ಶುಕ್ರದೆಸೆ ನ್ಯೂಸ್:- ಜಗಳೂರು : ಸುದ್ದಿ ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆ, 2023ಆಕರ್ಷಣೆಯಿಂದ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು, ಸಖಿ, ವಿಶೇಷಚೇತನ,ವಿಷಯಾಧಾರಿತ ಮತಗಟ್ಟೆಗಳಿಂದ ಆಕರ್ಷಣೆಯಿಂದ ಮತದಾರರುನ್ನು ಕೈ ಬೀಸಿ ಕರೆಯುತ್ತಿವೆ.
ಜಗಳೂರು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ 10ರಂದು ಬುಧವಾರ ಮತದಾನ ನಡೆಯಲಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮತದಾರರನ್ನು ಆಕರ್ಷಿಸಲು ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಕರೆಯುತ್ತಿವೆ.
ಪ್ರಜಾಪ್ರಭುತ್ವದ ಹಬ್ಬ ಮತದಾನಕ್ಕೆ ಕ್ಷಣಗಣನೆ ಆರಂಭವಾಗಲಿದ್ದು, ಕ್ಷೇತ್ರದಲ್ಲಿ ವಿಶೇಷ ವಿನ್ಯಾಸದಲ್ಲಿ ಜಗಳೂರು ಪಟ್ಟಣದ ಸರ್ಕಾರಿ ಸಂತೆಪೇಟೆ ಶಾಲೆ ವಿಶೇಷಚೇತನರ ಮತಗಟ್ಟೆ, ಕಂಗೋಳಿಸುತ್ತಿದೆ. ವಿವಿಧ ಮತಗಟ್ಟೆಗಳಾದ ಸಖಿ ಮತಗಟ್ಟೆ, ಯುವ ಮತಗಟ್ಟೆ, ಸಾಂಪ್ರಾದಾಯಿಕ ಮತಗಟ್ಟೆ ಹಾಗೂ ವಿಷಯಾಧಾರಿತ ಮತಗಟ್ಟೆಗಳು ಸಿಂಗಾರಗೊಂಡು ಕಂಗೊಳಿಸುತ್ತಿವೆ.
ವಿಶೇಷಚೇತನರ ಮತಗಟ್ಟೆ: ವಿಶೇಷಚೇತನರ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅವರಿಗಾಗಿ ವಿಶೇಷಚೇತನರ ಮತಗಟ್ಟೆ ಸ್ಥಾಪಿಸಲಾಗಿದೆ. ವಿಶೇಷಚೇತನರ ಮತಗಟ್ಟೆಗಳನ್ನು ಆಕರ್ಷಣೀಯವಾಗಿ ಸಿಂಗರಿಸಲಾಗಿದೆ. ವಿಶೇಷ ಚೇತನರ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಯಿಂದ ಎಲ್ಲಾ ಸಿಬ್ಬಂದಿಗಳು ವಿಶೇಷಚೇತನರಾಗಿರುತ್ತಾರೆ. ಇವರಿಂದಲೇ ಮತಗಟ್ಟೆಯನ್ನು ನಿರ್ವಹಿಸಲಾಗುತ್ತದೆ.
: 103-ಜಗಳೂರು ವಿಧಾನಸಭಾ ಕ್ಷೇತ್ರ: ಮತಗಟ್ಟೆ ಸಂಖ್ಯೆ-180, ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಪ್ರೌಡಶಾಲೆ ಹೊರಕೆರೆ, ಜಗಳೂರು ಟೌನ್. ಪುರುಷ 243, ಮಹಿಳೆಯರು 231, ಸೇರಿ 474 ಮತದಾರರು ಸಂಖ್ಯೆ 194 ಜಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ 2 ಪುರುಷ 586, ಮಹಿಳೆ 627 ಸೇರಿ 1213 ಮತದಾರರುನ್ನ ಮತಗಟ್ಟೆಯತ್ತ ಗಮನ ಸೆಳೆಯಲು ವಿಶೇಷಚೇತನ ಪಿಕ್ ಬೂತ್ ಸಖಿ ಬೂತ ವಿವಿಧ ವಿಷಯಾಧರಿತ ಬೂತಗಳಿಂದ ಮತದಾರರುನ್ನು ಮತಗಟ್ಟೆಯತ್ತ ಸೆಳೆಯುವಂತ ಈ ಒಂದು ಮತಗಟ್ಟೆಗಳು ಅತ್ಯಂತ ಸಹಕಾರಿಯಾಗಿವೆ ಎಂದು ಚುನಾವಣೆ ಅಧಿಕಾರಿ ಎಸ್ ರವಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ಜಿ ಸಂತೋಷಕುಮಾರ್ ಹಾಜರಿದ್ದರು