ಶುಕ್ರದೆಸೆ ನ್ಯೂಸ್:-
ಬಸವನಕೋಟೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಜ್ಯೋತಿರ್ಲಿಂಗಪ್ಪ ಅವಿರೋಧ ಆಯ್ಕೆ
ಜಗಳೂರು ಸುದ್ದಿ:ತಾಲೂಕಿನ ಬಸವನಕೋಟೆ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಸ್. ಜ್ಯೋತಿರ್ಲಿಂಗಪ್ಪ ಉಪಾಧ್ಯಕ್ಷೆಯಾಗಿ ಸುನಿತಾ ಸಿದ್ದೇಶ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತೋಟಗಾರಿಕೆ ಇಲಾಖೆಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ ಘೋಷಿಸಿದರು.
ಇತ್ತೀಚೆಗೆ ಮಂಜಮ್ಮ ಭೀಮಪ್ಪ ಅವರ ರಾಜಿನಾಮೆ ಯಿಂದ ಅಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆ ಇಂದು ಚುನಾವಣೆ ನಡೆಸಲಾಯಿತು.ಒಟ್ಟು 14 ಜನಸದಸ್ಯರನ್ನೊಳಗೊಂಡಿದ್ದು.ಜ್ಯೋತಿರ್ಲಿಂಗಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಸಿಂಧುವಾದ್ದರಿಂದ ಸರ್ವಾನುಮತದಿಂದ ಆಯ್ಕೆಮಾಡಲಾಯಿತು ಎಂದು ತಿಳಿಸಿದರು.
ಸಂದರ್ಭದಲ್ಲಿ ಪಿಡಿಓ ತಿಮ್ಮೇಶ್,ಸದಸ್ಯರಾದ ಮಂಜಮ್ಮ,ದೇವರಾಜ್,ರೇಖಾ ತಿಮ್ಮೇಶ್,ರೇಖಾ ಕೊಟ್ರೇಶ್,ಯಲ್ಲಮ್ಮ ಮರಿಯಮ್ಮ,ಸುನಿತಾ,ಬಿಟಿ.ಬಸವರಾಜ್,ಶರಣಪ್ಪ,ಕೊಟ್ರೇಶ್,ನಗೀನಾಬಾನುಶಮಿವುಲ್ಲಾ,ಸುನಿತಾ ಸಿದ್ದೇಶ್ ,ಲಲಿತಮ್ಮ ಗಾದ್ರೆಪ್ಪ,ಕೊಟ್ರೇಶಪ್ಪ,ಸುಂದರಪ್ಪ,ಬಿಲ್ ಕಲೆಕ್ಟರ್ ಕರಿಬಸಪ್ಪ ಸೇರಿದಂತೆ ಇದ್ದರು.