ಜಗಳೂರು ಕ್ಷೇತ್ರ ಆಡಳಿತ ಯಂತ್ರಕ್ಕೆ ನೂತನ ಶಾಸಕ ಬಿ‌.ದೇವೆಂದ್ರಪ್ಪ ಚುರುಕು.

ಶುಕ್ರದೆಸೆ ನ್ಯೂಸ್:-


ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನೂತನ ಶಾಸಕ ಬಿ ದೇವೆಂದ್ರಪ್ಪ ರವರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮೊಟ್ಟಮೊದಲ ಬಾರಿಗೆ ತೈಮಾಸಿಕ ಸಭೆ ನಡೆಸಿದರು ನೂತನ ಶಾಸಕ ಬಿ ದೇವೆಂದ್ರಪ್ಪ ರವರ ಅದ್ಯಕ್ಷೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡು ಅನಾವಶ್ಯಕವಾಗಿ ಸಭೆಯಲ್ಲಿ ಎದ್ದು ಹೋಗುವವರುನ್ನು ನಿಲ್ಲಿಸಿ ತರಾಟೆ ತೆಗೆದುಕೊಂಡರು ಇದು ನಿಮ್ಮ ಮನೆ ಕೆಲಸವಲ್ಲ ಪ್ರಜಾಪ್ರಭುತ್ವ ಸರ್ಕಾರದ ಮಹತ್ವಾಕಾಂಕ್ಷೆ ಸಭೆ ಜನಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಭೆಯಲ್ಲಿ ಕರ್ತವ್ಯ ಶಿಸ್ತು ಸಂಯಮ ಪಾಲನೆ ಮಾಡಿ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.

ತಾಪಂ ವ್ಯವಸ್ಥಾಪಕ ರವಿಕುಮಾರ್ ಗೆ ಶಾಸಕರು ತರಾಟೆ ತೆಗೆದುಕೊಂಡರು.ನಂತರ ತಾಲ್ಲೂಕು ಆರೋಗ್ಯ ಇಲಾಖೆ ವೈದ್ಯ ಅಧಿಕಾರಿ ನಾಗರಾಜ್ ರವರಿಗೆ ತರಾಟೆ ತೆಗೆದುಕೊಂಡು ನಿಮ್ಮ ಆಸ್ಪತ್ರೆ ಅಕ್ಕಪಕ್ಕದಲ್ಲಿ ಅಶುಚಿತ್ವದಿಂದ ಕೂಡಿದ್ದು ಸ್ವಚತೆಯಿಲ್ಲದೆ ರೋಗಿಗಳಿಗೆ ನಾನಾ ಕಾಯಿಲೆ ಬರಲಿವೆ ಯಾವ ರೀತಿ ಜನರ ಆರೋಗ್ಯ ಕಾಪಾಡುವಿರಿ ನೀವು ಸ್ವಚತೆ ಮಾಡಲು ಇದುವರೆಗೂ ಮುಂದಾಗಿರುವುದಿಲ್ಲ ಏಕೆ ಎಂದು ಪ್ರಶ್ನೆಸಿದರು? ನೀವು ರಾಜಕೀಯ ಮಾಡುವುದಾದರೆ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬನ್ನಿ ಎಂದು‌ ಗರಂ ಆದ ಪ್ರಸಂಗ ಜರುಗಿತು.
ಇದು ನನ್ನ ಪ್ರಥಮ ಸಭೆಯಾಗಿದ್ದು ನಾನು ಆಳವಾಗಿ ಸಭೆ ಮಾಡಿಲ್ಲ ಇದು ಸ್ಯಾಂಪಲ್ ಮುಂದಿನ ದಿನಗಳಲ್ಲಿ ಸುದೀರ್ಘವಾಗಿ ತಾಲ್ಲೂಕು ಅಭಿವೃದ್ಧಿಗೆ ಅಧಿಕಾರಿಗಳುನ್ನು ನಿದ್ದೆ ಮಾಡಲು ಬಿಡುವುದಿಲ್ಲ ಕ್ಷೇತ್ರದಲ್ಲಿ ಎಚ್ಚರದಿಂದ ನಿಗಾವಹಿಸಿ ಜನರ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ನಿತ್ಯ ಎಚ್ಚರ ವಹಿಸುವೆ. ಅಧಿಕಾರಿಗಳು ಕುಂಟು ನೆಪಾ ಹೇಳದಂತೆ ಕರ್ತವ್ಯಕ್ಕೆ ದ್ರೋಹ ಬಗೆಯದಂತೆ ತಾಲ್ಲೂಕು ಆಡಳಿತದ ಕೊಂಡಿಯಾಗಿ‌ ಅಯ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ವಂದಿಸಿ ಇಲಾಖೆ ಯೋಜನೆಗಳುನ್ನು ಜನತೆಗೆ ತಲುಪಿಸಿ ಕೆಲಸ ಮಾಡಿ ಎಂದು ಹೇಳಿದರು. 12 ನೇ ಶತಮಾನದ ಶರಣರು ಯಾರು ಕೂಡ ವಿಶ್ವವಿದ್ಯಾಲಯಗಳಲ್ಲಿ‌ ಓದಿದವರಲ್ಲ ಆದರೆ ಈಗಿನ ಪ್ರಸ್ತುತದಲ್ಲಿ ಅವರುನ್ನು ಕುರಿತು ಪಿ ಎಚ್ ಡಿ ಮಾಡಲಾಗುತ್ತದೆ ಎಂದರೆ ಎಂತ ಭಾಗ್ಯವಾಗಿದೆ. ಅವರು ಅನುಭವ ಮಂಟಪದ ಮೂಲಕ ಕಾಯಕ ಯೋಗಿಗಳಾಗಿದ್ದರು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾಯಕಜೀವಿಗಳಾಗಿ ಕ್ಷೇತ್ರಕ್ಕೆ ಅಗತ್ಯ ಬೇಡಿಕೆಗಳಿಗೆ ಸ್ವಂದಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು .ಜಗಳೂರು ಬರಪೀಡಿತ ಪ್ರದೇಶವಾಗಿದ್ದು ಇಲ್ಲಿ ಅತಿ ಕಡಿಮೆ ಮಳೆ ಬಿಳುವ ಪ್ರದೇಶದಲ್ಲಿ ರೈತರು ಬಡವರು ಮದ್ಯಮ ವರ್ಗದವರು ಸಂಕಷ್ಟದಲ್ಲಿರುತ್ತಾರೆ . ನೂತನವಾಗಿ ನಮ್ಮ ಸರ್ಕಾರ ರಚನೆಯಾಗಿದ್ದು ಚುನಾವಣೆ ವೇಳೆಯಲ್ಲಿ ಹೇಳಿದಂತಹ ಗ್ಯಾರಂಟಿ ಪ್ರಣಾಳಿಕೆಗಳುನ್ನು ಶೀಘ್ರವೆ ಜನರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಲಿದ್ದೆವೆ. ನಾನು ನಿಮ್ಮಗಳ ಔಪಚಾರಿಕ ಮಾತುಗಳುನ್ನು ಕೇಳಲಾರೆ ನಿಮ್ಮ ಕರ್ತವ್ಯದಲ್ಲಿ ಹಾಜರಾತಿ ಕೇಳುವ ಶಾಸಕ ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿ ಪ್ರಮಾಣಿಕವಾಗಿ ಕರ್ತವ್ಯ ಮಾಡುವವರಿಗೆ ರಕ್ಷಕನಾಗುವೆ. ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

*ಕ್ಷೇತ್ರದ ಅಭಿವೃದ್ಧಿಯೆ ನನ್ನ ಗುರಿ.ಹಳೆ ಪಪಂ‌ ಕಛೇರಿಯನ್ನು ಮಾದರಿ ಶಾಸಕರ ಕಛೇರಿಯನ್ನಾಗಿ ಪರಿವರ್ತನೆಗೆ ಚಿಂತನೆ.

