಲ್ಲಿ ಜನ ಜಾನುವಾರು ಪಶು ಪಕ್ಷಿಗಳಿಗೆ ನೀರಿನ ದಾಹ ನೀಗಿಸಿರುವ ಸಿರಿಗೆರೆ ಶ್ರೀಗಳು ಆಧುನಿಕ ಭಗೀರಥರು ಎಂದು ಶಾಸಕ ಬಿ ದೇವೇಂದ್ರಪ್ಪ ಬಣ್ಣಿಸಿದ್ದಾರೆ
ಜಗಳೂರು ಪಟ್ಟಣದ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು ಜಗಳೂರು ಪಟ್ಟಣದಲ್ಲಿ ಈ ಹಿಂದೆ ನಡೆದ ತರಳಭಾಳು ಹುಣ್ಣಿಮೆ ನಡೆದ ಪ್ರತಿಫಲವಾಗಿ ಸಿರಿಗೆರೆ ಶ್ರೀಗಳ ಅಶಿರ್ವಾದಿಂದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿಯಾದ ಹಿನ್ನಲೆಯಲ್ಲಿ ಎಲ್ಲಾ ಕೆರೆಗಳಿಗೆ ದಿಟೂರು ಮೂಲಕ ನೀರುಣಿಸಿ ಬರಿದಾದ ಕೆರೆಗಳಿಗೆ ಜೀವಜಲ ತುಂಬಿಸಲು ಈ ಬಾಗದಲ್ಲಿ ಅಂತರ್ಜಲ ಅಬಿವೃದ್ದಿಗೆ ಅತ್ಯಂತ ಪೂರಕವಾಗಿ ನಾವು ಕೂಡ ಯಶಸ್ವಿ ಪೈಪುಲೈನ್ ಕಾಮಗಾರಿಗೆ ಶ್ರಮಿಸಿದ್ದೆವೆ .
ನಮ್ಮ ಪರಿಶ್ರಮದಿಂದ ತಾಲ್ಲೂಕಿನ ಗುರುಸಿದ್ದಪುರ ಮತ್ತು ಮಾಗಡಿ ಇನ್ನಿತರೆ ನಾಲ್ಕು ಗ್ರಾಮದ ಕೆರೆಗಳಿಗೆ ನೀರುಣಿಸುವುದು ಒಂದು ಸವಾಲಾಗಿತ್ತು ಅರಣ್ಯ ಪ್ರದೇಶದಲ್ಲಿ ಪೈಪ್ಲೈನ್ ನಿರ್ಮಾಣ ಮಾಡಲು ಅಧಿಕಾರಿಗಳಿಂದ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ರವಾನಿಸಿದ ಹಿನ್ನಲೆಯಲ್ಲಿ ಅನುಮತಿ ದೊರೆತು ಇದೀಗ ಪೈಪು ಲೈನ್ ಯಶಸ್ವಿಯಾಗಿ ಆಳವಡಿಸಿ ಇದೀಗ ಕೆರೆ ತುಂಬಿವೆ ತಾಲ್ಲೂಕಿನ 57 ಕೆರೆ ತುಂಬಿಸಿದ ಹಿನ್ನಲೆಯಲ್ಲಿ ಭಾಗಿನ ಅರ್ಪಣೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಲು ಶ್ರಮಿಸಿದ ಅಂದಿನ ಮಾಜಿ ಮುಖ್ಯಮಂತ್ರಿಗಳು .ಕ್ಷೇತ್ರದ ಮಾಜಿ ಶಾಸಕರುಗಳು ರೈತರು. ಹೋರಾಟಗಾರರು ಎಲ್ಲಾ ವರ್ಗದ ಜನರ ಸಹಕಾರದೊಂದಿಗೆ ಬರುವ ನವೆಂಬರ 8 ರಂದು ಕೆರೆ ಭಾಗಿನ ಅರ್ಪಣೆ ಒಂದು ಐತಿಹಾಸಿಕ ನಿಲುವು ಅಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
,ಜಗಳೂರು ಕ್ಷೇತ್ರಕ್ಕೆ 57 ಕೆರೆ ನೀರು ತುಂಬಿಸುವ ಯೋಜನೆ ಯಶಸ್ವಿಗೆ ಶ್ರಮಿಸಿದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಸ್ಮರಿಸುವಂತ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಮಾಜಿ ಶಾಸಕರುಗಳಾದ ಎಸ್.ವಿ ರಾಮಚಂದ್ರಪ್ಪ.ಹೆಚ್ ಪಿ.ರಾಜೇಶ್ .ಟಿ.ಗುರುಸಿದ್ದನಗೌಡ್ರು. ನೀರಾವರಿ ಅಧಿಕಾರಿಗಳನ್ನು ಸನ್ಮಾನಿಸಿ ಭಾಗಿನ ಬಿಟ್ಟು ವೇದಿಕೆ ಕಾರ್ಯಕ್ರಮದಲ್ಲಿ ಗೌರವಿಸುವಂತ ವಿನೂತನ ಕಾರ್ಯಕ್ರಮಕ್ಕೆ ಸಿರಿಗೆರೆ ಶ್ರೀಗಳು ಆಧುನಿಕ ಭಗೀರಥ 57 ರ ಸಡಗರ ಸಂಭ್ರಮವನ್ನ ದಿನಾಂಕ 8_11_2026 ರಂದು ಗುರುಸಿದ್ದಪುರ ಗ್ರಾಮದ ಕೆರೆಗೆ ಭಾಗಿನ ಅರ್ಪಿಸಿ ನಂತರ ಶ್ರೀ ಚೌಡಮ್ಮ ದೇವಾಸ್ಥಾನದ ಸಮುದಾಯ ಭವನದಲ್ಲಿ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. 57 ಎತ್ತಿನ ಗಾಡಿ.57 ವಾದ್ಯಗಳ ತಾಳಮೇಳಗಳೊಂದಿಗೆ ಸಿರಿಗೆರೆ ಶ್ರೀಗಳ ಮೆರವಣಿಗೆ ಮೂಲಕ ಯಶಸ್ವಿ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಷಂಷೀರ್ ಆಹಮದ್. ಮುಖಂಡರಾದ ಪ್ರಕಾಶರೆಡ್ಡಿ.ನಿಂಗಪ್ಪ. ಕಾಂಗ್ರೆಸ್ ಮುಖಂಡರಾದ ಜಿ ಹೆಚ್. ಶಂಭುಲಿಂಗಪ್ಪ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್.
ಕಾಂಗ್ರೆಸ್ ಜಿಲ್ಲಾ ಕಾರ್ಯಧರ್ಶಿ ಪಲ್ಲಾಗಟ್ಟೆ ಶೇಖರಪ್ಪ .ಮರೆನಹಳ್ಳಿ ಶೇಖರಣ್ಣ ಸೇರಿದಂತೆ ಹಾಜುರಿದ್ದರು.
