ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆ: ಪಲಿತಾಂಶ ಬೆಳಿಗ್ಗೆ ಶನಿವಾರ ದಿನಾಂಕ 13 ರಂದು ಹೊರಬಿಳಲಿದ್ದು ಮತದಾರರು ಯಾರಿಗೆ ಹೆಚ್ಚು ಮತ ನೀಡಿ ಹಣೆಬರಹವನ್ನೆ ಬದಲಾಯಿಸುವರು ಎಂಬುದೇ ಕೂತುಹಲಕಾರಿ ಮೂಡಿಸಿದೆ. . ಜಗಳೂರು ಕ್ಷೇತ್ರದ ಇತಿಹಾಸದಲ್ಲಿಯೆ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಶೇ 81.17 ರಷ್ಟು ಮತದಾನವಾಗಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. 2023 ರ ವಿಧಾನಸಭಾ ಚುನಾವಣೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಬಿರು ಬಿಸಿನಲ್ಲಿಯೇ ಶೇ 81.17 ರಷ್ಟು ಮತದಾನವಾಗಿರುವುದೆ ಒಂದು ದಾಖಲೆಯಾಗಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 192958 ಜನ ಮತದಾರರಿದ್ದು, 97690 ಪುರುಷ ಮತದಾರರು, 95257 ಮಹಿಳಾ ಮತದಾರರು, ಇತರೆ 11 ಮತದಾರರಿದ್ದಾರೆ. ಜಗಳೂರು ಕ್ಷೇತ್ರದಲ್ಲಿ ಲಿಂಗಾಯತರು: 39,000
ಎಸ್‍ಸಿ: 47,000
(ಲಂಬಾಣಿ-11,000, ಛಲವಾದಿ-4000, ಮಾದಿಗ ಸಮುದಾಯ-20,000, ಬೋವಿ-13,500)
ಎಸ್‍ಟಿ(ನಾಯಕ): 41,000
ಕುರುಬ: 12,000
ಮುಸ್ಲಿಂ: 18,600
ಉಪ್ಪಾರ: 3000
ಯಾದವ: 14,609
ರೆಡ್ಡಿ: 3000
ಸವಿತಾಸಮಾಜ: 2000.
ಮಡಿವಾಳ: 3000
ಇತರೆ:5000 ಮತದಾರರಿದ್ದು ಜಾತಿವಾರು ಮತದಾರರು ಯಾವ ಯಾವ ಪಕ್ಷಕ್ಕೆ ಯಾರಿಗೆ ಹೆಚ್ಚು ಮಣೆ ಹಾಕಿದ್ದಾರೆ ರಾಜ್ಯದ 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ! ಇಂದು ಶನಿವಾರ ಬೆಳಿಗ್ಗೆ ನಿರ್ಧಾರವಾಗಲಿದೆ. ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 (ಬುಧವಾರ) ಮತದಾನ ನಡೆದಿದ್ದು , 224 ವಿಧಾನಸಭಾ ಕ್ಷೇತಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ 2615 ಅಭ್ಯರ್ಥಿಗಳ ಭವಿಷ್ಯ ದಿನಾಂಕ 13 ರಂದು ಚುನಾವಣೆ ಪಲಿತಾಂಶ ಹೊರ ಬಿಳಲ್ಲಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಜಗಳೂರು ಕ್ಷೇತ್ರದಲ್ಲಿ ಬಿಜೆಪಿ.ಅಭ್ಯರ್ಥಿ ಶಾಸಕ ಎಸ್ ವಿ ರಾಮಚಂದ್ರ . ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ . ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಈ ಇಬ್ಬರ ಅಭ್ಯರ್ಥಿಗಳ ಮಧ್ಯೆ ಪಕ್ಷೇತರ ಅಭ್ಯರ್ಥಿ ರಾಜೇಶ್ ಜಿದ್ದಾಜಿದ್ದಿ ಪ್ರತಿಷ್ಠಿತವಾಗಿ ಬಾರಿ ಪೈಪೋಟಿ ಚುನಾವಣೆ ನಡೆದಿದ್ದು. