ಜಗಳೂರು : ಬಾಲ್ಯ ಹಂತದಲ್ಲಿಯೇ ಮಕ್ಕಳಿಗೆ ಪರಿಸರದ ಪ್ರಜ್ಞೆ ಮೂಡಿಸಿದರೆ ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆ ಮಾಡುವಲ್ಲಿ ಅಸಕ್ತಿ ತೋರಿಸುತ್ತಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಹೇಳಿದರು
ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಣ್ಣರಿಂದ ಸಸಿ ನೆಡಿಸಿ ಪರಿಸರದ ಬಗ್ಗೆ ತಿಳುವಳಿಕೆ ಮೂಡಿಸಿದರು
ಅಂಗನವಾಡಿ ಹಂತದಲ್ಲಿಯೇ ಮಕ್ಕಳಿಗೆ ವಿವಿದ ಬಗೆಯ ಸಸಿಗಳು ಮರಗಳು ಗಿಡ ಹೂ ಬಳ್ಳಿಗಳನ್ನ ಗುರುತಿಸಲು ಸಹಾಯವಾಗುವಂತೆ ಆವರಣ ಸುತ್ತ ಮುತ್ತಲಿನ ಮರ ಗಿಡಗಳ ಬಗ್ಗೆ ಪರಿಚಯ ಮಾಡಿಸಲಾಗುತ್ತದೆ ನಂತರ ಅವುಗಳ ಪೋಷಣೆ ಅವುಗಳಿಂದ ಮನುಷ್ಯನಿಗೆ ಆಗಬಹುದಾದ ಅನುಕೂಲಗಳನ್ನ ತಿಳಿಸುವ ಮೂಲಕ ಪ್ರಾರಂಭ ಹಂತದಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸಲಾಗುವುದು ಎಂದರು
ಇಲಾಖೆ ಸೂಚಿಸಿದ ಎಲ್ಲಾ ಕಾರ್ಯ ಚಟುವಟಿಗಳು ಮತ್ತು ಪೌಷ್ಠಿಕ ಪೂರಕ ಅಹಾರ ವಿತರಣೆ ಕಾಳುಗಳು ಬೇಯಿಸಿದ ಮೊಟ್ಟೆ ಗರ್ಭಿಣಿಯರಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು
ಬೆಳಿಗ್ಗೆ ಯಿಂದಲೇ ಸ್ಚಚ್ಚವಾಗಿ ಶುಭ್ರ ಬಟ್ಟೆ ದರಿಸಿ ಅತ್ಯಂತ ಉತ್ಸಾಹದಿಂದ ಅಂಗನವಾಡಿ ಗೆ ಬಂದ ಪುಟಾಣಿಗಳು ವಿವಿದ ಬಗೆಯ ಸಸಿ ಹಾಗು ಗಿಡ ಮರಗಳ ಬಗ್ಗೆ ತಿಳಿದುಕೊಂಡು ಶಿಕ್ಷಕಿಯರು ನೆಟ್ಟ ಗಿಡಕ್ಕೆ ನೀರು ಹಾಕುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು