ಶುಕ್ರದೆಸೆ ಸುದ್ದಿಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ, 2023ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ
ದಾವಣಗೆರೆ :ಜಿಲ್ಲೆಯಾದ್ಯಂತ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ 10ರಂದು ಬುಧವಾರ ಮತದಾನ ನಡೆಯಲಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮತದಾರರನ್ನು ಆಕರ್ಷಿಸಲು ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಕರೆಯುತ್ತಿವೆ.
ಪ್ರಜಾಪ್ರಭುತ್ವದ ಹಬ್ಬ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ವಿಶೇಷ ವಿನ್ಯಾಸದಲ್ಲಿ ವಿಶೇಷಚೇತನರ ಮತಗಟ್ಟೆ, ಸಖಿ ಮತಗಟ್ಟೆ, ಯುವ ಮತಗಟ್ಟೆ, ಸಾಂಪ್ರಾದಾಯಿಕ ಮತಗಟ್ಟೆ ಹಾಗೂ ವಿಷಯಾಧಾರಿತ ಮತಗಟ್ಟೆಗಳು ಸಿಂಗಾರಗೊಂಡು ಕಂಗೊಳಿಸುತ್ತಿವೆ.
ವಿಶೇಷಚೇತನರ ಮತಗಟ್ಟೆ: ವಿಶೇಷಚೇತನರ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅವರಿಗಾಗಿ ವಿಶೇಷಚೇತನರ ಮತಗಟ್ಟೆ ಸ್ಥಾಪಿಸಲಾಗಿದೆ. ವಿಶೇಷಚೇತನರ ಮತಗಟ್ಟೆಗಳನ್ನು ಆಕರ್ಷಣೀಯವಾಗಿ ಸಿಂಗರಿಸಲಾಗಿದೆ. ವಿಶೇಷ ಚೇತನರ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಯಿಂದ ಎಲ್ಲಾ ಸಿಬ್ಬಂದಿಗಳು ವಿಶೇಷಚೇತನರಾಗಿರುತ್ತಾರೆ. ಇವರಿಂದಲೇ ಮತಗಟ್ಟೆಯನ್ನು ನಿರ್ವಹಿಸಲಾಗುತ್ತದೆ.
ವಿವರ : 103-ಜಗಳೂರು ವಿಧಾನಸಭಾ ಕ್ಷೇತ್ರ: ಮತಗಟ್ಟೆ ಸಂಖ್ಯೆ-180, ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಪ್ರೌಡಶಾಲೆ ಹೊರಕೆರೆ, ಜಗಳೂರು ಟೌನ್. ಪುರುಷ 243, ಮಹಿಳೆಯರು 231, ಸೇರಿ 474 ಮತದಾರರು.
105-ಹರಿಹರ ವಿಧಾನಸಭಾ ಕ್ಷೇತ್ರ: ಮತಗಟ್ಟೆ ಸಂಖ್ಯೆ 12 ಕೊಂಡಜ್ಜಿ ಗ್ರಾಮ ಪಂಚಾಯಿತಿ ಕಚೇರಿ ಪುರುಷ 552, ಮಹಿಳೆ 541 ಸೇರಿ 1093 ಮತದಾರರು.
106-ದಾವಣಗೆರೆ ಉತ್ತರ : ಮತಗಟ್ಟೆ ಸಂಖ್ಯೆ 135 ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕೊಠಡಿ 1 ಪುರುಷ 299, ಮಹಿಳೆ 284 ಸೇರಿ 583 ಮತದಾರರು.
ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ
107-ದಾವಣಗೆರೆ ದಕ್ಷಿಣ : ಮತಗಟ್ಟೆ ಸಂಖ್ಯೆ 130 ಪಿ.ಬಿ.ರಸ್ತೆಯಲ್ಲಿರುವ ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಏಜ್ಯುಕೇಶನಲ್ ಟ್ರಸ್ಟ್ ಕೊಠಡಿ 01 ಪುರುಷ 381, ಮಹಿಳೆ 348, ಒಟ್ಟು 729 ಇದ್ದಾರೆ.
108-ಮಾಯಕೊಂಡ :ಮತಗಟ್ಟೆ ಸಂಖ್ಯೆ 61 ಆನಗೋಡಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 2 ಪುರುಷ 607, ಮಹಿಳೆ 604 ಸೇರಿ 1211 ಮತದಾರರು.
109-ಚನ್ನಗಿರಿ: ಮತಗಟ್ಟೆ ಕೇಂದ್ರದ ಸಂಖ್ಯೆ 36 ಸಂತೇಬೆನ್ನೂರಿನ ಎಸ್.ಜೆ.ವಿ.ಪಿ ಪಿಯು ಕಾಲೇಜು ಕೊಠಡಿ ಸಂಖ್ಯೆ 2 ಪುರುಷ 418, ಮಹಿಳೆ 405 ಸೇರಿ 823 ಮತದಾರರು.
110-ಹೊನ್ನಾಳಿ :ಮತಗಟ್ಟೆ ಸಂಖ್ಯೆ 74 ಹೊನ್ನಾಳಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪುರುಷ 267, ಮಹಿಳೆ 297 ಸೇರಿ 564. ಮತದಾರರು.
ಸಖಿ ಮತಗಟ್ಟೆಗಳ ವಿವರ : ಮಹಿಳಾ ಮತದಾರಿಗಾಗಿ ತೆರೆಯಲಾಗಿರುವ ಸಖಿ ಮತಗಟ್ಟೆಗಳು ತಳಿರು-ತೋರಣ, ಪಿಂಕ್ ಬಲೂನ್‍ಗಳ ಅಲಂಕಾರದೊಂದಿಗೆ ಸಿಂಗಾರಗೊಂಡು ಮತದಾರರನ್ನು ಸ್ವಾಗತಿಸುತ್ತಿವೆ. ಸಖಿ ಮತಗಟ್ಟೆಗಳ ವಿವರ ಇಂತಿದೆ.
ಜಗಳೂರು : ಮತಗಟ್ಟೆ ಸಂಖ್ಯೆ 194 ಜಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ 2 ಪುರುಷ 586, ಮಹಿಳೆ 627 ಸೇರಿ 1213 ಮತದಾರರು. ಹರಿಹರ; ಮತಗಟ್ಟೆ ಸಂಖ್ಯೆ 111 ಬೆಳ್ಳೂಡಿ ಪಟೇಲ್ ಗುರುಬಸಪ್ಪ ಪ್ರೌಢಶಾಲೆ ರೂಂ ನಂ 1 ಪುರುಷ 415, ಮಹಿಳೆ 380 ಸೇರಿ 795 ಮತದಾರರು.
ದಾವಣಗೆರೆ ಉತ್ತರ: ಮತಗಟ್ಟೆ ಸಂಖ್ಯೆ 136 ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ರೂಂ ನಂ 2 ಪುರುಷ 445, ಮಹಿಳೆ 501 ಸೇರಿ 963 ಮತದಾರರು.
ದಾವಣಗೆರೆ ದಕ್ಷಿಣ: ಕ್ಷೇತ್ರದ ಮತಗಟ್ಟೆ ಸಂಖ್ಯೆ 131 ಪಿ.ಬಿ ರಸ್ತೆಯ ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಶಿಕ್ಷಣ ಟ್ರಸ್ಟ್ ದಾವಣಗೆರೆ(ಡಿ.ಆರ್.ಆರ್) ರೂಂ ನಂ-2 ಪುರುಷ 378, ಮಹಿಳೆ 391 ಸೇರಿ 770 ಮತದಾರರು.
ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ
ಮಾಯಕೊಂಡ: ಮತಗಟ್ಟೆ ಸಂಖ್ಯೆ 60 ಆನಗೋಡು ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 571, ಮಹಿಳೆ 609 ಒಳಗೊಂಡಂತೆ ಒಟ್ಟು 1180 ಮತದಾರರು.
ಚನ್ನಗಿರಿ: ಮತಗಟ್ಟೆ ಸಂಖ್ಯೆ 34 ಸಂತೆಬೆನ್ನೂರು ಸರ್ಕಾರಿ ಪಿ.ಯು ಕಾಲೇಜು ರೂಂ ನಂ.4 ರಲ್ಲಿ ಪುರುಷ 351, ಮಹಿಳೆ 383 ಸೇರಿ 734 ಮತದಾರರು. ಹೊನ್ನಾಳಿ; ಮತಗಟ್ಟೆ ಸಂಖ್ಯೆ 84 ಹೊನ್ನಾಳಿ ತಾಲ್ಲೂಕು ಕಚೇರಿ ಇಲ್ಲಿ ಪುರುಷರು 292, ಮಹಿಳೆಯರು 292 ಒಳಗೊಂಡಂತೆ ಒಟ್ಟು 584 ಮತದಾರರು ಇದ್ದಾರೆ.
