ಶುಕ್ರದೆಸೆ ನ್ಯೂಸ್:- ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ಗೆ ಅವಮಾನ ವೀಡಿಯೋ ಹರಿಬಿಟ್ಟ ಯುವತಿ ಅರೆಸ್ಟ್ ಇದೀಗ ಪೊಲೀಸರ ಅತಿಥಿ
ತುಮಕೂರು: ಯುವತಿಯೋರ್ವಳು ಡಾ.ಬಿ.ಆರ್ ಅಂಬೇಡ್ಕರ್‌ಗೆ ಅವಮಾನ ಮಾಡಿ ನಿಂದನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟಿದ್ದಳು, ಪೊಲೀಸರು ಆಕೆಯನ್ನು ಬಂಧಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ವೇದಾವತಿ ಬಂಧಿತ ದಲಿತ ಯುವತಿ. ಈಕೆ ತುಮಕೂರು ಜಿಲ್ಲೆ ಕ್ಯಾತಸಂದ್ರ ಸಮೀಪದ ಕಲ್ಲಹಳ್ಳಿ ಗ್ರಾಮಕ್ಕೆ ಸೇರಿದವಳಾಗಿದ್ದು, ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಳು. ಇದೀಗ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ನನಗೆ ಅನ್ಯಾಯವಾಗಿದೆ. ಇದಕ್ಕೆ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕಾರಣ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೋ ಹರಿ ಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಈ ಬಗ್ಗೆ ದಸಂಸ ವೇದಾವತಿ ವಿರುದ್ಧ ಎನ್.ಇ.ಪಿ.ಎಸ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಯುವತಿಯನ್ನು ಎನ್.ಇ.ಪಿ.ಎಸ್ ಪೊಲಿಸರು ಬಂಧಿಸಿದ್ದಾರೆ.