ಶುಕ್ರದೆಸೆ ನ್ಯೂಸ್:- ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ವಾಸಿಸುವ ನಾಯಕ ಪಂಗಡದ ಮ್ಯಾಸ ನಾಯಕರಿಗೆ ಮೋಸ ಮಾಡುವ ಉದ್ದೇಶದಿಂದ ಹಾಗೂ ಮೋಸದ ಮೂಲಕ ಮತ ಪಡೆಯುವ ದುರದ್ದೆಶದಿಂದ ಎಲ್ಲಾ ನಾಯಕರು ಒಂದೇ ಎಂಬ ಭಾವನೆಯನ್ನು ಸೃಷ್ಠಿ ಮಾಡಿ ಜಾತಿ ಮತ್ತು ಪಂಗಡ ಆಧಾರಿತ, ಸುಳ್ಳು ಹೇಳಿಕೆಯ ಬೆದರಿಕೆ ಮೂಲಕ ಮತವನ್ನು ಕೇಳಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವ 97-ಮೊಳಕಾಲ್ಮೂರು(ಪರಿಶಿಷ್ಟ ಪಂಗಡ) ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಠ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಎನ್ ವೈ ಗೋಪಾಲಕೃಷ್ಣ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.
ಎಂದು ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂಘದ ರಾಜ್ಯಾಧ್ಯಕ್ಷ ದೊಡ್ಡಮನಿ ಪ್ರಸಾದ್ ತಿಳಿಸಿದ್ದಾರೆ. ೦
*,
, ಚಿತ್ರದುರ್ಗ ಜಿಲ್ಲೆ 97-ಮೊಳಕಾಲ್ಮೂರು (ಪರಿಶಿಷ್ಟ ಪಂಗಡ) ಮೀಸಲು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಾಗಸಮುದ್ರ, ಹುಚ್ಚಂಗಿದುರ್ಗ, ಕಾಟನಾಯಕನಹಳ್ಳಿ, ಮೇಗಲಹಟ್ಟಿ ಗ್ರಾಮಗಳಲ್ಲಿ ದಿನಾಂಕ:24-04-2023 ರಂದು ಸೋಮವಾರ ಹಮ್ಮಿಕೊಂಡಿರುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎನ್ ವೈ ಗೋಪಾಲಕೃಷ್ಣರವರು ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಮಾತನಾಡಿರುತ್ತಾರೆ..
”“ಈಗ ನಮ್ಮಲ್ಲಿ ಇಲ್ಲಿ ನಾಳೆ ಬರ್ತಾರೆ ಮ್ಯಾಸ ನಾಯಕರು ಉರು ನಾಯಕರು ಅಂತ ತರ್ತಾರೆ, ಅದು ಯಾವುದಕ್ಕು ಇಲ್ಲಿ ನಿಮಗೆ ಕೈ ಎತ್ತಿ ಮುಗಿತಿನಿ ಇಂತ ದರಿದ್ರ ಬುದ್ದಿಗಳು ತರಬಾರದು ಇವೆಲ್ಲ, ಒಳ್ಳೆಯದು ಅಲ್ಲ. ಯಾಕಂದ್ರೆ ಗೌರ್ನಮೆಂಟ್ ಆಫ್ ಇಂಡಿಯಾ ಸ್ಕಿಮ್ ನಲ್ಲಿ ಬರ್ತಿದ್ರಲ್ಲ, ನಮ್ಮ ಭಕ್ತರಾಮೆಗೌಡ್ರ ಹೇಳ್ತಾ ಇದ್ರು ನಾವು ಹೇಳಬಾರದು. ಹಿಗಾಗಿ ನಾನು ಹೇಳ್ತಕ್ಕಂತದ್ದು ಎನಂದ್ರೆ ಬಾರಿ ತಪ್ಪು ಇದು ಎಲ್ಲಾ. ಈಗಾಗಲೇ ಮ್ಯಾಸ ನಾಯಕರು, ನಾವು ಮ್ಯಾಸ ನಾಯಕರು ಮ್ಯಾಸ ನಾಯಕರು ಅಂತ ಹೇಳಿದ್ದರಿಂದ ಯಾರೋ ಒಬ್ರೂ ಹೋಗಿ ಬಿಟ್ಟು ಆಗ್ಲೆ ಎಸ್,ಎಲ್.ಪಿ ಹಾಕಿದ್ದಾರಂತೆ ಹೈಕೋರ್ಟ್ ನಲ್ಲಿ , ಸುಪ್ರಿಂಕೋರ್ಟ್ ನಲ್ಲಿ ಕೂಡ ಎಸ್.ಎಲ್.