ಶುಕ್ರದೆಸೆ ಸುದ್ದಿ .ಬೆಣ್ಣೆ ನಗರಿ ಪಕ್ಷೇತರರಿಗೆ ಡಿಮಾಂಡ್ ರಾಷ್ಟ್ರೀಯ ಪಕ್ಷದ ನಾಯಕರು ಕರೆ ಮೂಲಕ ಗಾಳ ಹಾಕುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಮೇರೆಗೆ 2023ಬೆಣ್ಣೆ ನಗರಿಯ ಪಕ್ಷೇತರರಿಗೆ ಟವೆಲ್ ಹಾಸುತ್ತಿರುವ ರಾಷ್ಟ್ರೀಯ ನಾಯಕರು
ದಾವಣಗೆರೆ : ಕೆಲ ತಿಂಗಳ ಹಿಂದೆ ಟಿಕೆಟ್‌ಗಾಗಿ ರಾಷ್ಟ್ರೀಯ ನಾಯಕರ ಬೆನ್ನು ಬಿದ್ದಿದ್ದ ಟಿಕೆಟ್ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು,ಇದೀಗ ಗೆಲುವಿನ ಹೊಸ್ತಿಲಲ್ಲಿರುವ ಪಕ್ಷೇತರರಿಗೆ ಸಖತ್ ಡಿಮ್ಯಾಂಡ್ ಬಂದಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ತನ್ನದೆಯಾದ ವೈಯಕ್ತಿಕ ವರ್ಚಸ್ ನ ಆಧಾರದ ಮೇಲೆ ಗೆಲ್ಲುವ ವಿಶ್ವಾಸವನ್ನು ಎಲ್ಲೆಡೆ ಸುದ್ದಿ ವ್ಯಕ್ತಪಡಿಸಿದ್ದು, ಸರಕಾರದ ರಚನೆಗೆ ಈಗಾಗಲೇ ಪಕ್ಷೇತರರಿಗೆ ಗಾಳ ಹಾಕುತ್ತಿದ್ದಾರೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಈಗ ಪಕ್ಷೇತರರಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು ಸರ್ಕಾರದ ರಚನೆಯಾಗಿ ಡಿಮಾಡ್ ಬಂದಿದೆ, ಮೇಲಿಂದ ಮೇಲೆ ರಾಷ್ಟ್ರೀಯ ಪಕ್ಷಗಳ ನಾಯಕರಿಂದ ದೂರವಾಣಿ ಕರೆ ಬರುತ್ತಿವೆ ಎಂದು ಪಕ್ಷೇತರ ಅಭ್ಯರ್ಥಿಗಳ ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಚ್. ಪಿ. ರಾಜೇಶ್, ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಹರಪನಹಳ್ಳಿ ಎಂಪಿಪಿ ರವರ ಪುತ್ರಿ ಲತಾ ಮಲ್ಲಿಕಾರ್ಜುನ್ ಕಣಕ್ಕಿಳಿದಿದ್ದು, ಈ ಮೂವರು ಗೆಲ್ಲುವ ಕುದುರೆಯಾದ ಕಾರಣ ರಾಷ್ಟ್ರೀಯ ಪಕ್ಷಗಳ ನಾಯಕರು ನಾಮುಂದು, ತಾಮುಂದು ಎಂದು ದುಂಬಾಲು ಬೀಳುತ್ತಿದ್ದಾರೆ.
