ಕಷ್ಟದಲ್ಲಿ ನನ್ನ ಪಾರು ಮಾಡಿದ ಅಜ್ಜಯ್ಯನಿಗೆ ಮೊದಲ ಭೇಟಿ; ಡಿ ಕೆ ಶಿವಕುಮಾರ್ ಹೇಳಿದ್ದೇನು?
ಶುಕ್ರದೆಸೆ ನ್ಯೂಸ್:- ಬೆಂಗಳೂರು, ಮೇ 14: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನಿಚ್ಛಳ ಬಹುಮತದಿಂದ ಗೆಲುವು ಸಾಧಿಸಿದೆ. ಈಗಾಗಲೇ ಸರ್ಕಾರ ರಚನೆ ಮುಂದಾಗಿದ್ದು ಕಾಂಗ್ರೆಸ್ ನಾಯಕರು ಇಂದು (ಭಾನುವಾರ) ಸಂಜೆ ಶಾಸಕಾಂಗ ಸಭೆಯನ್ನ ನಡೆಸಲಿದ್ದು, ಅದಕ್ಕಿಂದ ಮೊದಲು ನಾನು ಅಜ್ಜಯ್ಯನ ದರ್ಶನ ಪಡೆಯಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸದಾಶಿವ ನಗರದಲ್ಲಿ ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ಕಷ್ಟದಲ್ಲಿ ನನ್ನನ್ನು ಪಾರು ಮಾಡಿದ ಅಜ್ಜಯ್ಯನ ದರ್ಶನಕ್ಕೆ ಹೋಗುತ್ತಿದ್ದೇನೆ. ಎಲ್ಲಿ ಭಕ್ತಿ ಇದೆಯೋ, ಅಲ್ಲಿ ಭಗವಂತ ಇರುತ್ತಾನೆ. ಎಲ್ಲಿ ಶ್ರಮವಿದೆಯೋ ಅಲ್ಲಿ ಪ್ರತಿಫಲ ಇದೆ. ಈ ಹಿಂದೆಯೇ ನಾನು 136 ನಂಬರ್ ಬರುತ್ತೆ ಎಂದು ಹೇಳಿದ್ದೆ ನಾನು ಪೂರ್ಣ ಬಹುಮತವನ್ನ ಪಡೆದಿದ್ದೇವೆ ಎಂದು ಹೇಳಿದ್ದರು.
ಇನ್ನೂ ಕುತೂಹಲ ಪಡಬೇಕಿಲ್ಲ, ಯಾರೂ ಟೆನ್ಷನ್ ಮಾಡಿಕೊಳ್ಳಬೇಡಿ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನಾನು ನಂಬಿರುವ ಶಕ್ತಿ ನನಗೆ ಮಾರ್ಗದರ್ಶನ ಕೊಟ್ಟಿದೆ. ಕಷ್ಟದಲ್ಲಿ ನನ್ನ ಪಾರು ಮಾಡಿದ ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ನಾನು ಹೋಗುತ್ತಿದ್ದೇನೆ, ಒಂದು ಗಂಟೆಗೆ ವಾಪಾಸ್ ಬರುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.