ಜಗಳೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪರವರಿಗೆ ಅನುದಾನ ರಹಿತ ಶಾಲಾ ಶಿಕ್ಷಕರಿಂದ ಅಭಿನಂದನೆ ಸಲ್ಲಿಸಿದರು. ತಾಲ್ಲೂಕಿನ ಎಲ್ಲಾ ಖಾಸಗಿ ಶಾಲಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಪಟ್ಟಣದ ಅವರ ನಿವಾಸದಲ್ಲಿ ಭೇಟಿ ನೀಡಿ ಸೋಮವಾರ ಸನ್ಮಾನಿಸಿ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಖಾಸಗಿ ಶಾಲಾ ಸಂಸ್ಥೆ ಅಧ್ಯಕ್ಷರಾದ ಲೋಕೇಶ್.ಪಿ ಎಸ್ ಅರವಿಂದನ್ ಇಮಾಮ್ ಶಾಲೆ ಆಡಳಿತಧಿಕಾರಿ ಮಹಮದ್ ಮುನ್ನ .ತಿಪ್ಪೇಸ್ವಾಮಿ. ವೀರೇಶ್. ಮತ್ತು ಉಪಾಧ್ಯಕ್ಷರು ಹಾಗು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.