ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ .ಹಾಗೂ ತಹಶೀಲ್ದಾರ್ ಜಿ ಸಂತೋಷಕುಮಾರ್ ಬೇಟಿ ನೀಡಿ ಶಾಸಕರು ವೈಯಕ್ತಿಕವಾಗಿ ತಲಾ 25000 ಸಹಾಯಧನ ನೀಡಿ ಪ್ರಕೃತಿ ವಿಕೋಪದಡಿಯಲ್ಲಿ ಸೂಕ್ತ ಪರಿಹಾರ ಕೋಡಿಸಲು ತಿಳಿಸಿದ ಅವರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಶುಕ್ರದೆಸೆ ನ್ಯೂಸ್.:-
ಜಗಳೂರು ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಕಾಟಪ್ಪ 35 ವರ್ಷ 43 ವರ್ಷದ ರಾಜಪ್ಪ ಎಂಬುವವರಿಗೆ ಇಂದು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಜರುಗಿದೆ.
ತಾಲ್ಲೂಕಿನ ಅಣಬೂರು ಬಳಿಯಿರುವ ಜಮಿನಿನಲ್ಲಿ ಹತ್ತಿ ಬೀಜ ಬಿತ್ತನೆ ಮಾಡಲು ತನ್ನ ಸಂಬಂಧಿಕರೊಂದಿಗೆ ತೆರಳಿದ ರಾಜಪ್ಪ ಮತ್ತು ಕಾಟಪ್ಪ ಎಂಬವವರು ಹೊಲಕ್ಕೆ ತೆರಳಿದ ಹಿನ್ನಲೆಯಲ್ಲಿ ಇಂದು ಸಾಯಂಕಾಲ 5.30 ರ ಸಮಯದಲ್ಲಿ ಮಳೆ ಬರುವ ಹಿನ್ನಲೆಯಲ್ಲಿ ರಾಜಪ್ಪ ಮತ್ತು ಕಾಟಪ್ಪ ಎಂಬುವರು ಬೇವಿನ ಮರದ ಬಳಿ ಆಶ್ರಯ ಪಡೆದು ಕುಳಿತುಕೊಂಡ ಸಮಯದಲ್ಲಿ ಗುಡುಗು ಸಹಿತ ಆಕಾಲಿಕ ಮಳೆ ಬರುವ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಎಂದು ತಿಳಿದು ಬಂದಿದೆ .
ಇಂದು ಬೆಳಿಗ್ಗೆ ಜಮಿನಿಗೆ ಒಟ್ಟು ಐದು ಮಂದಿ ತೆರಳಿದ್ದರು ಹಿಡಿ ದಿನ ಒಟ್ಟಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು ಸಾಯಂಕಾಲ ಮಳೆ ಬಂದ ಹಿನ್ನಲೆಯಲ್ಲಿ ಗುಡುಗು ಮಿಂಚು ಹೆಚ್ಚಾಗಿದ್ದರಿಂದ ಮರದ ಬಳಿ ಕುಳಿತುಕೊಂಡ ಇಬ್ಬರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೆ ಸಾವನ್ನಪ್ಪಿರುತ್ತಾರೆ ಎಂದು ತಿಳುದು ಬಂದಿದೆ.. ಜಮಿನಿನಲ್ಲಿ ಇವರ ಸಂಬಂಧಿಕರು ಮಳೆ ಬರುವ ಸಂದರ್ಭದಲ್ಲಿ ಇನ್ನು ಮೂರು ಜನ ಒಂದು ಕಡೆ ಕುಳಿತುಕೊಂಡಿದ್ದರು ಅವರಿಗೆ ಯಾವುದೆ ಹಾನಿಯಾಗಿಲ್ಲ. . ಇಬ್ಬರು ಮಾತ್ರ ಸಿಡಿಲಿಗೆ ಬಲಿಯಾಗಿ ಬಾರದ ಲೋಕಕ್ಕೆ ತೆರಳಿರುವುದು ನೋವಿನ ಸಂಗತಿ.
ಸಂಬಂಧಿಕರ ಗೋಳಿನ ಆಕ್ರಂದನ ಮುಗಿಲು ಮಟ್ಟುವಂತಿತ್ತು .ಸುದ್ದಿ ತಿಳಿಯುತ್ತಿದ್ದಂತೆ ದಿಢೀರನೆ ಸ್ಥಳಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ. ತಹಶೀಲ್ದಾರ್ ಜಿ ಸಂತೋಷಕುಮಾರ್ .ಸಿಪಿಐ ಶ್ರೀನಿವಾಸ ಭೇಟಿ ನೀಡಿ ಪ್ರಕೃತಿ ವಿಕೋಪದಡಿಯಲ್ಲಿ ಸೂಕ್ತ ಪರಿಹಾರ ನೀಡಲು ತಿಳಿಸಿದ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಮಹಮದ್ ಗೌಸ್ ಗ್ರಾಮಲೆಕ್ಕಾಧಿಕಾರಿ ಕೊಟ್ಯೆಪ್ಪ ಸೇರಿದಂತೆ ಹಾಜರಿದ್ದರು.