ಪಿ ಹಾಕಿದ್ದಾರೆ, ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬರ್ತಕ್ಕಂತಹ ಯಾರೂ ಕೂಡ ನಾಯಕರು ಮೀಸಲು ನಾಯಕರು ಅಂತ ಹೇಳಿ ಬಿಟ್ಟು ಈ ತರ ಮಾಡಿದ್ದಾರೆ. ಎಲ್ಲೆಲ್ಲಿ ಮ್ಯಾಸ ನಾಯಕರಿಗೆ ನೀವು ಸರ್ಟಿಪಿಕೆಟ್ ಕಟ್ಟಿದ್ದಿರಿ ಅದನ್ನೆಲ್ಲ ವಿಡ್ರಾ ಮಾಡಬೇಕು.””” ಎಂದು ಮತ ಬ್ಯಾಂಕ್ ಪಡೆಯಲು ಜನರಿಗೆ ಸುಳ್ಳು ಹೇಳಿ ಸಮಾಜವನ್ನ ದಿಕ್ಕತಪ್ಪಿಸುವಂತ ಹೇಳಿಕೆ ಸರಿಯಲ್ಲ ಎಂದು ಸಮಾಜದ ಮುಖಂಡರಿಂದ ಕರ್ನಾಟಕ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. . ಮ್ಯಾಸ ನಾಯಕರು ನನಗೆ ಮತ ನೀಡದಿದ್ದರೆ ಮೀಸಲಾತಿಯಿಂದ ನಿಮ್ಮನ್ನು ಕೋರ್ಟ್ ಮೂಲಕ ತೆಗೆಸಿಬಿಡುತ್ತೇನೆ ಎಂದು ಸಾರ್ವಜನಿಕವಾಗಿ ಎನ್ ವೈ ಗೋಪಾಲಕೃಷ್ಣ ಧಮಿಕಿ ಹಾಕಿರುವುದು ಇವರ ಮಾತುಗಳಲ್ಲಿ ಕಂಡುಬರುತ್ತದೆ. ಮತ್ತು ಪತ್ರಿಕಾ ಸುದ್ದಿಗಳನ್ನು N Y Goplakrishna Followers facebook ಖಾತೆಯಲ್ಲಿ ಅಪ್‌ಲೋಡ್ ಮಾಡಿರುತ್ತಾರೆ. ಸಮಾಜಕ್ಕೆ ದೊಡ್ಡ ದಕ್ಕೆ ತಂದಿರುತ್ತಾರೆ.ವಿಡಿಯೋ ಮತ್ತು ಪತ್ರಿಕಾ ಸುದ್ದಿಗಳ ಪ್ರತಿಗಳನ್ನು ಈ ದೂರು ಜೊತೆ ಸಲ್ಲಿಸಿರುತ್ತೇವೆ.
ಎಂದು ದೂರುದಾರರಾದ ಚಂದ್ರಣ್ಣ ತಿಳಿಸಿದ್ದಾರೆ.
ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ವಾಸಿಸುವ ನಾಯಕ ಪಂಗಡದ ಮ್ಯಾಸ ನಾಯಕರ ಸಂವಿಧಾನ ಬದ್ದ ಹಕ್ಕುಗಳನ್ನು ಹರಣ ಮಾಡುವ ಕುತಂತ್ರದಿಂದ ಮ್ಯಾಸ ನಾಯಕ ಪಂಗಡದವರಿಗೆ ಮೋಸ ಮಾಡುವ ಉದ್ದೇಶದಿಂದ ಹಾಗೂ ಮೋಸದ ಮೂಲಕ ಮ್ಯಾಸ ನಾಯಕರ ಮತ ಪಡೆಯಲು ಎಲ್ಲಾ ನಾಯಕರು ಒಂದೇ ಎಂಬ ಭವನೆಯನ್ನು ಸೃಷ್ಠಿ ಮಾಡಿ ಜಾತಿ ಮತ್ತು ಪಂಗಡ ಆಧಾರಿತ, ಸುಳ್ಳು ಹೇಳಿಕೆಯ ಬೆದರಿಕೆ ಮೂಲಕ ಮನವಿಯನ್ನು ಮಾಡಿ ಮತವನ್ನು ಕೇಳಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುತ್ತಾರೆ. ಇದೀಗ Model Code of conduct Chapter iv, 4.4 B(ii) The Representation of rhe People Act 1951, Section 123(3), Indian Penal Code Section 171(c)2(a), 171(D),171(F), 171(G) ಕಾಯ್ದೆಯನ್ನು ಉಲ್ಲಂಘನೆಯನ್ನು ಮಾಡಿರುತ್ತಾರೆ. ಕರ್ನಾಟಕದಲ್ಲಿ ಎರಡು ರೀತಿಯ ನಾಯಕ ಜನಾಂಗಗಳು ಇರುತ್ತವೆ. ಒಂದು “ಬುಡಕಟ್ಟು ನಾಯಕ ಅಥವಾ ಮ್ಯಾಸ ನಾಯಕ”, ಇನ್ನೊಂದು “ಜಾತಿ ನಾಯಕ ಅಥವಾ ತಳವಾರ ಅಥವಾ ಊರು ನಾಯಕ” ಎಂದು ಇರುತ್ತವೆ. ಈ ಎರಡು ಜನಾಂಗಗಳು ಬೇರೆ ಬೇರೆ ಇರುತ್ತವೆ. ಹಿಗಿರುವಾಗ ಭಾವನಾತ್ಮಕವಾಗಿ, ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ದುರುದ್ದೇಶದಿಂದ ಎಲ್ಲಾ ನಾಯಕ ಜನಾಂಗ ಒಂದೇ ಎಂದು ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸಿರುವ ಷಡ್ಯಂತ್ರ.
ಆದ್ದರಿಂದ ಭಾರತ ಚುನಾವಣಾ ಆಯೋಗವು ಈ ಕೂಡಲೇ ಭಾರತೀಯ ರಾಷ್ಠ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಎನ್ ವೈ ಗೋಪಾಲಕೃಷ್ಣ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಈ ಕೂಡಲೇ ಚುನಾವಣಾ ಕಣದಿಂದ ಅನರ್ಹಗೊಳಿಸಲು ದೂರು ನೀಡಿದ್ದಾರೆ