ಶುಕ್ರದೆಸೆ ವೆಬ್ ನ್ಯೂಸ್:- ಪಪಂ ಇಲಾಖೆ ವತಿಯಿಂದ ಪ್ರಾರಂಭಿಸಿರುವ ಆರ್ ಆರ್ ಸೆಂಟರ್ ನ್ನು ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ತಿಳಿಸಿದ್ದಾರೆ.

ಪಟ್ಟಣದ ಪಂಪಹೌಸ್ ನಲ್ಲಿ ನೂತನವಾಗಿ ಆರ್ ಆರ್ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ನಾಗರೀಕರು ಪಪಂ ಇಲಾಖೆ ವತಿಯಿಂದ ಪಂಪ್ ಹೌಸ್ ನಲ್ಲಿ ಆರ್ ಆರ್ ಕೇಂದ್ರ ನಿರ್ಮಿಸಲಾಗಿರುವ ಕೇಂದ್ರವನ್ನ ಜನತೆ ಪ್ರಯೋಜನ ಪಡೆದುಕೊಳ್ಳಬೇಕು.ಇಲ್ಲಿ ಆರು ಬಗೆಯ ವಸ್ತುಗಳನ್ನು ಸಾರ್ವಜನಿಕರು ದೇಣೆಗೆ ನೀಡುವ ಮೂಲಕ ಈ ಕೇಂದ್ರವನ್ನ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಮರು ಉಪಯೋಗಿಸುವಂತ ಬಟ್ಟೆಗಳು .ಪ್ಲಾಸ್ಟಿಕ್ ಸಾಮಾನುಗಳು ಎಲೆಕ್ಟ್ರಾನಿಕ್ ವಸ್ತುಗಳು .ನ್ಯೂಸ್ ಪೇಪರ್ .ಸ್ವರ್ಧಾತ್ಮಕ ಪರೀಕ್ಷೆಗಳ ವಿವಿಧ ಪುಸ್ತಕಗಳು.ಮಕ್ಕಳ ಆಟಿಕೆ ಸಾಮಾನುಗಳು ಇನ್ನಿತರೆ ವಸ್ತುಗಳುನ್ನ ಕೇಂದ್ರಕ್ಕೆ ನೀಡಿ ತಮ್ಮ ಮನೆಗಳಲ್ಲಿ ತುಕ್ಕು ಹಿಡಿದು ಕಸವಾಗಿ ಆಳಾಗುವುದಕ್ಕಿಂತ ಇಲ್ಲಿಗೆ ಸಾಗಿಸಿ ಇದು ಕೇಂದ್ರ ಸರ್ಕಾರದ ಮಹತ್ವ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು ಎನ್ ಎಂ ಕೆ ಶಾಲಾ ಮುಖ್ಯಸ್ಥರಾದ ಎನ್ ಎಂ ಲೋಕೇಶ್ ಮಾತನಾಡಿ ಜಗಳೂರು ನಗರವನ್ನ ಸುಂರ ನಗರವನ್ನಾಗಿ ಮಾಡಲು ಪ್ರತಿಯೊಬ್ಬರು ಸಹಕರಿಸಬೇಕು ತಮ್ಮ ಮನೆಯಲ್ಲುಇರುವ ಹಳೆದಾದ ವಸ್ತುಗಳು ಮರು ಬಳಕೆಯಾಗುವಂತ ವಸ್ತುಗಳನ್ನು ಆರ್ ಆರ್ ಕೇಂದ್ರಕ್ಕೆ ದೇಣಿಗೆಯಾಗಿ ನೀಡಿದರೆ ಬಳಕೆಯಾಗುವಂತ ಯಾವುದೇ ವಸ್ತುಗಳು ಆ ವಸ್ತುಗಳು ಇಲ್ಲದಂತಹ ಬಡ ವರ್ಗದವರಿಗೆ ಅನುಕೂಲವಾಗಲಿದೆ.ಬಟ್ಟೆ .ಪುಸ್ತಕ .ಎಲೆಕ್ಟ್ರಾನಿಕ್ ಸಾಮಾನುಗಳು ಮನೆಯಲ್ಲಿದ್ದು ಕೊಳೆತು ಕಾಯಿಲೆ ಸೃಷ್ಠಿಸಿ ಮನುಷ್ಯನ ಆರೋಗ್ಯದ‌ ಮೇಲೆ ದುಷ್ಪರಿಣಾಮ ಬೀರಲಿದೆ ತಾವುಗಳು ಮನೆಯ ಕಸವನ್ನ ಬೀದಿಗೆ ಬೀಸಾಡದಂತೆ ಪಪಂ ಇಲಾಖೆಯ ಕಸದ ವಾಹನಕ್ಕೆ ಹಾಕಿ ಸಹಕರಿಸಿದರೆ ಸುಂದರ ನಗರದಿಂದ ಉತ್ತಮ ಆರೋಗ್ಯದಾಯಕ ನಗರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.