ಕಾಂಗ್ರೆಸ್ ಕಛೇರಿಗೆ ಖಾಲಿ ನಿವೇಶನ ದಾನ ಮಾಡಿದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ರಸೂಲ್ ಖಾನ್ ರವರ ಸಹೋದರನ ಪುತ್ರ ಶ್ರೀ ಖಲಂದರ್ ಖಾನ್ ರವರ ಕಾರ್ಯಕ್ಕೆ ಶಾಸಕ ಬಿ.ದೇವೇಂದ್ರಪ್ಪ ಮೆಚ್ಚುಗೆ
By shukradeshe news
editor m.rajappa vyasgondanahalli
Kannada | online news portal |Kannada news online July 21_7_2026
ಜಗಳೂರು ಪಟ್ಟಣದ ನೂತನ ಕಾಂಗ್ರೆಸ್ ಕಛೇರಿ ನಿರ್ಮಿಸಲು ಖಾಲಿ ನಿವೇಶನ ದಾನ ಮಾಡಿದ ಪಟ್ಟಣದ ವರ್ತಕರ ಸಂಘದ ಅದ್ಯಕ್ಷ ಖಲಂದರ್ ಖಾನ್ ರವರ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಶಾಸಕರು ಶ್ಲಾಘನೀಯ ವ್ಯಕ್ತಡಿಸಿದ್ದಾರೆ
ಜಗಳೂರು ಕ್ಷೇತ್ರದಲ್ಲಿ ಬಹುಪಾಲು ಕಾಂಗ್ರೆಸ್ ಪಕ್ಷವೆ ಆಡಳಿತದ ಚುಕ್ಕಾಣಿಯ ಭದ್ರಕೋಟೆಯಂತಿರುವ ಪಕ್ಷ ಸಂಘಟನೆ ಮತ್ರು ಪಕ್ಷದ ಕಾರ್ಯ ಚಟುವಟಿಕೆಗಳಿಗಾಗಿ ಸೂಕ್ತವಾದ ನಿವೇಶನ ದಾನಪತ್ರ ಬರೆದು ಕೊಟ್ಟ ಖಲಂದರ್ ಖಾನ್ ರವರು ಉದಾರಿಗಳು ದಿನಾಂಕ 21_7_2026 ಮಂಗಳವಾರ
ಸಂಬಂಧಿಸಿದ ಉಪ-ನೊಂದಣಿ ಕಛೇರಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಬಿ.ದೇವೇಂದ್ರಪ್ಪ ರವರಿಗೆ ಶ್ರೀ ಖಲಂದರ್ ರವರು ದಾನವಾಗಿ ನೀಡಿದ ಖಾಲಿ ನಿವೇಶನದ ನೊಂದಣಿ ಪತ್ರವನ್ನು ಅಸ್ತಂತರಿಸಿದರು
ಈ ವೇಳೆ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ
ಮಾಜಿ ಬ್ಲಾಕ್ ಅದ್ಯಕ್ಷರಾದ ರಸೂಲ್ ಖಾನ್ ರವರು ಕಾಂಗ್ರೆಸ್ ಪಕ್ಷದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಪಕ್ಷ ನಿಷ್ಠೆಗೆ ಬದ್ದರಾಗಿದ್ದರು .ಅವರ ಸಹೋದರ ಸಂಬಂಧಿ ಖಲಂದರ್ ಖಾನ್ ಪೂರ್ವಜರಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಸದಾ ಬೆಂಬಲಿಸುವ ಮೂಲಕ ಮತ್ತೊಂದು ಹೆಜ್ಜೆ ಮುಂದೆಯಿಟ್ಟು ಪಕ್ಷದ ಕಾರ್ಯಚಟುವಟಿಕೆಗಳಿಗಾಗಿ ನಿವೇಶನ ನೀಡಿರುವುದು ಮತ್ತೊಷ್ಟು ಶಕ್ತಿ ತುಂಬಿದ್ದಾರೆ ಎಂದು ಶ್ಲಾಘೀಸಿದ್ದಾರೆ..
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್ .ಪ್ರಭಾರೆ ಉಪಾ ನೋಂದಾಣೆ ಅಧಿಕಾರಿ . ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ಡಿ.ಕೀರ್ತಿಕುಮಾರ್,ಜಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮದ್, ಮಾಜಿ ಬ್ಲಾಕ್ ಅದ್ಯಕ್ಷರಾದ ತಿಪೇಸ್ವಾಮಿಗೌಡ. ಮುಖಂಡರಾದ ಹಜರತ್ ಆಲಿ. ಮುಖಂಡ ಶಪಿ .ಪಪಂ ನಾಮ ನಿರ್ದೇಶನ ಸದಸ್ಯರಾದ ಕುರಿ ಜಯ್ಯಣ್ಣ. ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.