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಪ್ರತಿಸ್ಪರ್ಧಿಗಳ ಹಣಾಹಣಿ ಚುನಾವಣೆ ಬಿಗ್ ಪೈಟ್ ನಡೆದಿದೆ ಎನ್ನಲಾಗಿದ್ದು.. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ. ಹಾಗೂ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರ ಇವರಿಬ್ಬರ ನಡುವೆ ಪಕ್ಷೇತರ ಅಭ್ಯರ್ಥಿ ಅಬ್ಬರದ ಪ್ರಚಾರ ನೆಡೆಸುವ ಮೂಲಕ ಬಾರಿ ಕೂತುಹಲ ಮೂಡಿಸಿದ್ದರು . ಹಾಲಿ ಶಾಸಕ ಎಸ್ ವಿ ರಾಮಚಂದ್ರ ಚುನಾವಣೆ ಪ್ರಚಾರದ ಕೊನೆಯ ದಿನದವರೆಗೂ ಕ್ಷೇತ್ರ ಉಳಿಸಿಕೊಳ್ಳಲು ಮತದಾರರುನ್ನು ಮನವೋಲಿಸುವ ಕಸರತ್ತು ನಡೆಸಿ ಚುನಾವಣೆ ತಂತ್ರಗಾರಿಕೆ ಫಲಕಾರಿಯಾಗುವುದೆ ಎಂದು ಕಾದು ನೋಡಬೇಕಾಗಿದೆ. ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಪ್ರತಿಷ್ಠಿತ ಕಣದಲ್ಲಿ ಕೆಲ ಬಾಗದಲ್ಲಿ ಕಾಂಗ್ರೆಸ್ .ಬಿ ಜೆ ಪಿ .ಪಕ್ಷಕ್ಕೆ ಪಕ್ಷದ ಮುಖಂಡರುಗಳು ಹೆಚ್ಚು ನಿರ್ಣಯಕ ಮತ ಪಡೆದಿದ್ದೆವೆ ಎಂದು ಚರ್ಚೆ ನಡೆಸಿದರೆ ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ರಾಜೇಶ್ ರವರು ಎರಡು ರಾಷ್ಟ್ರೀಯ ಪಕ್ಷಗಳ ನಿರ್ಣಯಕ ಮತಗಳನ್ನೆ ಪಡೆದಿದ್ದಾರೆ ರಾಜೇಶ್ ಗೆಲುವು ಖಚಿತ ಎಂದು ಅವರ ಅವರ ಪಕ್ಷದ ಒಲೈಕೆಗೆ ಪಕ್ಷದ ಮುಖಂಡರುಗಳು ಅವರ ಅವರ ಅಭಿಮಾನಿಗಳು ಚರ್ಚೆ ನಡೆಸಿದ್ದುಂಟು ಆದರೆ ಮತದಾರರ ಒಲವು ಯಾರ ಕಡೆಗೆ ಹೆಚ್ಚು ಮತದಾರರು ಮಣೆ ಹಾಕಿದ್ದಾರೆ ಎಂಬ ವಾದಗಳು ಸಾರ್ವಜನಿಕರಲ್ಲಿ ಹೆಚ್ಚು ಗ್ರಾಸವಾದ ಚರ್ಚೆಗಳು ಸಹಜವಾಗಿವೆ. ಇದಕ್ಕೆಲ್ಲ ದಿ.13 ರಂದು ಬೆಳಿಗ್ಗೆ ಹೊರಬಿಳಲಿರುವ ಚುನಾವಣೆ ಪಲಿತಾಂಶವೆ ಉತ್ತರವಾಗಲಿದೆ. ವರದಿಗಳು ಏನೇ ಸಮೀಕ್ಷೆ ನಡೆಸಿದರೂ ಕೂಡ ಕೆಲವೊಂದು ಬಾರಿ ಕೆಲವರ ನಿರೀಕ್ಷೆ ಮೀರಿ ಪಲಿತಾಂಶ ಬಂದಿರುವ ಉದಾಹರಣೆಗಳಿವೆ. ಒಟ್ಟಾರೆ ಹಣಾಹಣಿ ಚುನಾವಣೆಯಲ್ಲಿ ಮತದಾರರು ಯಾರಿಗೆ ಹೆಚ್ಚು ಮತ ನೀಡಿ ಈ ಮೂರು ಅಭ್ಯರ್ಥಿಗಳಲ್ಲಿ ಮತದಾರರು ಮತ ಪೆಟ್ಟಿಗೆಯಲ್ಲಿ ಯಾರ ಭವಿಷ್ಯ ಬರೆದಿರಬಹುದು ಎಂಬುದು ಇಂದು ಬೆಳಿಗ್ಗೆ ಶನಿವಾರ ಜಗಳೂರು ಕ್ಷೇತ್ರದ ಶಾಸಕರ ಆಡಳಿತ ನಡೆಸುವ ಪ್ರತಿನಿಧಿ ಆಯ್ಕೆಯಾಗುವ ದಿನಗಣನೆ ಸನ್ನಿಹವಾಗಿದ್ದು ಇದೀಗ ಪಲಿತಾಂಶ ದಿ 13 ರ ಬೆಳಿಗ್ಗೆ ಹೊರಬಿಳಲಿದ್ದು ಯಾರಿಗೆ ವಿಜಯದ ಮಾಲೆ ಎಂದು ಕಾದು ನೋಡಬೇಕಾಗಿದೆ .