ಯುವ ಮತಗಟ್ಟೆ ವಿವರ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ-132, ಪಿ.ಬಿ ರಸ್ತೆಯ ಧರ್ಮ ಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಶಿಕ್ಷಣ ಟ್ರಸ್ಟ್ ದಾವಣಗೆರೆ(ಡಿ.ಆರ್.ಆರ್) ರೂಂ ನಂ-3 ರಲ್ಲಿ ಪುರುಷರು 611, ಮಹಿಳೆಯರು 576 ಒಳಗೊಂಡಂತೆ ಒಟ್ಟು 1187 ಮತದಾರರು ಇದ್ದಾರೆ.
ಪಾರಂಪರಿಕ ಮತಗಟ್ಟೆ ವಿವರ : ಹೊನ್ನಾಳಿ; ಮತಗಟ್ಟೆ ಸಂಖ್ಯೆ 92 ಹೊನ್ನಾಳಿ ಆಂಜನೇಯಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಪುರುಷ 301, ಮಹಿಳೆಯರು 272 ಸೇರಿ ಒಟ್ಟು 573 ಮತದಾರರು ಇದ್ದಾರೆ.
ವಿಷಯಾಧಾರಿತ ಮತಗಟ್ಟೆ ವಿವರ : ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 375 ಚನ್ನಗಿರಿಯ ಪಾಂಡೋಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ 8 ರಲ್ಲಿ ಪುರುಷ 375, ಮಹಿಳೆ 318 ಸೇರಿ 693 ಮತದಾರರು. ಹರಿಹರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 112 ಬೆಳ್ಳೂಡಿ ಪಟೇಲ್ ಗುರುಬಸಪ್ಪ ಪ್ರೌಢ ಶಾಲೆ ರೂಂ ನಂ 2 ರಲ್ಲಿ ಪುರುಷರು 348, ಮಹಿಳೆಯರು 352 ಸೇರಿದಂತೆ 700 ಮತದಾರರು ಇದ್ದಾರೆ.
ಸಖಿ, ವಿಶೇಷಚೇತನರ ಮತಗಟ್ಟೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಭೇಟಿ; ಚನ್ನಗಿರಿ ಕ್ಷೇತ್ರದ ಸಂತೇಬೆನ್ನೂರಿನ ಮತಗಟ್ಟೆ ಸಂಖ್ಯೆ 34 ರಲ್ಲಿ ಸಖಿ ಮತಗಟ್ಟೆ ಮತ್ತು 36 ರಲ್ಲಿ ವಿಶೇಷಚೇತನರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ಮೇ 9 ರಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು ಎಲ್ಲಾ ಮಹಿಳಾ ಸಿಬ್ಬಂದಿಗಳಿಂದಲೇ ಸಖಿ ಮತಗಟ್ಟೆಯನ್ನು ನಿರ್ವಹಿಸಲಾಗುತ್ತಿದೆ. ಹಾಗೂ ವಿಶೇಷ ಚೇತನರ ಮತಗಟ್ಟೆಯಲ್ಲಿ ವಿಶೇಷಚೇತನ ಸಿಬ್ಬಂದಿಯಿಂದಲೇ ನಿರ್ವಹಿಸಲಾಗುತ್ತಿದ್ದು ಇವರ ಸಹಾಯಕ್ಕೆ ಬೇಕಾದ ಸಿಬ್ಬಂದಿಯ ನೆರವನ್ನು ನೀಡಲು ಸೂಚನೆ ನೀಡಿದರು.
ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ
ಸಖಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸುರೇಖಾ, ಅಶ್ವಿನಿ, ವೀಣಾ, ಮಂಜುಳಾ, ವಿಶೇಷಚೇತನರ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಉಮೇಶ್, ಪ್ರಾಣೇಶ್, ಶೋಭಾ ಜಿ.ಕೆ, ಸರೋಜಮ್ಮ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಹಾಗೂ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು.