ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಿ ಸ್ವಾಮಿ ಹಾಗೂ ಡಾ ಮಧು ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಾಯಕ ಸಮಾಜದವರಿಂದ ಚುನಾವಣೆ ಅಧಿಕಾರಿಗಳಿಗೆ ದೂರು ಜಗಳೂರು ತಾಲ್ಲೂಕಿನ ನಾಯಕ ಸಮಾಜದವರು ಯಾರು ಬುಡಕಟ್ಟು ನಾಯಕ ಸಮಾಜದವರಲ್ಲ ಇವರು ಒಬಿಸಿ ಪಟ್ಟಿಗೆ ಸೇರಿದವರು ಎಂದು ಸಮಾಜವನ್ನ ದಿಕ್ಕತಪ್ಪಿಸುವಂತ ಹೇಳಿಕೆಯೊಂದಿಗೆ ಮೊನ್ನೆ ದಾವಣಗೆರೆ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ನಾಯಕ ಸಮಾಜಕ್ಕೆ ದಕ್ಕೆ ತರುವಂತ ಹೇಳಿಕೆ ನೀಡಿರುವ ಸ್ವಾಮಿಯವರು ನಮ್ಮ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿ ಸಮಾಜವನ್ನ ಘಾಸಿಗೋಳಿಸುವಂತ ಹೇಳಿಕೆ ಸರಿಯಲ್ಲ.ಇವರಿಗೆ ಕಾನೂನು ಕ್ರಮ ಜರುಗಿಸಿ. ಭಾನುವಾರ ತಾಲ್ಲೂಕು ನಾಯಕರ ಸಂಘದ ಪದಾಧಿಕಾರಿಗಳ ವತಿಯಿಂದ ತಾಲ್ಲೂಕು ಕಛೇರಿಯಲ್ಲಿ ಚುನಾವಣೆ ಅಧಿಕಾರಿ ಎಸ್ ರವಿಯವರಿಗೆ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ಜಿ ಸಂತೋಷಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಮೂಲ ಎಸ್ಟಿ ಪರಿಶಿಷ್ಟ ಪಂಗಡದ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆಯಲ್ಲಿ ಸ್ವರ್ಧಿಸಿರುವ ಅಭ್ಯರ್ಥಿಗಳಿಗೆ ಹಾಗೂ ಜಗಳೂರಿನ ನಾಯಕ ಸಮುದಾಯಕ್ಕೆ ದಕ್ಕೆ ತರುವಂತ ಹೆಳಿಕೆ ನೀಡಿರುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲರಾದ‌ ಮರೆನಹಳ್ಳಿ ಬಸವರಾಜ್ ಹೇಳಿದರು. ನಮ್ಮ ಮೂಲ ಸಮಾಜದ ನಾಮಗಳು ಮತ್ತು ಉಪನಾಮಗಳು ವಿವಿಧ ಹೆಸರುಗಳಿಂದ ಕರೆಯಲಾಗಿರುವ ನಾಯಕ .ಮ್ಯಾಸನಾಯಕ.ಊರುನಾಯಕ ವಾಲ್ಮೀಕಿ ನಾವು ಮೂಲ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಆದರೆ ನಮಗೆ ಮತ್ತು ನಮ್ಮ ಸಮಾಜಕ್ಕೆ ದಕ್ಕೆ ತರುವಂತ ಪತ್ರಿಕೆ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷೇತರ ಅಭ್ಯರ್ಥಿ ಜಿ ಸ್ವಾಮಿ ಮತ್ತು ಡಾ ಮಧು ಇವರ ವಿರುದ್ದ ತಾಲ್ಲೂಕು ದಂಡಾಧಿಕಾರಿಗಳು ಚುನಾವಣೆ ಅಧಿಕಾರಿ ಎಸ್ ರವಿಯವರು ಕಾನೂನು ಕ್ರಮಜರುಗಿಸುವಂತೆ ಮನವಿ ಸಲ್ಲಿಸಿದರು ‌ಈ ಸಂದರ್ಭದಲ್ಲಿ ಕಾರ್ಯಧರ್ಶಿ ತಿಪ್ಪೇಸ್ವಾಮಿ. ಅಧ್ಯಕ್ಷರಾದ ಬಡಪ್ಪ.ವಕೀಲರಾದ ಸಣ್ಣ ಒಬಯ್ಯ.ರೇವಣ್ಣ .ನಾಯಕ ಸಂಘದ ಮಾಜಿ ಕಾರ್ಯಧರ್ಶಿ ಲೋಕಣ್ಣ.ನಿಂಗನಹಳ್ಳಿ ಕೃಷ್ಣ ಮೂರ್ತಿ.ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!