ಜಗಳೂರು ತಾಲ್ಲೂಕಿನಲ್ಲಿ ವಿವಿಧ ಬಾಗಗಳಲ್ಲಿ ಗಾಳಿ ಮಳೆಗೆ ತೋಟಗಾರಿಕೆ ಬೆಳೆ ಹಾನಿಯಾಗಿರುವ ವರದಿಯಾಗಿದೆ. ಬಾನುವಾರ ಸುರಿದ ಗಾಳಿ ಮಳೆಗೆ ಜಗಳೂರು ತಾಲ್ಲೂಕಿನ ಮಲೆ ಮಾಚಿಕೆರೆ ಗುರುಸಿದ್ದಾಪುರ ಸೊಕ್ಕೆ ಸೇರಿದಂತೆ ವಿವಿಧ ಬಾಗಗಳಲ್ಲಿ ಅತಿಯಾದ ಬಿರು ಗಾಳಿ ಮಳೆಗೆ ತೋಟಗಾರಿಕೆ ಬೆಳೆಗಳಾದ ಬಾಳೆ ಗಿಡಗಳು ಧರೆಗೆ ಉರುಳಿವೆ.ಸ್ಥಳಕ್ಕೆ ಜಂಟಿನಿರ್ದೇಶಕ ಡಾ ವಿಶ್ವನಾಥ ಹಾಗೂ ಹಿರಿಯ ತೋಟಗಾರಿಕೆ ಅಧಿಕಾರಿ ವೆಂಕಟೇಮೂರ್ತಿ ಹಾನಿಯಾಗಿರುವ ರೈತರ ಜಮಿನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆ ಪರಿಹಾರವನ್ನು ತಮ್ಮ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ..