ಕರ್ತವ್ಯದಲ್ಲಿ ಸಾರ್ಥಕತೆ ಮೆರೆದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯು ರುದ್ರಪ್ಪ ಸೇವಾ ಕಾರ್ಯ ಶ್ಲಾಘನೀಯ. ಶುಕ್ರದೆಸೆ ನ್ಯೂಸ್:- ಜಗಳೂರು ತಾಲ್ಲೂಕಿನ ಲೋಕಪಯೋಗಿ ಇಲಾಖೆ ಉಪಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರುದ್ರಪ್ಪರವರು ಸರಳ ಸಜ್ಜನಿಕೆಯ ಕರ್ತವ್ಯಪರಿಪಾಲಕರಾಗಿ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಇದೆ ಮೆ 31 ರಂದು ವಯೋನಿವೃತ್ತಿ ಹೊಂದಲಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯು ರುದ್ರಪ್ಪ ಸೇವಾ ಕಾರ್ಯ ಅನನ್ಯವಾಗಿದೆ. ಇವರು ಮೂಲತ ಜಗಳೂರು ತಾಲ್ಲೂಕಿನ ಮರಿಕುಂಟೆ ಗ್ರಾಮದಲ್ಲಿ ಇವರ ಜನ್ಮ ಭೂಮಿಯಾಗಿದ್ದು ಬಾಲ್ಯದಲ್ಲೇಯೆ ಉತ್ತಮ ವಿಧ್ಯಾಭ್ಯಾಸ ಮಾಡುವ ಮೂಲಕ ಉನ್ನತ ಪದವಿ ಪಡೆದು ಸರ್ಕಾರಿ ನೌಕರಿಗೆ ಸೇರಿಕೊಂಡರು ಇವರು ರಾಜ್ಯದ ನಾನಾ ಜಿಲ್ಲೆಯ ವಿವಿಧ ಬಾಗಗಳಲ್ಲಿ ಅಯ ಇಲಾಖೆಯ ಕಾರ್ಯವ್ಯಾಪ್ತಿಯಲಿ ಕರ್ತವ್ಯವೆ ದೇವರೆಂದು ನಂಬಿದವರು ಶಿಸ್ತು ಸಂಯಮ ಕರ್ತವ್ಯ ಪಾಲನೆ ಮಾಡುವ ಮೂಲಕ ಕಛೇರಿ ಸಿಬ್ಬಂದಿಗಳೊಂದಿಗೆ ಪ್ರಿತಿ ವಿಶ್ವಾಸಗಳೊಂದಿಗೆ ಇಲಾಖೆ ಕೆಲಸ ಮಾಡಿಸುವರು ಇವರ ಕೊನೆಯ ಕರ್ತವ್ಯದ ಪ್ರಯಾಣವನ್ನ ಸ್ವ ತಾಲ್ಲೂಕು ಕೇಂದ್ರಕ್ಕೆ ಕಳೆದ ಮೂರು ವರ್ಷಗಳ ಹಿಂದೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಈ ಬಾಗದ ಜನರ ಸಾರ್ವಜನಿಕರ ಅಧಿಕಾರಿಗಳ ರಾಜಕೀಯ ಮುಖಂಡರಿಗೆ ಅತ್ತಿರವಾಗಿ ಸಾರ್ಜನಿಕ ಕೆಲಸಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಇಲಾಖೆ ಸೇವಾ ಮನೋಭಾವದ ಗುಣ ಸಂಪನ್ನರಾಗಿ ಜಗಳೂರು ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿಯೆ ಹಿರಿಯ ಅಧಿಕಾರಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಶ್ರೀಯುತರು ಇದೀಗ ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರಿ ಸೇವೆಯಲ್ಲಿ ಸುಮಾರು 39 ವರ್ಷಗಳ ಕಾಲ ಸುದೀರ್ಘವಾದ ಸೇವಾ ಕಾರ್ಯ ಸಾರ್ಥಕದ ಪಯಣ ಹಾದಿಯನ್ನು ಮುಗಿಸಿ ಇದೀಗ ವಯೋನಿವೃತ್ತಿ ಹೊಂದುತ್ತಿರುವುದು ಸಾರ್ಥಕದ ಸೇವೆಯಾಗಿದ್ದು ನಿವೃತ್ತಿ ವೇಳೆಯಲ್ಲಿ ಆರೋಗ್ಯಕರ ಜೀವನ ಸಾಗಿಸಲಿ ಎಂದು ಪತ್ರಿಕೆ ಆಶಯವಾಗಿದೆ..