ಶುಕ್ರದೆಸೆ ನ್ಯೂಸ್:-
ಜಗಳೂರು ವಿಧಾನಸಭಾ ಕ್ಷೇತ್ರದ ಅರಸಿಕೆರೆ ಗ್ರಾಮದ ಶ್ರೀ ಕೊಲಾ ಶಾಂತೇಶ್ವರ್ ಮಠದ ಸಮುದಾಯ ಭವನದಲ್ಲಿ ಇಂದು ನಡೆದ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಕೃತಜ್ಞತಾ ಸಭೆಯನ್ನು ಏರ್ಪಡಿಸಲಾಗಿತ್ತು. ದಿವ್ಯ ಸಾನಿದ್ಯವನ್ನು ಮಠದ ಪೀಠಧಿಪತಿಗಳಾದ ಶ್ರೀ ಕೋಲಾಶಾಂತೇಶ್ವರ ಮಠದ ಶ್ರೀಗಳು ಮಾತನಾಡಿದರು ಕರ್ತವ್ಯವೆ ದೇವರೆಂದು ಪರಿಪಾಲನೆ ಮಾಡುವ ಮೂಲಕ ತನಗೆ ಸಿಕ್ಕ ಡಿ ಗ್ರೂಪ್ ಹುದ್ದೆಯನ್ನ ಖಾಸಗಿ ಕಾಲೇಜಿನಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿ ಇದೀಗ ನೂತನ ಶಾಸಕರಾಗಿ ಆಯ್ಕೆಯಾಗಿರುವ ಬಿ ದೇವೆಂದ್ರಪ್ಪ ಕಾರ್ಯ ಶ್ಲಾಘನೀಯ ಅವರ ಕಾರ್ಯ ಅವಧಿಯಲ್ಲಿ ಅವರು ಇವರು ಎನ್ನದೆ ಜಗಳೂರು ಅರಸಿಕೆರೆ ಬಾಗದ ಅಭಿವೃದ್ಧಿಗೆ ಒತ್ತು ನೀಡಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು.
ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರು ಕಾರ್ಯಕರ್ತರಿಗೆ ಕೃತಜ್ಞತೆ ತಿಳಿಸಿ ನಂತರ ಅಭಿನಂದನೆ ಸ್ವಿಕರಿಸಿ ಕಾರ್ಯಕರ್ತರುನ್ನು ಉದ್ದಶಿಸಿ ಮಾತನಾಡಿದರು ನಾನು ಪ್ರಮಾಣಿಕ ಸೇವೆ ಮಾಡಲು ಜನರ ಸಹಕಾರ ಅತ್ಯಗತ್ಯ .ಕಾಂಗ್ರೆಸ್ ಪಕ್ಷ ಎನ್ನುವುದು ಸಮುದ್ರ ಇದ್ದ ಹಾಗೆ ನಾನು ಪಕ್ಷದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ವರ್ದಿಸಿದ ಸಂದರ್ಭದಲ್ಲಿ ಕೆಲ ವಿರೋಧಿಗಳು ರೌಡಿ ಪಟ್ಟ ಕಟ್ಟಿ ಅಪ ಪ್ರಚಾರ ಮಾಡಿದ್ದರು ಅಂತ ಷಡ್ಯಂತ್ರ ಕ್ಕೆ ಜನ ಮನ್ನಣೆ ನೀಡಲಿಲ್ಲ.
ಪ್ರವಾಹ ವಿರುದ್ದ ಯಾರು ಈಜಲು ಹೋದರು ಅವರೆ ಆಳಾಗಿದ್ದಾರೆ. ಡಬ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಕಳಚಿದ್ದು ಕೇಂದ್ರದ ಡಬ್ ಇಂಜಿನ್ ಸರ್ಕಾರ ಮುಂದಿನ ಲೋಕಸಭಾ ವೇಳೆಗೆ ಪಥನವಾಗುವುದು. ಆದರೆ ಕೆಲವರು ಚುನಾವಣೆ ವೇಳೆಯಲ್ಲಿ ಬೆನ್ನಿಗೆ ಚೂರಿ ಹಾಕುವಂತ ಕೆಲಸ ಮಾಡಿದರು ಪಕ್ಷದಲ್ಲಿದ್ದುಕೊಂಡೆ ಎದೆಗೆ ಚೂರಿ ಹಾಕಿರುವುದು ಮಹಾ ದ್ರೋಹ .ಪಕ್ಷ ನಿಷ್ಠೆಗೆ ಬದ್ದರಾಗಿ ನಮ್ಮ ಮುಂದಿರುವ ಸವಾಲುಗಳುನ್ನು ಎಚ್ಚರದಿಂದ ಚುನಾವಣೆ ನಡೆಸಬೇಕಾದ ಅನಿವಾರ್ಯತೆಯಿದೆ. ಎಂದು ತಿಳಿಸಿದರು.ನಾಳೆಯಿಂದ ಮೂರು ಪಂಚಾಯತಿ ಯ ಬೇಟಿ ಮಾಡಿ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮಟ್ಟಿಸಲು ಪ್ರಯತ್ನ ನಡೆಸುವೆ. ಈ ಬಾಗದಲ್ಲಯೇ ಕೆ ಡಿ ಪಿ ಸಭೆ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಬದ್ದವಾಗಿ ಅಭಿವೃದ್ಧಿಗೆ ಒತ್ತು ಕೋಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ನೂತನವಾಗಿ ಶಾಸಕರ ಜನ ಸಂಪರ್ಕ ಕಛೇರಿ ಪ್ರಾರಂಭಕ್ಕೆ ಒತ್ತು ನೀಡಿ .ಏಳು ಪಂಚಾಯತಿ ಜನಾಭಿಪ್ರಾಯದೊಂದಿಗೆ ಶಾಸಕರ ಕಛೇರಿ ಉದ್ಗಾಟನೆ ಮಾಡಿ
ವಾರಕ್ಕೊಂದು ಬಾರಿ ಜನ ಸಂಪರ್ಕಕ್ಕೆ ಭೇಟಿ ನೀಡಿ ಜನರ ಆವಾಲು ಸ್ವಿಕರಿಸಿ ಸಮಸ್ಯೆ ಆಲಿಸುವೆ..
ಕಾನೂನು ಮೂಲಕ ಅಧಿಕಾರಿಗಳಿಗೆ ಕೆಲಸ ಮಾಡಿಸುವೆ. ಶ್ರೀಮಂತಿಕೆ ಇದ್ದರೆ ನಮಗೇನು ಹಣ ಬಲವು ಜನ ಬಲವು ನೋಡೆ ಬಿಡ್ತಿನಿ ಅಧಿಕಾರಿಗಳ ಮೂಲಕ ಆಕ್ರಮವಾಗಿ ನಡೆಯುವ ವ್ಯವಹಾರಕ್ಕೆ ಕಟ್ ಮಾಡುವೆ..ನಮ್ಮ ಬದುಕಿನಲ್ಲಿ ಯಾರಾದರು ತೊಂದರೆ ಕೊಟ್ಟರೆ ಸುಮ್ಮನೆ ಬಿಡಲ್ಲ. ಎಂದು ವಿರೋಧಿಗಳಿಗೆ ನೂತನ ಶಾಸಕರು ವಾಗ್ದಾಳಿ ನಡೆಸಿದ್ದಾರೆ..
ನನ್ನ ಗಾಡಿಯಲ್ಲಿ ಯಾವಾಗಲೂ ಒಂದು ಚಲಿಕೆ ಪುಟ್ಟಿ ಕಸಬರಿಕೆ ಇರುತ್ತೆ ಅಧಿಕಾರಿಗಳು ಯಾರು ಕೆಲಸ ಮಾಡಲು ಹಿಂದೆಟು ಹಾಕುವರು ಅವರ ಕಛೇರಿಗೆ ನಾನೆ ಹೋಗಿ ಕಸ ಗೂಡಿಸಿ ಸೋಮಾರಿ ಅಧಿಕಾರಿಗಳುನ್ನು ಮುಖ್ಯಮಂತ್ರಿ ಬಳಿ ಕಳಿಸುವೆ.
ನನಗೆ ಬರುವ ಎರಡು ಲಕ್ಷ ರೂಗಳ ಶಾಸಕರ ಸಂಬಳದ ಭತ್ಯೆದಲ್ಲಿ ಪೌರ ಕಾರ್ಮಿಕರಿಗೆ ಮಿಸಲಿಡುವೆ.
ಕಳೆದ ಮಾಜಿ ಶಾಸಕ ಎಸ್ ವಿ ರಾಮಚಂದ್ರ ಕಾಂಗ್ರೇಸ್ ಪಕ್ಷದಲ್ಲಿ ಗೆದ್ದು ಲಾಭಿ ಮಾಡಿಕೊಂಡು ಬಿಜೆಪಿಗೆ ತನ್ನನ್ನು ತಾನು ಮಾರಿಕೊಂಡು ಹೋದಂತೆ ನಾನು ಹೋಗುವ ಶಾಸಕನಲ್ಲ ನನಗೆ ಈ ಹುದ್ದೆ ಬೇಡ ಎನ್ನಿಸಿದರೆ 224 ಕ್ಷೇತ್ರದಲ್ಲಿ ವಿಶೇಷವಾಗಿ ನಾನೇ ರಾಜಿನಾಮೆ ಕೊಟ್ಟು ಮನೆಗೆ ಹೋಗುವೆ ಅಧಿಕಾರ ಯಾವುದು ಶಾಶ್ವತವಲ್ಲ .ಆದರೆ ನಿಮ್ಮೆಲ್ಲರ ಅಶಿರ್ವಾದಿಂದ ಉತ್ತಮ ಆಡಳಿತ ನಡೆಸುವೆ ಎಂದು ಹೇಳಿದ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ನಮ್ಮ ವರೀಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಪಕ್ಷ ಸಂಘಟನೆ ಹೋರಾಟದ ಪ್ರತಿಫಲವಾಗಿ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ತೋಲಗಿದೆ ಕಾಂಗ್ರೆಸ್ ಇದೀಗ ರಾಜ್ಯದಲ್ಲಿ ಜಯಬೇರಿ ಬಾರಿಸಿ .ಡಬಲ್ ಇಂಜಿನ್ ಸರ್ಕಾವನ್ನ ಹೀನಾಯವಾಗಿ ಸೋಲಿಸಿದ್ದೆವೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರವಲ್ಲ ಅದು ಡಬ್ ಇಂಜಿನ್ ಸರ್ಕಾರ ಎಂದು ಹಾಸ್ಯಸ್ಪದ ಮಾಡಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ನೂತನವಾಗಿ ಆಯ್ಕೆಯಾಗಿರುವ ಜಗಳೂರು ಕ್ಷೇತ್ರದ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರು ಬಡವರ .ಹಿಂದೂಳಿದವರ .ದೀನದಲಿತರ ನೋವುಂಡವರು ಇಂತ ಪ್ರತಿಭೆಯಿರುವ ರಾಜಕಾರಣಿಗಳಿಗೆ ನಮ್ಮ ಪಕ್ಷದ ಕಾರ್ಯಕರ್ತರು ದೇವೆಂದ್ರಪ್ಪ ರವರ ಗೆಲುವಿಗೆ ಸಹಕಾರ ನೀಡಿ ಉತ್ತಮ ಶಾಸಕರುನ್ನು ಆಯ್ಕೆ ಮಾಡಿದ ಕೀರ್ತಿ ನಮ್ಮ ಕಾರ್ಯಕರ್ತರಿಗೆ ಸಲ್ಲಲ್ಲಿದೆ . ಬಡತನದ ಬೇಗೆಯಲ್ಲಿ ಬೆಳೆದು ಬಂದ ನೂತನ ಶಾಸಕರು ಕ್ಷೇತ್ರದಲ್ಲಿ ಉತ್ತಮ ಆಡಳಿತ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮತದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ ಮತದಾರರ ಆಶೋತ್ತರಗಳಿಗೆ ಸ್ವಂದಿಸಿ ಕೆಲಸ ಮಾಡಿ ಎಂದು ಶಾಸಕರಿಗೆ ಕಿವಿ ಮಾತು ಹೇಳಿದರು.ನಮ್ಮ ಪಕ್ಷದ ಕಾರ್ಯಕರ್ತರು