  • ತಾಲ್ಲೂಕಿನಲ್ಲಿ ಆಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ .
    *ಪಟ್ಟಣದ ಬಯಲು ರಂಗ ಮಂದಿರ. ಸರ್ಕಾರಿ ಪದವಿ ಪೂರ್ವ ಕಾಲೇಜು.ಹಾಗೂ ವಿದ್ಯಾನಗರದ ಪಾರ್ಕ್ ಈ ಬಾಗಗಳಲ್ಲಿ ಆಕ್ರಮ ಚಟುವಟಿಕೆಗಳ ತಾಣವಾಗಿದೆ ಪೊಲೀಸ್ ಇಲಾಖೆ ಗಸ್ತು ತಿರುಗಿ
  • ಕೊಂಡುಕುರಿ ರಂಗಯ್ಯನ ದುರ್ಗದ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಸಂರಕ್ಷಣಾಧಿಕಾರಿ ಮಹೇಶ್ ನಾಯ್ಕ್ ವಿವಿಧ ಯೋಜನೆಗಳಡಿಯಲ್ಲಿ ಕಾಮಗಾರಿ ಬೋಗಸ್ ಮಾಡಿರುವ ಮಾಹಿತಿ ನನಗಿದೆ. ತನಿಖೆ ನಡೆಸಲು ಕಡತಗಳುನ್ನು ನಮ್ಮ ಶಾಸಕರ ಕಛೇರಿಗೆ ತಲುಪಿಸಿ.
    ಗ್ರಾಮೀಣ ಬಾಗದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಇಸ್ವತ್ತು‌ ಇನ್ನಿತರೆ ಕೆಲಸಗಳಿಗೆ ಜನರಿಂದ ಲಂಚ ವಸೂಲಾತಿ ಮಾಡುತ್ತಿರುವುದು ನನ್ನ ಗಮನಕ್ಕಿದೆ.ಇವುಗಳಿಗೆ ಸಂಪೂರ್ಣ ಕಡಿವಾಣ ಹಾಕುವೆ.
    ಜನರಿಗೆ ಕುಡಿಯುವ ನೀರು ಚರಂಡಿ ಸ್ವಚತೆಗೆ ಆದ್ಯತೆ ನೀಡಿ .ಕಂದಾಯ ಇಲಾಖೆಯಿಂದ ಸಿಗುವ ವಿಧಾವ ವೇತನ ವೃದ್ಯಾಪ್ಯವೇತನ ಸೇರಿದಂತೆ‌ ರೇಷನ್ ಕಾರ್ಡಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಸೇವೆ ನೀಡುವಂತೆ ತಿಳಿಸಿದರು.
    . ಸಭೆಯಲ್ಲಿ ವಿವಿಧ ಅಧಿಕಾರಿಗಳು ವರದಿ ಮಂಡಿಸಿದರು. .

ಸಭೆಯಲ್ಲಿ ವಿವಿಧ ಅಧಿಕಾರಿಗಳು ವರದಿ ಮಂಡಿಸಿದರು. .

