ನಮ್ಮ ಸಮುದಾಯಕ್ಕೆ ತನ್ನದೆಯಾದ ಇತಿಹಾಸವಿದೆ ಸಾಮ್ರಾಟ್ ಅಶೋಕನ ಶೌರ್ಯ ಮೆರೆದ ವಂಶವಾಗಿದೆ . ಎಂದು ಶ್ರೀ ಶ್ರೀಧರನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಮಾರೋಪ ಸಮಾರಂಭದಲ್ಲಿ ಅವರು ದಿವ್ಯ ಸಾನಿದ್ಯ ವಹಿಸಿಕೊಂಡು ಅವರು ಮಾತನಾಡಿದರು ಸಮುದಾಯಕ್ಕೆ ತನ್ನದೆಯಾದ ಇತಿಹಾಸ ಪರಂಪರೆಯಿದ್ದು‌ ಶೌರ್ಯಪರಾಕ್ರಮಿ ಮೆರೆದಿದೆ.ಮೂಲ ಇತಿಹಾಸವನ್ನು‌ ತಿಳಿಯದವರು‌ ಇತಿಹಾಸವನ್ನು ಸೃಷ್ಠಿಸಲಾರರು.ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೋಡಿಸುವ ಮೂಲಕ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಅಭಿವೃದ್ಧಿಯಾಗಬೇಕೆಂದು ಸಲಹೇ ನೀಡಿದರು .ಕಾರ್ಯಕ್ರಮವನ್ನು ಉದ್ಗಾಟಿಸಿ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ. ಪಾಲಯ್ಯ ಮಾತನಾಡಿದರು ಸವಿತ ಸಮಾಜಕ್ಕೆ ಪೂಜ್ಯ ಗುರುಗಳಿದ್ದು ಅವರ ಮಾರ್ಗದರ್ಶದನದಲ್ಲಿ ಸವಿತಾ ಸಮಾಜ ಒಗ್ಗಟಾಗಿ ತಮ್ಮ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಇಂತ ಸವಿತ ಮಹರ್ಷಿಗಳ ಜಯಂತಿಗೆ ಹಾಲಿ ಶಾಸಕರು ಮಾಜಿ ಶಾಸಕರು ನಿರ್ಲಕ್ಷ್ಯ ಮಾಡಿದ್ದಾರೆ .ಸಮುದಾಯದವರು ಯಾರಿಗೆ ಮನವಿ ಮಾಡಿಕೊಳ್ಳಬೇಕು ..ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಸಂಘಟಿತರಾಗಿ ಎಂದು ಹೇಳಿದರು.ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕೆಂದರು.ಸವಿತ ಸಮಾಜದ ಯುವಕರು ದುಶ್ಚಟಗಳ‌ ದಾಸರಾಗಬೇಡಿ. ಸವಿತ ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡಬೇಕು ಎಂದರು. ಸಮುದಾಯದ ವೆಂಕಟಚಲಾಪತಿ ಉಪಾನ್ಯಾಸ ನೀಡಿ ಶಿವ ಪಾರ್ವತಿಯವರು ಕುಳಿತುಕೊಂಡಾಗ ಶಿವನ ಕೂದಲುಗಳು ಅತಿಯಾಗಿ ಬೆಳೆದು ಅಸಹ್ಯವಾಗಿ ಕಾಣಿಸುತ್ತವೆ ಆ‌ ಸಂದರ್ಭದಲ್ಲಿ ಪಾರ್ವತಿ ಈ ಕೂದಲು ಕಟ್ ಮಾಡಿಸಿಕೊಳ್ಳಿ ಎಂದು ಹೇಳಿದ ಸಂದರ್ಭದಲ್ಲಿ ಶಿವನು ತನ್ನ ಬಲಗಣ್ಣಿನಿಂದ ಸೃಷ್ಠಿಯಾಗಿರುವ ಸವಿತಾ ಮಹರ್ಷಿಗಳು ಜನನವಾಗಿದ್ದು ಇದೀಗ ಎಲ್ಲಾ ವರ್ಗ ಜನಾಂಗದವರ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು ಬ್ರಹ್ಮ ಮತ್ತು ವಿಷ್ಣುವಿನ ಕಾಯಕದಲ್ಲಿ ನಿರತರಾಗಿ ಸಮಾಜದ ಕೊಳೆ ತೊಳೆಯುವಂತ ಸೇವಾ ಕಾರ್ಯವಾಗಿದೆ. ಸಂಗೀತ ಸಾಹಿತ್ಯ ಕುಲ ಕಸುಬುಗಳು ಕ್ಷೌರಿಕ ಸಮುದಾಯದ ಹಲವು ವೃತ್ತಿಗಳು ಆಧುನಿಕತೆಯಲ್ಲಿ ನಶಿಸಿ ಹೋಗುತ್ತಿವೆ ಆದರೆ ಇದೀಗ ಸಂಗೀತ ನಮ್ಮ ಕೂಲ ಕಸುಗಳು ಮೇಲ್ವರ್ಗದ ಪಾಲಾಗುತ್ತಿವೆ ಆ ವೃತ್ತಿಗಳುನ್ನು ಆಳವಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೆವೆ ಎಂದರು.ಸಮಾಜದಲ್ಲಿರುವ ಕೊಳೆಯನ್ನು ತೆಗೆಯುವಂತ ಸಮುದಾಯ ನಮ್ಮದು ಕೊಳೆ ತೊಳೆಯುವರು ಅಂತ ಸಮಾಜದಲ್ಲಿನ ಕೊಳೆಯನ್ನು ಸ್ವಚಗೊಳಿಸುವವರುನ್ನು ನಿಕೃಷ್ಠವಾಗಿ ಕಾಣುತ್ತಿರುವುದು ಶೋಚನೀಯ.ಸಮಾಜದಲ್ಲಿ ಮೌಡ್ಯ‌ ಕಂದಚಾರಗಳು ಮನೆ ಮಾಡಿವೆ ಎಂದು ವಿಷಾಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರು ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾತನಾಡಿದರು ಈ ಸಮಾಜಕ್ಕೆ ಅತ್ಯಂತ ವಿಶಿಷ್ಟವಾದ ಒಂದು ಮಂತ್ರವಿದೆ ಗಾಯಿತ್ರಿ ಮಂತ್ರ ಮಹಾಮಂತ್ರವಿದೆ. ಸವಿತಾ ಸರಸ್ವತಿ ಸ್ವಾಮಿಜಿ ಹಿಂದುಳಿದ ಸಮುದಾಯಗಳು ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕ ಹಕ್ಕನ್ನು ಅಮರ್ಪಕವಾಗಿ ಬಳಸಿಕೊಳ್ಳಿ ಎಂದರು.‌ಸವಿತಾ ಸಮಾಜಕ್ಕೆ 2000 ಸಾವಿರ ಇತಿಹಾಸವಿದೆ. ಸವಿತಾ ಸಮಾಜ ವೇದ ಪುರಾಣಗಳಲ್ಲಿ ಸವಿತ ಸಮಾಜದಲ್ಲಿ ಮೂರು ವೃತ್ತಿಗಳಿವೆ ಸಂಗೀತ ಸಾಹಿತ್ಯ ಕುಲ ಕಸುಬುಗಳು ಎಂದರು. .ಬಿಸ್ತುವಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಬಾಬು ಮಾತನಾಡಿದರು ಈ ಸಂದರ್ಭದಲ್ಲಿ ‌.ಪಪಂ ಸದಸ್ಯ ಲುಖ್ಮಾಖಾನ್.ಪಪಂ ಸದಸ್ಯ ಎನ್ ಎಚ್ ರಮೇಶ್.ಪಪಂ ಸದಸ್ಯರು ಪಾಪಲಿಂಗಪ್ಪ.ಪಪಂ ಅಧ್ಯಕ್ಷರ ಪತಿ ಒಬಣ್ಣ.ಮುಖಂಡ ಹನುಮಂತಪ್ಪ.ಕುರಿ ಜಯ್ಯಣ್ಣ. ಕಾಂಗ್ರೆಸ್ ಕಾರ್ಮಿಕ ಸಂಘಟನೆ ಅಧ್ಯಕ್ಷ ರೇವಣ್ಣ.ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಮುಖಂಡ ನರಸಿಂಹಮೂರ್ತಿ. ಸವಿತಾ ಸಮಾಜದ ಅಧ್ಯಕ್ಷ ಹೊನ್ನರುಸ್ವಾಮಿ ಸೇರಿದಂತೆ ‌ಮುಂತಾದವರು ಹಾಜರಿದ್ದರು

Leave a Reply

Your email address will not be published. Required fields are marked *

You missed

error: Content is protected !!