ಏನಿದು ಘಟನೆ..ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ ಪಿ ಹರೀಶ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ದಲಿತ ಮುಖಂಡರು ಹಾಗೂ ಕೆಲ ಪೌರ ಕಾರ್ಮಿಕರು ದಾವಣಗೆರೆ ನಿವಾಸದ ಬಳಿ ಅಭಿನಂದನೆ ತಿಳಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಶಾಸಕ ಬಿ ಪಿ ಹರೀಶ್ ಅವರು ಆಕ್ಷೇಪಾರ್ಹ ಹೇಳಿಕೆ ಮೂಲಕ ನಿಂದನೆ ಮಾಡಿದ್ದರು.
/ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಅವರು, ಒಳ ಮೀಸಲಾತಿ ಪಡೆದ ಮಾದಿಗ ಸಮಾಜ ನಮ್ಮ ಜತೆ ಇರಬೇಕಿತ್ತು, ಬಂಜಾರ ಭೋವಿ ಅವರು ನಮಗೆ ಮತ ಹಾಕಿಲ್ಲ ಎಂದು ಬೇಜಾರು ಇಲ್ಲ. ಅದ್ರೇ ಅವರಿಗೆ ಸಹಾಯ ಮಾಡಿದ್ರು ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷ ಈ ಪರಿಸ್ಥಿತಿಗೆ ಬರಲು ಕಾರಣ ಅವರ ಕಾಲೋನಿಯಲ್ಲಿ ಮತಗಳು ಕಡಿಮೆ ಬಂದಿವೆ.”ಸ್ವಾಭಾವಿಕವಾಗಿ ನಾವು ಹೇಳ್ತಿವಿ. ನಿಮ್ಮ ಅಪ್ಪಗೆ ಹುಟ್ಟಿದ್ರೇ ಹೊಡಿಯಪ್ಪ ಎಂದು, ಅವನು ಹೊಡೆದ್ರೆ ಮಾತ್ರ ಅವನು ಅಪ್ಪನಿಗೆ ಹುಟ್ಟಿದವನಲ್ಲ ಇದು ಲೋಕಾರೂಢಿ. ಅಪ್ಪನಿಗೆ ಹುಟ್ಟಿದವರು ಮಾತ್ರ ಮತ ಹಾಕಿದ್ದು ಎಂದು ಅಂದಿದ್ದು ಸತ್ಯ” ಎಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೀಗ ನೂತನ ಶಾಸಕ ಹರೀಶ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ದಾವಣಗೆರೆಯ ಎಸ್ಪಿ ಅರುಣ್ ಅವರು ದೂರು ದಾಖಲಾಗಿರುವುದನ್ನು ಖಾತ್ರಿ ಪಡಿಸಿದ್ದಾರೆ.
ಜಾತಿ ನಿಂದನೆ ಆರೋಪ: ಹರಿಹರ ಶಾಸಕ ಹರೀಶ್ ವಿರುದ್ಧ ಪ್ರಕರಣ
ದಾವಣಗೆರೆ: ಹರಿಹರ ಶಾಸಕರಾಗಿ ಆಯ್ಕೆಯಾಗಿರುವ ಬಿ.ಪಿ.ಹರೀಶ್ ವಿರುದ್ಧ ದಾವಣಗೆರೆ ಜಿಲ್ಲಾ ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೂತನವಾಗಿ ಆಯ್ಕೆಯಾದ ಶಾಸಕ ಬಿ ಪಿ ಹರೀಶ್ ರವರಿಗೆ ದಿನಾಂಕ ಮೆ 16 ರಂದು ಅಭಿನಂದನೆ ಸಲ್ಲಿಸಲು ಮಾದಿಗ ಸಮುದಾಯದ ಪೌರಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ಮಾದಿಗ ಸಮಾಜದ ಮುಖಂಡರು ತೆರಳಿದ ಸಂದರ್ಭದಲ್ಲಿ ನನಗೆ ಮತ ನೀಡಿರುವುದಿಲ್ಲ ಮಾದಿಗ ಸಮುದಾಯ ಎಂದು ಜಾತಿ ನಿಂದನೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿ ತಮಗೆ ಆಘಾತವಾಗಿದೆ ಎಂದು ಬಿಎಸ್ಪಿ ಮುಖಂಡ ಹನುಮಂತಪ್ಪ ದೂರು ನೀಡಿದ್ದರು.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಅವರು ಹೇಳಿದ್ದಾರೆ.
ಹರೀಶ್ ಅವರು 7 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, 2 ಬಾರಿ ಗೆಲುವು ಸಾಧಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಹರಿಹರ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಈ ಪ್ರಕರಣವನ್ನ ಚುರುಕುಗೋಳಿಸಿ ನ್ಯಾಯ ಒದಗಿಸುವಂತೆ ಸಮುದಾಯದ ಮುಖಂಡರು ಸಂಬಂಧಿಸಿದ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.