ಸಭೆಯಲ್ಲಿ‌ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಧಿಕಾರಿ ಮಿಥನ್ ರವರು ವರದಿ ನೀಡಿದರು. ಮುಂಗಾರು ಬಿತ್ತನೆ ಈಗಾಗಲೇ ಪ್ರಾರಂಭವಾಗಿ ಕ್ಷೇತ್ರದಲ್ಲಿ ವಾಡಿಕೆ ಪ್ರಕಾರ 528 ಮಿಲಿ ಮೀಟರ್ ಸರಾಸರಿ ಮಳೆಯಾಗಬೇಕಾಗಿದ್ದು 2023 ರ ಸಾಲಿನ ಮುಂಗಾರು 69 ಮಿಲಿಮೀಟರ್ ಮಳೆಯಾಗಿದೆ.30 ಮಿಲಿಮೀಟರ್ ಕೊರತೆಯಿದ್ದು ಮುಂಗಾರು ಹತ್ತಿ ಬಿತ್ತನೆ 433 .503 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. ರೈತರಿಗೆ ರೈತ ಸಂಪರ್ಕ ಇಲಾಖೆಯಿಂದ ಸಹಾಯಧನ ರೂಪದಲ್ಲಿ ವಿತರಿಸುವ ಬಿತ್ತನೆ ಬೀಜ ದಾಸ್ತುನು ತರಿಸಿಕೋಡಲಿದ್ದೆವೆ.ಬಿತ್ತನೆ ಬೀಜಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ರಸಗೊಬ್ಬರ ಯೂರಿಯಾ ಗೊಬ್ಬರಕ್ಕೆ ಯಾವುದೇ ಸಮಸ್ಯೆಯಿಲ್ಲದಂತೆ ಲಭ್ಯತೆಯಿದೆ.ಎಂದು ವರದಿ ನೀಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಬಿ‌.ಮಹೇಶ್ ವರದಿ ಮಂಡಿಸಿ ಈಗಾಗಲೇ ಶೈಕ್ಷಣಿಕ ಶಾಲಾ ಕಾಲೇಜುಗಳು ಆರಂಭವಾಗಿದ್ದು ಪ್ರಿಮೆಟ್ರಿಕ್ ಪೊಸ್ಟ್ ಮೆಟ್ರಿಕ್ ಹಾಸ್ಟೆಲ್ ಗಳು ಪ್ರಾರಂಭವಾಗಲಿವೆ ಪಟ್ಟಣದ ವಾಲ್ಮೀಕಿ ಭವನದ ಬಳಿಯಿರುವ ಎಸ್ಟಿ ಬಾಲಕಿಯರ ಹಾಸ್ಟೆಲ್ ನಲ್ಲಿ 250 ವಿದ್ಯಾರ್ಥಿನೀಯರಿದ್ದು ಹೆಚ್ಚಿನ ಕೊಠಡಿಗಳು ಅವಶ್ಯಕತೆಯಿದೆ.
ಕಳೆದ ಬಾರಿ ಸರ್ಕಾರದಿಂದ ಅನುದಾನ ಬಂದಿದ್ದರು ಸಹ ಬಳಕೆಯಾಗದೆ ವಾಪಸ್ಸು ಆಗಿದೆ ಶಾಸಕರು ಗಮನಿಸಿ ಕೊಠಡಿಗಳುನ್ನು ಮಂಜೂರು ಮಾಡಿಸುವಂತೆ ಮನವಿ ಮಾಡಿಕೊಂಡರು.
ನಮ್ಮ ಇಲಾಖೆಯಲ್ಲಿ ಯಾವುದೆ ವಿದ್ಯಾರ್ಥಿ ವೇತನ ಬಾಕಿಯಿಲ್ಲದಂತೆ ಮಂಜೂರು ಮಾಡಿಸಿ ವಿಧ್ಯಾರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ವರದಿ ನೀಡಿದರು.

ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ್ ವರದಿ ನೀಡಿ ತಾಲ್ಲೂಕಿನಲ್ಲಿ 32‌ಸಾವಿರ ದನಗಳ ಸಂಖ್ಯೆಯಿದ್ದು 18‌ ಸಾವಿರ ಎಮ್ಮೆಗಳಿವೆ 21 ಸಾವಿರ ಮೇಕೆ ಕುರಿಗಳು ಸೇರಿದಂತೆ ಇನ್ನಿತರೆ ಪ್ರಾಣಿಗಳಿಗೆ ಅಗತ್ಯ ಜಾನುವಾರುಗಳಿಗೆ ಚರ್ಮಗಂಟು ರೋಗ ಬರದಂತೆ ಮುಂಜಾಗ್ರತೆಯಾಗಿ ಲಸಿಕೆ ಹಾಕಲಾಗುವುದು. ಕಳೆದ ಬಾರಿ ಚರ್ಮಗಂಟು ರೋಗದಿಂದ 320 ಹಸುಗಳು ಸಾವನ್ನಪ್ಪಿದ ರಾಸುಗಳಿಗೆ ಪರಿಹಾರ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್ ಮಾತನಾಡಿ ನೂತನ ಶಾಸಕರಿಗೆ ನಮ್ಮ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹಕರಿಸಿ ಅವರಿಗೆ ಕೈಜೋಡಿಸಿ ಕೆಲಸ ಮಾಡೋಣ ಎಂದು ಕಿವಿ ಮಾತು ಹೇಳಿ ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ತಾಪಂ ಇಓ ಚಂದ್ರಶೇಖರ್.ಪಿ ಎಸ್ ಐ ಸಾಗರ್. ಹರಪನಹಳ್ಳಿ ಬಾಗದ ತಹಶೀಲ್ದಾರ್ ಶಿವುಕುಮಾರ್ ಬಿರದಾರ್.ಇಓ ಪ್ರಕಾಶ್.ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!