ಇದರ ಬಗ್ಗೆ ಪ್ರತಿ ವಾರ್ಡನಲ್ಲೂ ಸಹ ಜಾಗೃತಿ ಅಗತ್ಯವಾಗಿದೆ. ಸಾರ್ವಜನಿಕರು ಸ್ವಚತೆ ಕೈಜೋಡಿಸಿ . ಮನೆಯ ಕಸವನ್ನು ಬೀದಿಗೆ ಹಾಕುವುದು ಖಾಲಿ ನಿವೇಶನಗಳಲ್ಲಿ ಕಸವನ್ನ ಎಲ್ಲೆಂದರೆ ಅಲ್ಲೆಯೇ ಬಿಸಾಡುವುದರಿಂದ ಕಾಯಿಲೆಗಳು ಉತ್ಪತ್ತಿಯಾಗಿ ಆರೋಗ್ಯ ಹದಗೆಡುವುದು ಆದ್ದರಿಂದ .ಮನೆಯ ಮಕ್ಕಳಿಂದಲೆ ಸ್ವಚತೆಗೆ ಅರಿವು ಮೂಡಿಸಿ ಆದ್ಯತೆ ನೀಡಬೇಕಿದೆ. ಎಂದು ಸಲಹೇ ನೀಡಿದರು.ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸರಾವ್ ಮಾತನಾಡಿ ನಮ್ಮ ಜಗಳೂರು ನಮ್ಮ ಸುಂದರ ನಗರವಾಗಲು ನಾಗರೀಕರ ಸಹಕಾರ ಅತ್ಯಗತ್ಯವಾಗಿದೆ.ತಮ್ಮ ಮನೆಯಲ್ಲಿರುವ ಮರಬಳಕೆಯಾಗುವಂತ ವಸ್ತುಗಳನ್ನು ಆರ್ ಆರ್ ಸೆಂಟರ್ ಗೆ ದೇಣಿಗೆಯಾಗಿ ನೀಡಿದರೆ ಬಳಕೆಯಾಗುವಂತ ವಸ್ತುಗಳು ಮರು ಬಳಕೆಯಾಗುವುವು.ಈ ಸೆಂಟರ್ ಮಾಡಿರುವುದರಿಂದ ನಗರದಲ್ಲಿ ಜನತೆ ಅನುಪಯುಕ್ತ ಮತ್ತು ಉಪಯುಕ್ತ ವಸ್ತುಗಳುನ್ನು ಎಲ್ಲೆಂದರ ಸಲ್ಲಿ ಬಿಸಾಡುವುದಂತೆ ಈ ಸೆಂಟರ್ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಇದೆ ಸಂದರ್ಭದಲ್ಲಿ ವಸ್ತುಗಳುನ್ನು ಕೇಂದ್ರಕ್ಕೆ ದೇಣಿಗೆಯಾಗಿ ನೀಡಿದರು ಈ ಸಂದರ್ಭದಲ್ಲಿ ‌.ಪಪಂ ಸದಸ್ಯರಾದ ರಮೇಶ್ ರೆಡ್ಡಿ. ಆರೋಗ್ಯ ತಾಲ್ಲೂಕು ವೈದ್ಯ ಅಧಿಕಾರ ನಾಗರಾಜ್. ಪಪಂ ಸದಸ್ಯೆರಾದ ನಿರ್ಮಲಕುಮಾರಿ.ಲಲಿತಾ ಶಿವಣ್ಣ. ಸದಸ್ಯರಾದ ಲುಖ್ಮಾನ್ ಖಾನ್. .ರವಿ.ಷಕೀಲ್ ಆಹಮದ್. ಪಪಂ ಆರೋಗ್ಯ ಅಧಿಕಾರಿ ಕಿಪಾಯತ್.ನಾಮನಿರ್ದೇಶಿತ ಸದಸ್ಯ ರುದ್ರಮುನಿ.ಬಿ ಪಿ ಸುಭಾನ್ .ಶಾಹಿನ ಬೇಗಮ್ ಸೇರಿದಂತೆ ಹಾಜರಿದ್ದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *

You missed

error: Content is protected !!