ಶುಕ್ರದೆಸೆ ನ್ಯೂಸ್:- ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿರುವ ಶಾಸಕರು ಜನಸಾಮಾನ್ಯರಿಗೆ ಸ್ವಂದಿಸಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದರು ಕ್ಷೇತ್ರದ ಜನ ಬದಲಾವಣೆ ಬಯಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಶಿರ್ವಾದ ಮಾಡಿದ್ದಾರೆ.ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ನಾನು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಜಗಳೂರು ಕ್ಷೇತ್ರದಲ್ಲಿ ಯಾರು ಕಂಡರಿಯದ ಆಡಳಿತ ನಡೆಸಲು ಬದ್ದವಾಗಿರುವೆ ನೂತನ ಆಯ್ಕೆಯಾಗಿರುವ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಮತದಾರರು ಕೈ ಪಕ್ಷಕ್ಕೆ ಕೈ ಹಿಡಿದು ಅಶಿರ್ವಾದಿಸಿರುವ ಫಲವಾಗಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೆನೆ ಇದು ನನ್ನ ಗೆಲುವು ಆಲ್ಲ ಮತದಾರರ ಗೆಲುವು ಎಂದು ಕಾಂಗ್ರೆಸ್ ಶಾಸಕ ದೇವೆಂದ್ರಪ್ಪ ಹೇಳಿದರು. ಜಗಳೂರು ಪಟ್ಟಣದಲ್ಲಿರುವ ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದ್ದ ಪತ್ರಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ರಾಜ್ಯದ ವರೀಷ್ಠರಾದ ಮಾನ್ಯ ಸಿದ್ದರಾಮಯ್ಯ ಸಾಹೇಬ್ ರವರು 2013 ರಲ್ಲಿ ನೀಡಿದ ಕಾಂಗ್ರೆಸ್ ಆಡಳಿತಕ್ಕೆ ಮೆಚ್ಚಿದ ಜನ ಬಿಜೆಪಿ 4೦ ಪರಿಷಂಟ್ ಸರ್ಕಾರವನ್ನ ತೊಲಗಿಸಿ ರಾಜ್ಯದ ಜನ ಬದಲಾವಣೆ ಬಯಿಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವಿಗೆ ಸಾಕ್ಷಿಕರಿಸಿದಂತೆ ಜಗಳೂರು ಕ್ಷೇತ್ರದಲ್ಲಿಯು ಸಹ ಕಾಂಗ್ರೆಸ್ ಪಕ್ಷಕ್ಕೆ ಬಹುಮತ‌ ನೀಡುವ‌ ಮೂಲಕ ಜಯ ತಂದು ಕೊಟ್ಟಿದ್ದಾರೆ.ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಚುನಾವಣೆ ಮುನ್ನ ಕಳೆದ ಸಭೆ ಸಮಾರಂಭಗಳಲ್ಲಿ ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಿದರು ಬೆಂಬಲಿಸಿ ಕಾಂಗ್ರೆಸ್ ಗೆಲುವಿಗೆ ಬದ್ದ ಎಂದಿದ್ದರು ಅದರೆ ಕಾಂಗ್ರೆಸ್ ವರೀಷ್ಠರು ನನ್ನ ಪಕ್ಷ ಸಿದ್ದಾಂತಕ್ಕೆ ಮನ್ನಣೆ ನೀಡಿ ಟಿಕೆಟ್ ನೀಡಿದ ತಕ್ಷಣ ಮಾಜಿ ಶಾಸಕರು ಪಕ್ಷದ ಎಲ್ಲಾ ಸೌಲಭ್ಯಗಳನ್ನು ಪಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು ಕಾಂಗ್ರೆಸ್ ಪಕ್ಷವು ಬಾರಿ ಬಹುಮತಗಳಿಂದ ಕ್ಷೇತ್ರದಲ್ಲಿ ಜಯಗಳಿಸುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿ ಷಡ್ಯಂತ್ರ ಮಾಡಿದ್ದರು ಸಹ ನಾನು ಮತದಾರರ ಅಶಿರ್ವಾದದಿಂದ ಗೆಲುವ ಸಾಧಿಸಿದ್ದೆನೆ. ಜಗಳೂರು ಕ್ಷೇತ್ರದ ಮನೆ ಮಗನಾಗಿ ಇಲ್ಲಿರುವ ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಜನರ ದ್ವನಿಯಾಗಿ ನಾನು ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದೊಂದಿಗೆ ಅಗತ್ಯ ಸೇವೆ ನೀಡಲು ಬದ್ದವಾಗಿದ್ದೆನೆ. ಜಗಳೂರು ಇತಿಹಾಸದಲ್ಲಿಯೇ ಯಾರು ಕೂಡ ಕಂಡರಿಯದ ಆಡಳಿತ ನಡೆಸಲು ಸದಾ ಸಿದ್ದವಾಗಿದ್ದು ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳಾದ ಅಪ್ಪರ್ ಭದ್ರಾ .57 ಕೆರೆ ತುಂಬಿಸುವ ಯೋಜನೆ ಕಾಮಗಾರಿಗಳಿಗೆ ಚುರುಕು ಮಟ್ಟಿಸಿ ಸಮರ್ಥ ಆಡಳಿತ ನಡೆಸುವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಪಕ್ಷದ ನಿಷ್ಠೆ ಕೆಲಸಗಾರ ಮತ್ತು ಪಕ್ಷದಲ್ಲಿ ಹಿರಿತನವಿದೆ ನಾವು ಜೊಡೆತ್ತುಗಳಂತೆ ಚುನಾವಣೆಯಲ್ಲಿ ಕೆಲಸ ಮಾಡಿದ್ದು ನಾವಿಬ್ಬರು ಕ್ಷೇತ್ರದಲ್ಲಿ ಮತದಾರರಿಗೆ ಅಗತ್ಯ ಸೇವೆ ನೀಡಲು ಸದಾ ಸಿದ್ದವಾಗಿದ್ದೆವೆ ಎಂದರು . ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ ಮತದಾರರು ನಮ್ಮ ಪಕ್ಷಕ್ಕೆ ಗೆಲುವ ತಂದು ಕೊಟ್ಟು ಕಾಂಗ್ರೆಸ್ ಆಡಳಿತ ನಡೆಸಲು ಬೆಂಬಲಿಸಿದ್ದಾರೆ. ಕ್ಷೇತ್ರದ ಮತದಾರರಿಗೆ ನಮ್ಮ ಪಕ್ಷದ ಪರವಾಗಿ ಹೃದಯಪೂರ್ವಕ ಅಭಿನಂದನೆಗಳುನ್ನು ಸಲ್ಲಿಸುವ ಮೂಲಕ ಮತದಾರರಿಗೆ‌ ಸ್ವಂದಿಸಿ ಕೆಲಸ ಮಾಡಲು ನಾವು ಸಮರ್ಥವಾಗಿದ್ದೆವೆ.ರಾಜ್ಯದಲ್ಲಿ ಇದುವರೆಗೂ ಆಡಳಿತ‌ ನಡೆಸಿದ ಬಿಜೆಪಿ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೋಸಿದ ಜನತೆ ಕಾಂಗ್ರೆಸ್ ಪಕ್ಷದ ಉತ್ತಮ ಪ್ರಣಾಳಿಕೆಗಳಿಂದ ರಾಜ್ಯ ಮತ್ತು ಕ್ಷೇತ್ರದಲ್ಲಿ‌ ಜಯಬೇರಿ ಬಾರಿಸಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಷಂಷೀರ್ ಆಹಮದ್.ಮಾಜಿ ಬ್ಲಾಕ್ ಕಾಂಗೈ ಅಧ್ಯಕ್ಷ ಪಿ ಎಸ್ ಸುರೇಶ್ ಗೌಡ್ರು.ಕಾಂಗ್ರೆಸ್ ಮುಖಂಡ ಗಿಡ್ಡನಕಟ್ಟೆ ತಿಪ್ಪೇಸ್ವಾಮಿ.ಮುಖಂಡ ಕಾನನಕಟ್ಟೆ ಪ್ರಭಣ್ಣ.ದಿದ್ದಿಗೆ ಪ್ರಕಾಶ್.ಕಾಂಗ್ರೆಸ್ ಯುವ‌ ಘಟಕದ ಅಧ್ಯಕ್ಷ ರಮೇಶ್ . ಮುಖಂಡ ತಮಲೇಹಳ್ಳಿ ತಿಮ್ಮಣ್ಣ. ಮುಖಂಡ ಕೊರಟಿಕೆರೆ ಕೆ ಗುರುಸಿದ್ದನಗೌಡ.ಸೇರಿದಂತೆ ‌ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!