ದಿನಾಂಕ 13 ರಂದು ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ಲೋಕರ್ಪಣೆಗೊಳ್ಳಲಿದೆ ಎಂದು ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ ಸಿದ್ದಪ್ಪ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ಅಂಬೇಡ್ಕರ್ ಪುತ್ಥಳಿ ಸಮಿತಿ ವತಿಯಿಂದ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದರು ಸಂವಿಧಾನ ಶಿಲ್ಪಿ ವಿಶ್ವದ ಜ್ಞಾನಿ ಅಂಬೇಡ್ಕರ್ ರವರ ಪುತ್ಥಳಿ ಕ್ಷೇತ್ರದಲ್ಲಿ ನಿರ್ಮಿಸಲು ನಮ್ಮ ಬಹುದಿನದ ಬೇಡಿಕೆ ಯಾಗಿತ್ತು .ಈ ಬಾಗದ ಬಹುಜನರ ಬಹುದಿನದ ಬೇಡಿಯಂತೆ ನಮ್ಮ ಶಾಸಕ ಎಸ್ ವಿ ರಾಮಚಂದ್ರಪ್ಪರವರು ನೀಡಿದ ದೇಣಿಗೆ ಹಣದ ಸಹಾಯ ಸಹಕಾರದಿಂದ ಪುತ್ಥಳಿ ಉತ್ತಮ ಶಿಲ್ಪಿಯಿಂದ ಹೈದರಾಬಾದ್ ನಲ್ಲಿ ತಯಾರು ಮಾಡಲಾಗಿದ್ದು ಇದೀಗ ಇದೆ ತಿಂಗಳು 13 ರಂದು ಲೋಕರ್ಪಣೆಗೊಳ್ಳಲಿದೆ ಆದ್ದರಿಂದ. ಅಂಬೇಡ್ಕರ್ ಅಭಿಮಾನಿಗಳು ಪ್ರಗತಿಪರ ಸಂಘಟಕರು .ಬುದ್ಧಿಜೀವಿಗಳು.ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲೋಕರ್ಪಣೆ ಕಾರ್ಯಕ್ರಮವನ್ನು ಯಶಸ್ವಿಗೋಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ವಕೀಲರಾದ ಹನುಮಂತಪ್ಪ ಮಾತನಾಡಿ ಈಗಾಗಲೇ ಅಂಬೇಡ್ಕರ್ ಪುತ್ಥಳಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಲೋಕರ್ಪಣೆಗೆ ಪೂರ್ವತಯಾರಿ ನಡೆಸಲಾಗಿದೆ.ಪುತ್ಥಳಿ ಸುಮಾರು 8 ಅಡಿ ಎತ್ತರವಿದ್ದು 362 ಕೆ ಜಿ ತೂಕ ಹೊಂದಿದೆ .ಪುತ್ಥಳಿ ನಿರ್ಮಾಣದ ಸುತ್ತಳತೆಯ ಕಟ್ಟೆ ಹಾಗೂ ಸುತ್ತಲು ತಡೆಗೋಡೆ ನಿರ್ಮಿಸಲು ಪಪಂ ಇಲಾಖೆಯಲ್ಲಿ ಮೀಸಲಾಗಿದ್ದ 3 ಲಕ್ಷ ಅನುದಾನವನ್ನು ಕಾಮಗಾರಿಗೆ ಬಳಕೆ ಮಾಡಲಾಗಿದೆ. ಅಂಬೇಡ್ಕರ್ ಪುತ್ಥಳಿಯನ್ನು ಶಾಸಕರ ಸಂಪೂರ್ಣ ಸಹಕಾರದ ಕೊಡುಗೆಯಿಂದ ಪುತ್ಥಳಿ ತರಲಾಗಿದ್ದು ಶೀಘ್ರವೆ ದಿ 13 ರಂದು ಲೋಕರ್ಪಣೆಗೊಳ್ಳಲಿದೆ .ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾ ಸಂಸದ ಜಿ ಎಂ ಸಿದ್ದೇಶ್ವರ ಸೇರಿದಂತೆ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ ಹಾಗೂ ಕೇಂದ್ರ ಸಚಿವ ನಾರಾಯಣ ಸ್ವಾಮಿ .ಸಚಿವರಾದ ಗೋವಿಂದ ಕಾರಜೋಳ ಇನ್ನಿತರೆ ಜನಪ್ರತಿನಿಧಿಗಳು ಆಗಮಿಸುವರು ಮಹಾನಾಯಕನ ಪ್ರತಿಮೆಯನ್ನು ಸರ್ಕಾರದ ನೀಯಮದಂತೆ ಲೋಕರ್ಪಣೆಗೋಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿ ಸದಸ್ಯ ಹುನುಮಂತಪುರ ಸತೀಶ್. ಮುಖಂಡ ಗೊಲ್ಲರಹಟ್ಟಿ ತಿಪ್ಪೇಶ್.ಮಲೆ ಮಾಚಿಕೆರೆ ಸತೀಶ್ .ಪ್ರಗತಿಪರ ಮುಖಂಡ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ. ಕೋಟಿ ಸೇರಿದಂತೆ ಮುಂತಾದವರು ಹಾಜರಿದ್ದರು.