ಬರುವ ಲೋಕಸಭಾ ಚುನಾವಣೆಯಲ್ಲಿಯು ಸಹ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಚಂಡ ಬಹುಮತದಿಂದ ಗೆಲುವಿಗೆ ತಯಾರಿ ಜವಾಬ್ದರಿ ನಮ್ಮ ಮೇಲಿದೆ.ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಚುನಾವಣೆ ವೇಳೆಯಲ್ಲಿ ನೀಡಿರುವ ಗ್ಯಾರಂಟಿ ಅಶ್ವಾಸನೆಗಳನ್ನು 5 ಗ್ಯಾರಂಟಿ ಯೋಜನೆಗಳುನ್ನು ಈಗಾಗಲೇ ನಮ್ಮ ಸರ್ಕಾರ ಸಮರ್ಪವಾಗಿ ಆದೇಶ ಮಾಡಿ ಜನಪರವಾದ ಕಾಂಗ್ರೆಸ್ ಬರುವ ಲೋಸಭಾ ಚುನಾವಣೆಯಲ್ಲಿ ಕೇಂದ್ರ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ ಕಷ್ಟದ ಕಾಲದಲ್ಲಿ ಗಟ್ಟಿ ಕಾಳುಗಳಂತೆ ಮತದಾರರುನ್ನು ಮನವೋಲಿಸಿ ಮತ ಹಾಕಿಸಿದ ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆಗಳು ಸಲ್ಲಿಸಿದರು. ಇದೀಗ ನಮ್ಮ ಮುಂದೆ ಸವಾಲುಗಳಿವೆ ಜಿಪಂ. ತಾಪಂ ಚುನಾವಣೆ ಲೋಕಸಭಾ ಚುನಾವಣೆ ಬರಲಿದ್ದು ಕಾರ್ಯಕರ್ತರ ಪ್ರಮಾಣಿಕವಾಗಿ ಶ್ರಮಿಸಿ ರಾಜ್ಯದಲ್ಲಿ ಹೆಚ್ಚು ಬಹುಮತ ನೀಡಿ ಲೋಕಸಭಾ ಚುನಾವಣೆ ಹೆಚ್ಚು ಸ್ಥಾನಗಳು ಬರುವಂತೆ ಕಾರ್ಯಕರ್ತರು ಶಾಸಕರುನ್ನು ಸರಿಯಾದ ರೀತಿ ಸದುಪಯೋಗ ಪಡೆದುಕೊಂಡು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.. ನೂತನವಾಗಿ ಅರಸಿಕೆರೆಯಲ್ಲಿ ಕಛೇರಿ ತೆರೆಯಲಾಗುವುದು. 5 ಗ್ಯಾರಂಟಿ ಯೋಜನೆಗಳುನ್ಬು ಮನೆ ಮನೆಗೆ ಕಾರ್ಯಕರ್ತರು ತಲುಪಿಸುವಂತ ಕೆಲಸ ಮಾಡಿ .ರಾಜ್ಯದಲ್ಲಿ ಬಿಜೆಪಿ 9 ವರ್ಷ ಆಳ್ವಿಕೆ ನಡೆಸಿದರು ಸಹ 51 ಕೋಟಿ ಯೋಜನೆಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಒಂದು ವರ್ಷಕ್ಕೆ ಮೋದಿ ಸರ್ಕಾರ ಕಿಸಾನ್ ಯೋಜನೆಡಿ ಕೇವಲ ಒಬ್ಬ ರೈತರಿಗೆ ಆರು ಸಾವಿರ ಹಣ ನೀಡಿ ಬಹುದೊಡ್ಡ ಸಾದನೆಯೆಂದು ಬೀಗುವರು.ಇದೀಗ ರಾಜ್ಯಸರ್ಕಾರ
ನಮ್ಮ ಪಕ್ಷದ ಎಲ್ಲಾ ಯೋಜನೆಗಳು ಸೇರಿದಂತೆ ಒಂದು ಕುಟುಂಬಕ್ಕೆ ವರ್ಷಕ್ಕೆ ಸರ್ಕಾರದಿಂದ ಒಂದು ಲಕ್ಷ ಆದಾಯ ಸಿಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಹಾಗೂ ಶಾಸಕರುಗಳ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟೊಣ ಎಂದರು. ಮಾಜಿ ಶಾಸಕ ಎಸ್ ವಿ ರಾಮಚಂದ್ರ ಮಾದಿಹಳ್ಳಿ ಗ್ರಾಮದಲ್ಲಿ ಈ ಹಿಂದೆ ಹೆಚ್ಚು ಮತ ನೀಡಿರುವುದಿಲ್ಲ ಎಂದು ಮಳೆ ಬಂದು ಕೊಚ್ವಿಹೋದ ಚೆಕ್ ಡ್ಯಾಮ್ ನಿರ್ಮಿಸಲು ಮುಂದಾಗಿಲ್ಲ ಮತ ನೀಡಿಲ್ಲ ಎಂದು ಆ ಗ್ರಾಮದಲಿ ರಸ್ತೆಯನ್ನೆ ಮಾಡಿಲ್ಲ ಇಂತ ತಾರತಮ್ಯಧೊರಣೆ ಅನುಸರಿಸಿದ್ದರು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ ಅರಸಿಕೆರೆ ಬಾಗದಲ್ಲಿ 12 ಸಾವಿರ ಮತಗಳನ್ನು ಕಾಂಗ್ರೆಸ್ ಗೆಲುವಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಜಯಗಳಿಸಿದೆ ಈ ಬಾಗದ ಮತದಾರರಿಗೆ ಅಭಿನಂದನೆ ತಿಳಿಸಿದರು. ನಮ್ಮ ನೂತನ ಶಾಸಕ ಬಿ ದೇವೆಂದ್ರಪ್ಪ ರವರು ವಿಶೇಷ ಜ್ಞಾನವುಳ್ಳವರು ನೇರ ನುಡಿ . ಅಭಿವೃದ್ಧಿ ಚಿಂತನಗೆ ಸಹಕಾರ ನೀಡುವ ಮೂಲಕ ಜನತೆ ಅವರುನ್ನ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಚುನಾವಣೆ ಪ್ರಚಾರದ ವೇಳೆ ಗ್ಯಾರಂಟಿ ಯೋಜನೆಗಳು ಜಾರಿ ಮಾಡುವುದು ನಿಶ್ಚಿತ ಎಂದು ನಾವು ಹೇಳಿದಂತೆ ನಡೆದುಕೊಂಡಿದ್ದೆವೆ ಕಾಂಗ್ರೆಸ್ ರಾಜ್ಯದ ಲ್ಲಿ ನಿಚ್ಚಳ ಬಹುಮತದೊಂದಿಗೆ ಲೋಕ ಸಬಾಚುನಾವಣೆಯಲ್ಲಿ ಅತ್ಯಧಿಕ ಬಹುಮತ ಬರಲಿದೆ. ದೇಶಾದ್ಯಂತ ಕಾಂಗ್ರೆಸ್ ಅಲೆಯಿದೆ. ಸಂವಿದಾನ ಮತ್ತು ಸಮನತೆ ಉಳಿವಿಗೆ ಕಾಂಗ್ರೆಸ್ ಶ್ರಮಿಸುತ್ತಿದೆ .ಆದರೆ ವಿರೋಧ ಪಕ್ಷದವರು ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ಆಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಕವಲಹಳ್ಳಿ ರವೇಂದ್ರ
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಷಂಷೀರ್ ಆಹಮದ್. ಕಂಬತ್ತಹಳ್ಳಿ ಮಂಜಣ್ಣ.ಮುಖಂಡರಾದ ಯರಬಳ್ಳಿ ಉಮಾಪತಿ. ಮುಖಂಡರಾದ ಪೂಜಾರ ಮರಿಯಪ್ಪ. . ತಿಪ್ಪೇಸ್ವಾಮಿ..ಪಲ್ಲಾಗಟ್ಟೆ ಶೇಖರಪ್ಪ. ಮಾಜಿ ಜಿಪಂ ಸದಸ್ಯ.ಉಮಾಕ್ಕ.ದಗ್ಗಿ ಬಸವಾಪುರ ವೀರಬಸಣ್ಣ.ಹುಚ್ಚಂಗೆಣ್ಣ.ವಿಜಯ ಕೆಂಚೊಳ್.ಆಹಮದ್ ಆಲಿ.ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು. ಜರ್ನಾರ್ದನ್. ಗ್ರಾಪಂ ಅದ್ಯಕ್ಷ ಶೆಟ್ಟಿನಾಯ್ಕ.ಅಜ್ಮೂಲ.ಕುಮಾರ್.ಕುಮಾರ ನಾಯ್ಕ್. ಪುಣಬಗಟ್ಟೆ ವಕೀಲ ಕೆಂಚಣ್ಣ.ಗಣೇಶನಾಯ್ಕ್.ವಿನಾಯಕ.ಆನಂದಣ್ಣ.ಚಂದ್ರಣ್ಣ.ಮಹಮದ್ ಆಲಿ. ಸೇರಿದಂತೆ ಹಾಜರಿದ್ದರು.
ಇದೆ ಸಂದರ್ಭದಲ್ಲಿ ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನು ಶಾಸಕರಿಗೆ ತಿಳಿಸಿದರು ರಸ್ತೆ ಅಭಿವೃದ್ಧಿ ಹಾಗೂ 60 ಕೆರೆ ತುಂಬಿಸುವ ಯೋಜನೆ ಕೆಇಬಿ ಸಭ್ ಸ್ಟೇಶನ್ ಅಪೂರ್ಣಗೊಂಡಿದೆ ಪೂರ್ಣಗೋಳಿಸಿ. ಅಸ್ಪತ್ರೆ ವೈದ್ಯರುಗಳ ಸಮಸ್ಯೆ ನೀಗಿಸಿ. ಮನವಿ ಮಾಡಿದರು.