ಈ ಮೂವರು ಗೆಲ್ಲುವ ಕುದುರೆಗಳಾಗಿದ್ದು, ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸ್ಥಳೀಯ ಆಪ್ತರ ಮೂಲಕ ಈ ಮೂವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಜಯ ಗಳಿಸಿದರೆ ತಮ್ಮ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿದು ಬಂದಿದೆ
ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಆದ ಪ್ರಾಬಲ್ಯವಿದ್ದರೂ, ಸ್ವತಃ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಮಾಡಾಳ್ ಮಲ್ಲಿಕಾರ್ಜುನ ಪರ ಕ್ಯಾಂಪೇನ್ ನಡೆಸಿದ್ದರು. ಇನ್ನು ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಜೈಲು ಸೇರುತ್ತಿದ್ದಂತೆ ಎಲ್ಲವೂ ಉಲ್ಟಾ ಪಲ್ಟಾ ಆಯ್ತು. ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತು. ಮಾಡಾಳ್ ಮಲ್ಲಿಕಾರ್ಜುನ್ ಅವರಿಗಾದರೂ ಬಿಜೆಪಿ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದರೂ ಲಂಚದ ಹಣ ಪಡೆದ ಆರೋಪದಲ್ಲಿ ಜೈಲು ಸೇರಿದ್ದ ಕಾರಣ ಕೇಸರಿ ಪಡೆ ನಿರಾಕರಿಸಿತು. ಆ ಬಳಿಕ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಅನಿವಾರ್ಯವಾಗಿ ಪಕ್ಷೇತರನಾಗಿ ಕಣಕ್ಕಿಳಿದ್ದರು. ಇದಾದ ನಂತರ ಬಿಜೆಪಿ ಆರು ವರ್ಷಗಳ ಕಾಲ ಮಾಡಾಳ್ ಮಲ್ಲಿಕಾರ್ಜುನ್‌ರನ್ನು ಉಚ್ಚಾಟನೆ ಮಾಡಿತ್ತು.
ಅತಂತ್ರ ಸರಕಾರದ ಬಂದ್ರೆ ಬಿಜೆಪಿಯು ಅಧಿಕಾರ ಹಿಡಿಯಲು ಕೆಲ ಶಾಸಕರು ಬೇಕಾಗಬಹುದು ಎಂಬ ಲೆಕ್ಕಾಚಾರದಂತೆ ರಾಷ್ಟ್ರ ವರೀಷ್ಠರು ರಾಜ್ಯ ನಾಯಕರ ಮೇಲೆ ಒತ್ತಡ ಹೇರುವ ಮೂಲಕ ಪಕ್ಷೇತರರಿಗೆ ಕಾಯ್ದುರಿಸುವಂತೆ ಕರೆ ಮೂಲಕ ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡಿವೆ.. ಇನ್ನು ಕಾಂಗ್ರೆಸ್ ಸಮೀಕ್ಷೆಗಳ ಪ್ರಕಾರ ಅಧಿಕಾರ ಹಿಡಿಯುವ ಸನಿಹದಲ್ಲಿದೆ. ಈ ಕಾರಣಕ್ಕಾಗಿ ಮಾಡಾಳ್ ಮಲ್ಲಿಕಾರ್ಜುನ್, ಲತಾ ಮಲ್ಲಿಕಾರ್ಜುನ್ ಎಚ್. ಪಿ. ರಾಜೇಶ್ ಪರ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ.
ಜಗಳೂರಿನಿಂದ ಎಚ್. ಪಿ. ರಾಜೇಶ್ ಸ್ಪರ್ಧೆ ಬಯಸಿ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದರೆ ಕೊನೆ ಕ್ಷಣದಲ್ಲಿ ದೇವೇಂದ್ರಪ್ಪರಿಗೆ ಪಕ್ಷ ಟಿಕೆಟ್ ನೀಡಿತು. ಇದರಿಂದ ಬೇಸರ ವ್ಯಕ್ತಪಡಿಸಿ ಸ್ವಾಭಿಮಾನಿ ಹೋರಾಟಕ್ಕಿಳಿದು ತೆಂಗಿನ ಮರದ ಗುರುತಿಗೆ ಎಚ್. ಪಿ. ರಾಜೇಶ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಚುನಾವಣಾ ಪ್ರಚಾರದ ವೇಳೆ ಅಬ್ಬರದ ಪ್ರಚಾರದೊಂದಿಗೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿದ್ದರು. ಮತದಾರರ ಅನುಕಂಪ ಪುಲ್ ವರ್ಕೌಟ್ ಆಗಿತ್ತು ಜನರ ಪ್ರಿತಿ ವಿಶ್ವಾಸ ಗಳಿಸಿದ್ದರು . ಇನ್ನು ಮಾಜಿ ಶಾಸಕ ಎಚ್ ಪಿ ರಾಜೇಶ್ ಗೆ ಲಿಂಗಾಯತ ಸಮುದಾಯದ ಮುಖಂಡರು ಬಹಿರಂಗವಾಗಿ ಕೆಲವರು ಹೆಚ್ಚಿನ ಹಣಕಾಸಿನ ನೆರವಿನ ಮೂಲಕ ಪಂಡ್ ನೀಡಿ ರಾಜೇಶ್ ಗೆಲುವಿಗೆ ಬೆಂಬಲ ನೀಡಿ ಮತ ನೀಡಿದ್ದಾರೆ .ಅದರಲ್ಲೂ ಜಗಳೂರು ಕ್ಷೇತ್ರದ ಮಾಜಿ ಶಾಸಕ ಗುರುಸಿದ್ದನ ಗೌಡ್ರು ಮತ್ತು ಅವರ ಮಕ್ಕಳು ಬಹಿರಂಗವಾಗಿ ರಾಜೇಶ್ ಗೆಲುವಿಗೆ ಹಗಲಿರುಳು ಪ್ರಚಾರ ನಡೆಸಿ ರಾಜೇಶ್ ಗೆಲುವಿಗೆ ಶ್ರಮ ಹಾಕಿದ್ದಾರೆ ಇದೆಲ್ಲವನ್ನೂ ಗಮನಿಸಿರುವ ಕಾಂಗ್ರೆಸ್ ನಾಯಕರು, ಒಂದು ವೇಳೆ ರಾಜೇಶ್ ಗೆದ್ದರೆ ಪಕ್ಷಕ್ಕೆ ಮರಳಿ ಸೇರಿಸಿಕೊಂಡು ಬೆಂಬಲ ಪಡೆಯಲು ಯತ್ನ ಮುಂದುವರೆಸುವವರೇ . ಅಥವಾ ಈಗಾಗಲೇ ಬಿಜೆಪಿ ರಾಷ್ಟ್ರ ವರೀಷ್ಠರ ಕರೆ ಮೇರೆಗೆ ಗೆದ್ದರೆ ಬಿಜೆಪಿ ಸೇರ್ಪಡೆಯಾಗುವರೇ ಎಂಬುದು ಕ್ಷೇತ್ರದಲ್ಲಿ ಸಾರ್ವಜನಿಕರಲ್ಲಿ ಕೂತುಹಲ ಮೂಡಿಸಿದೆ. ಇನ್ನು ಹರಪನಹಳ್ಳಿ ಮಾಜಿ ಮಂತ್ರಿಗಳಾದ ಎಂ ಪಿ ಪಿ ರವರ ಪುತ್ರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ವರಿಷ್ಠರ ಬೆನ್ನು ಬಿದ್ದು ಪರಿ ಪರಿ ಬೇಡಿಕೊಂಡರು ಆದರೆ ಹರಪನಹಳ್ಳಿ ಸೀಡ್ಸ್ ಕಂಪನಿ ಮಾಲಿಕ ಕೊಟ್ರೇಶ್ ರವರಿಗೆ ಟಿಕೆಟ್ ನೀಡಿದರ ಫಲವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಮತದಾರರ ಗಮನ ಸೆಳೆದು ಬಾರಿ ಹೋರಾಟದ ಮೂಲಕ ಗೆಲುವು ನಿರೀಕ್ಷೆಯಿದೆ ಎಂಬ ಸುದ್ದಿಗಳು ಎಲ್ಲೆಡೆ ಲಭ್ಯವಾಗುತ್ತಿದ್ದಂತೆ ರಾಷ್ಟ್ರೀಯ ರಾಜ್ಯ ವರೀಷ್ಠರು ಅಯಾ ಪಕ್ಷದ ನಾಯಕರುಗಳು ಶೀಟುಗಳನ್ನು ಈಗೆಂದಲೇ ಕಾಯ್ದರಿಸಿಕೊಂಡು ಸರ್ಕಾರದ ರಚನೆಗಾಗಿ ಮುಂದಾಗಿದ್ದಾರೆ ಎಂಬ ಸುದ್ದಿಗಳು ಲಭ್ಯ ವಾಗಿವೆ.
ಒಟ್ಟಿನಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಸಾಕಷ್ಟು ಡಿಮ್ಯಾಂಡ್ ಇದ್ದು, ಈಗ ಪಕ್ಷೇತರರು ತಮ್ಮ ಅಸ್ತ್ರ ಬಿಡುಗಡೆ ಮಾಡುತ್ತಿದ್ದಾರೆ.