ಶುಕ್ರದೆಸೆ ನ್ಯೂಸ್:- ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ನೂತನ ಸರ್ಕಾರವೂ ಶನಿವಾರ ಅಸ್ತಿತ್ವಕ್ಕೆ ಬರಲಿದೆ. ಸಿದ್ದರಾಮಯ್ಯ ಸಿಎಂ ಆದರೆ, ಡಿಕೆ ಶಿವಕುಮಾರ್‌ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಜೊತೆಯಲ್ಲಿಯೇ 28 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಯಾರಿಗೆಲ್ಲಾ ಸಚಿವ ಸ್ಥಾನ ಸಿಗಬಹುದು ಎಂಬ ಮಾಹಿತಿ ಮತ್ತು ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.

ಶನಿವಾರವೇ 28 ಸಚಿವರ ಪ್ರಮಾಣ ವಚನ ಸ್ವಿಕಾರ
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನೂತನ ಸಚಿವರ ಪದಗ್ರಹಣ
ಬೆಂಗಳೂರು ಮತ್ತು ಬೆಳಗಾವಿಗೆ ಹೆಚ್ಚಿನ ಸಚಿವ ಸ್ಥಾನ ಹೋಗುವ ನಿರೀಕ್ಷೆ

: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್‌ ಆಯ್ಕೆಯಾಗಿದ್ದಾರೆ. ಶನಿವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಕೂಡ ನಿಗದಿಯಾಗಿದೆ. ಸಿಎಂ, ಡಿಸಿಎಂ ಜೊತೆ ಸುಮಾರು 28 ಸಚಿವರು ಪ್ರಮಾಣ ವಚನ ಸ್ವೀಕಾರ.

ಈಗಾಗಲೇ ಸಂಭಾವ್ಯ ಸಚಿವರ ಪಟ್ಟಿ ರೆಡಿಯಾಗಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬಣಕ್ಕೆ ತಲಾ 10 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಉಳಿದ 8 ಸಚಿವ ಸ್ಥಾನಗಳನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎನ್ನಲಾಗಿದೆ. ತಮ್ಮ ತಮ್ಮ ಕೋಟಾದಲ್ಲಿಯೂ ಉಭಯ ನಾಯಕರು ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯವನ್ನು ಕಾಪಾಡಬೇಕು ಎಂದು ವರಿಷ್ಠರು ಸಿದ್ದು, ಡಿಕೆಶಿಗೆ ಸೂಚನೆ ನೀಡಿದ್ದಾರೆ.

ಸಿಎಲ್‌ಪಿ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆ, ಪ್ರಸ್ತಾಪ ಮಂಡಿಸಿದ ಡಿಕೆ ಶಿವಕುಮಾರ್‌

ಅದಲ್ಲದೇ ಹಿರಿಯರ ಜೊತೆ ಕಿರಿಯರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಹೈಕಮಾಂಡ್‌ ಸೂಚಿಸಿದೆ. ಬೆಂಗಳೂರು ಹಾಗೂ ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನಗಳು ಹೋಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್‌, ಜಮೀರ್‌ ಅಹ್ಮದ್‌, ಕೃಷ್ಣ ಬೈರೇಗೌಡ ಅವರಿಗೆ ಸಚಿವ ಸ್ಥಾನ ಫಿಕ್ಸ್‌ ಎನ್ನಲಾಗಿದೆ. ಆದರೆ, ಎನ್‌ಎ ಹ್ಯಾರೀಸ್‌, ಎಂ ಕೃಷ್ಣಪ್ಪ ಕೂಡ ರೇಸ್‌ನಲ್ಲಿದ್ದಾರೆ.

ಸಿಎಂ, ಡಿಸಿಎಂ ಆಯ್ಕೆ ಬಳಿಕ ಕ್ಯಾಬಿನೆಟ್‌ ರಚನೆ ಕಸರತ್ತು; ಪ್ರಬಲ ಖಾತೆಗಳಿಗಾಗಿ ಸಿದ್ದರಾಮಯ್ಯ, ಡಿಕೆಶಿ ಪಟ್ಟು!

