ಶುಕ್ರದೆಸೆ ನ್ಯೂಸ್:-

ಜಗಳೂರು:-ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪ್ರಮಾಣಿಕವಾಗಿ ತಲುಪಿಸಿ ಎಂದು ಅಧಿಕಾರಿಗಳಿಗೆ ಶಾಸಕ ಬಿ ದೇವೆಂದ್ರಪ್ಪ ಸೂಚನೆ ನೀಡಿದರು.

ಪಟ್ಟಣದಲ್ಲಿರುವ ಸಹಾಯಕ ತೋಟಗಾರಿಕೆ ನಿರ್ದೇಶಕರ ಇಲಾಖೆಯಲ್ಲಿ ರೈತರಿಗೆ ಉಚಿತ ತರಾಕಾರಿ ಬೀಜ ಸೇರಿದಂತೆ ಪಟಾಷ್ ಪೋಷಕಾಂಶಗಳ ಗೋಬ್ಬರ ವಿತರಿಸಿ ನಂತರ ಮಾತನಾಡಿದರು .
ಜಗಳೂರು ಪ್ರದೇಶವು ಅತಿ ಹೆಚ್ಚು ಒಣ ಬೇಸಾಯದಿಂದ ಕೂಡಿದ ಪ್ರದೇಶವಾಗಿದ್ದು ಇಲ್ಲಿ‌ ಬಿಳುವ ಅಲ್ಪ ಮಳೆಗೆ ರೈತರು ತರಾಕಾರಿ ವಿವಿಧ ಬೆಳೆಗಳುನ್ನು ಬೆಳೆಯುತ್ತಿದ್ದು ಇತ್ತಿಚಿನ ದಿನಮಾನಗಳಲ್ಲಿ ವರಣುನ ಕೃಪೆಯಿಂದ ಕೆರೆಗೆ ನೀರು ಬಂದಿರುವ‌ ಭರವಸೆಯಿಂದ ನಮ್ಮ ಬಾಗದ ರೈತರು ತೋಟಗಾರಿಕೆ ಬೆಳೆಗಳುನ್ನು ಬೆಳೆಯಲು ಮುಂದಾಗಿದ್ದಾರೆ.
ರೈತರಿಗೆ ಸಿಗುವ ಇಲಾಖೆ ಸೌಲಭ್ಯಗಳನ್ನು ನಿರ್ಲಕ್ಷ್ಯ ಮಾಡದೆ ಒದಗಿಸುವಂತೆ ಕಿವಿ ಮಾತು ಹೇಳಿದರು.

ನಮ್ಮ ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ರವರು ತೋಟಗಾರಿಕೆ ಸಚಿವರಿದ್ದು ಈ ಬಾಗಕ್ಕೆ ತೋಟಗಾರಿಕೆ ಗೆ ಸಂಬಂಧಿಸಿದಂತೆ ಹೆಚ್ಚು ‌ಅನುದಾನ ತಂದು ರೈತರ ಅಭಿವೃದ್ಧಿಗೆ ಬದ್ದವಾಗಿದ್ದೆವೆ ಅಧಿಕಾರಿಗಳು ಕುಂಟು ನೆಪಾ ಹೇಳದ ಕೆಲಸ ಮಾಡಿ ಎಂದು ಚಾಟಿ ಬೀಸಿದರು ಈ ಸಂದರ್ಭದಲ್ಲಿ ರೈತರಿಗೆ ಇಲಾಖೆಯಿಂದ ಉಚಿತ ತರಕಾರಿ ಬೀಜ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ‌ ಹಿರಿಯ ತೋಟಗಾರಿಕ ಅಧಿಕಾರಿ ವೆಂಕಟೇಶ ಮೂರ್ತಿ.. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ತಾಂತ್ರಿ ಸಹಾಯಕ ನಿರ್ದೇಶಕ ಅರಣುಕುಮಾರ್.ಬಿಳಿಚೋಡು ಹೊಬಳಿ ಮಟ್ಟದ ಅಧಿಕಾರಿ ಪ್ರಸನ್ನ.ಸುನಿಲ್ ಸಿಬ್ಬಂದಿಗಳು ಸೇರಿದಂತೆ ಮುಖಂಡರಾದ ತಿಪ್ಪೇಸ್ವಾಮಿ. ಗೌಸ್.ಮಂಜುನಾಥ. ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!