ಶುಕ್ರದೆಸೆ ನ್ಯೂಸ್:- ಬೇಸಿಗೆ ರಜಾ ಮುಗಿಸಿ ಶಾಲೆ ಕಡೆಗೆ ಮುಖಮಾಡಿದ ಅಂಗನವಾಡಿ ಬಾಲವಾಡಿ ಪುಟ್ಟಾಣಿ ಮಕ್ಕಳಿಗೆ ನೂತನ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರು ಸಿಹಿ ತಿನಿಸಿ ಅಕ್ಕರೆ ಸ್ವಾಗತ ಕೋರಿದರು.
ಮಕ್ಕಳ ಬರುವಿಕೆಗಾಗಿ ಶೃಂಗಾರಗೊಂಡ ಅಂಗನವಾಡಿ ಕೇಂದ್ರ ಮಕ್ಕಳು ಸೇವಿಸುವ ಪೌಷ್ಟಿಕ ಆಹಾರ ದಿನಸಿ ಆಹಾರ ಪದಾರ್ಥಗಳು ಸಾಲಲ್ಲಿಟ್ಟು ಪ್ರಾರಂಭತ್ಸೋವಕ್ಕೆ ಅಂಗನವಾಡಿ ಕೇಂದ್ರ ಕಾರ್ಯಕರ್ತೆಯರು ಉತ್ಸಾಹದಿಂದ ಸಜ್ಜಾಗಿದ್ದರು ಶಾಸಕರು ಗಿಡಕ್ಕೆ ನೀರು ಎರೆಯುವ ಮೂಲಕ ಪ್ರಾರಂಭತ್ಸೋವಕ್ಕೆ ಚಾಲನೆ ನೀಡಿ ನಂತರ ಮಕ್ಕಳನ್ನು ಕುರಿತು ಮಾತನಾಡಿದರು.
ಜಗಳೂರು ಪಟ್ಟಣದ ಭುವನೇಶ್ವರಿ ವೃತ್ತದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಇಂದು ಶಾಸಕರು ಭೇಟಿ ನೀಡಿ ಬೇಸಿಗೆ ರಜೆ ಮುಗಿಸಿ ಅಂಗನವಾಡಿ ಕೇಂದ್ರಕ್ಕೆ ಅಕ್ಕರೆಯಿಂದ ಬರುವ ಮಕ್ಕಳಿಗೆ ಸ್ವಾಗತಿಸಿದರು. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುದ್ದು ಪುಟಾಣಿ ಗಳಿಗೆ ಸಿಹಿ ತಿನಿಸಿ ಮಕ್ಕಳಿಗೆ ಶುಭಾ ಹಾರೈಸಿದರು.ಮಹಿಳೆ ಮತ್ತು ಮಕ್ಕಳಿಗೆ ಹಾಗೂ ಗರ್ಭಿಣೆ ಬಾಣಂತಿರಿಗೆ ಕೇಂದ್ರದಲ್ಲಿ ಸಿಗುವ ಸರ್ಕಾರಿ ಸೌಲಭ್ಯಗಳಾದ ಪೌಷ್ಟಿಕ ಆಹಾರ ಹಾಲು ಮೊಟ್ಟೆ ಬಾಳೆಹಣ್ಣು ಹೆಸರು ಬ್ಯಾಳೆ ಇನ್ನಿತರೆ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ವಿತರಿಸುವಂತೆ ತಿಳಿಸಿದರು .ಮಕ್ಕಳು ದೇವರ ಸಮಾನರು ಮಕ್ಕಳು ಪೌಷ್ಟಿಕ ಅಹಾರ ದುರ್ಬಳಕೆಯಾಗದಂತೆ ಸಿಡಿಪಿಓ ಅಧಿಕಾರಿ ನಿಗಾವಹಿಸಿ ಕೆಲಸ ಮಾಡಿ ಎಂದು ಶಾಸಕರು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಬೀರೆಂದ್ರಕುಮಾರ್ .ಪಪಂ ಸದಸ್ಯರಾದ ರವಿಕುಮಾರ್ ಸುಪರ್ ವೈಜ್ ರ್ ಶಾಂತಮ್ಮ.ಕಾಂಗ್ರೆಸ್ ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್.ಪಲ್ಲಾಗಟ್ಟೆ ಶೇಖರಪ್ಪ. ಮುಖಂಡ ತಿಪ್ಪೇಸ್ವಾಮಿ ಸೇರಿದಂತೆ ಅಂಗನವಾಡಿ ಶಿಕ್ಷಕಿಯರು ಹಾಗು ಸಹಾಯಕಿಯರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.