ಬೆಳಗಾವಿಯಲ್ಲಿ ಸತೀಶ್‌ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್‌, ಲಕ್ಷ್ಮಣ್‌ ಸವದಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಕ್ಕರೂ ಒಂದಿಷ್ಟು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದಿರಬಹುದು. ಮೂರು ಸ್ಥಾನಗಳು ಉಳಿಯಲಿದ್ದು, ಅಗತ್ಯವಿದ್ದಾಗ ಭರ್ತಿ ಮಾಡಿಕೊಳ್ಳುವ ಸಾಧ್ಯತೆ ಇದೆ.

2023: ಕಾಂಗ್ರೆಸ್‌ ಸರ್ಕಾರದ ನೂತನ ಕ್ಯಾಬಿನೆಟ್‌ನಲ್ಲಿ ಯಾರಿಗೆ ಸಚಿವ ಸ್ಥಾನ? ಇಲ್ಲಿದೆ ಸಂಭಾವ್ಯ ಪಟ್ಟಿ!

ಯಾರ‍್ಯಾರಿಗೆ ಸಚಿವ ಸ್ಥಾನ? ಇಲ್ಲಿದೆ ಸಂಭಾವ್ಯ ಪಟ್ಟಿ:
ಸಿದ್ದರಾಮಯ್ಯ, ಮುಖ್ಯಮಂತ್ರಿ
ಡಿಕೆ ಶಿವಕುಮಾರ್‌, ಉಪ ಮುಖ್ಯಮಂತ್ರಿ
ಡಾ ಜಿ ಪರಮೇಶ್ವರ್‌
ಕೆಎಚ್‌ ಮುನಿಯಪ್ಪ/ರೂಪಕಲಾ ಶಶಿಧರ್‌
ಬಿಕೆ ಹರಿಪ್ರಸಾದ್‌
ಎಂಬಿ ಪಾಟೀಲ್‌
ರಾಮಲಿಂಗಾರೆಡ್ಡಿ
ಆರ್‌ವಿ ದೇಶಪಾಂಡೆ
ಕೆಜೆ ಜಾರ್ಜ್‌
ಎಚ್‌ಕೆ ಪಾಟೀಲ್‌
ಕೃಷ್ಣ ಬೈರೇಗೌಡ
ಯುಟಿ ಖಾದರ್‌/ ಸಲೀಂ ಅಹ್ಮದ್‌
ಜಮೀರ್‌ ಅಹ್ಮದ್‌ ಖಾನ್‌/ಎನ್‌ಎ ಹ್ಯಾರೀಸ್‌
ಸತೀಶ್‌ ಜಾರಕಿಹೊಳಿ
ಎಚ್‌ಸಿ ಮಹದೇವಪ್ಪ
ಶರಣಪ್ರಕಾಶ್‌ ಪಾಟೀಲ್‌
ಅಜಯ್‌ ಸಿಂಗ್‌
ದಿನೇಶ್‌ ಗುಂಡೂರಾವ್‌
ಲಕ್ಷ್ಮಣ್‌ ಸವದಿ
ಲಕ್ಷ್ಮೀ ಹೆಬ್ಬಾಳ್ಕರ್‌
ಮಧು ಬಂಗಾರಪ್ಪ
ಬಸವರಾಜ ರಾಯರೆಡ್ಡಿ
ಪ್ರಿಯಾಂಕ್‌ ಖರ್ಗೆ
ಸಂತೋಷ್‌ ಲಾಡ್‌
ವಿಜಯಾನಂದ ಕಾಶಪ್ಪನವರ್‌
ಟಿಡಿ ರಾಜೇಗೌಡ/ಕೆಎಂ ಶಿವಲಿಂಗೇಗೌಡ
ಆರ್‌ಬಿ ತಿಮ್ಮಾಪುರ
ಕೊತ್ತೂರು ಮಂಜುನಾಥ್‌
ಶಾಮನೂರು ಶಿವಶಂಕರಪ್ಪ/ಎಸ್‌ಎಸ್‌ ಮಲ್ಲಿಕಾರ್ಜುನ
ಎಂ ಕೃಷ್ಣಪ್ಪ/ಪ್ರಿಯಾಕೃಷ್ಣ ಇವರಿಗೆ ಸಚಿವ ಸ್ಥಾನಗಳು ಸಿಗುವ ಸಂಭಾವ್ಯ

Leave a Reply

Your email address will not be published. Required fields are marked *

You missed

error: Content is protected !!