ಶುಕ್ರದೆಸೆ ನ್ಯೂಸ್:-
ಜಗಳೂರು ಸುದ್ದಿ.
33 ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಸಗೂಡಿಸಿ ಗಂಟೆ ಹೊಡೆದು ಇದೀಗ ಕ್ಷೇತ್ರದ ಕಸ ಹೊಡೆದು ಗಂಟೆ ಹೊಡೆಯುವ ಮೂಲಕ ಸೇವೆ ಮಾಡುವೆ.ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ.
ಪ್ರತಿ ತಿಂಗಳಿಗೊಂದು ಬಾರಿ ಪೌರ ಕಾರ್ಮಿಕರ ಜೊತೆ ಕಸಗೂಡಿಸುವೆ ನನಗೆ ಬರುವ ಎರಡು ಲಕ್ಷ ರೂ ಶಾಸಕರ ಸಂಬಳದಲ್ಲಿ ಚಳಿ ಮಳೆಯಲ್ಲಿ ದುಡಿಯುವ ಪೌರ ಕಾರ್ಮಿಕರಿಗೆ ವರ್ಷಕ್ಕೆ ಎರಡು ಜೊತೆ ಬಟ್ಟೆ ಶೊಟ್ಟರ್ ಟೋಪಿ ಕೋಡಿಸಿ ಕಾರ್ಮಿಕರ ಕಲ್ಯಾಣಕ್ಕೆ ನಾನು ಬದ್ದ ಶಾಸಕರು ಭರವಸೆ ನೀಡಿದರು.
ಜಗಳೂರು ಪಟ್ಟಣದ ಪಪಂ ಕಛೇರಿಯಲ್ಲಿ ಶನಿವಾರ ನೂತನ ಶಾಸಕರಿಗೆ ಪೌರ ನೌಕರರಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು .ಪೌರ ಸನ್ಮಾನ ಸಮಾರಂಭದಲ್ಲಿ ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಸನ್ಮಾನ ಸ್ವಿಕರಿಸಿ ನಂತರ ಸಭೆಯನ್ನುದ್ದೆಶಿಸಿ ಮಾತನಾಡಿದರು ಇತ್ತೀಚಿನ ದಿನಮಾನಗಳಲ್ಲಿ ಪಟ್ಟಣ ಬೆಳವಣಿಗೆಯಾಗುತ್ತಿದ್ದು ನಗರಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರದಿಂದ ಸುಂದರ ಪಟ್ಟಣವನ್ನಾಗಿ ಮಾಡಲು ಅಗತ್ಯ ಸೇವೆಯೆ ನನ್ನ ಗುರಿಯಾಗಿದೆ.ನಗರದ ಜನತೆ ಪಪಂ ನೌಕರರೊಂದಿಗೆ ಸಹಕರಿಸಿದರೆ ಯಾವುದೆ ಪಟ್ಟಣ ಸುಂದರ ನಗರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ .
ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಎಲ್ಲೆಂದರೆ ಅಲ್ಲೆ ರಸ್ತೆ ಚರಂಡಿಗಳಲ್ಲಿ ಬಿಸಾಡುವುದರಿಂದ ಕಾಯಿಲೆ ಉತ್ಪತ್ತಿಯಾಗಿ ನಮ್ಮಗಳಿಗೆ ಮಾರಕ ಕಾಯಿಲೆ ಬರುವ ಸಂಭವವೆ ಹೆಚ್ಚು ಆದ್ದರಿಂದ ಕಸದ ವಾಹನಗಳಿಗೆ ನಿಮ್ಮ ಮನೆ ಕಸ ಹಾಕಿ ಸಹಕಾರ ನೀಡಬೇಕು .ನಾನು ಕೂಡ ಹಿಡಿ ದೇಶದಲ್ಲೆಯೆ ನನ್ನದೇ ಆದ ಒಂದು ದ್ಯೆಯ್ಯವಾಖ್ಯದೊಂದಿಗೆ ಪ್ರತಿ ತಿಂಗಳು ಪೌರರೊಂದಿಗೆ ಕಸಗೂಡಿಸಿ ಕಾಯಕ ಮಾಡುವೆ. ನನಗೆ ಸಮಯ ಪ್ರಜ್ಞೆ ಬರಲು ಸಿರಿಗೆರೆ ಗುರುಗಳು ಆದರ್ಶವಾಗಿದ್ದಾರೆ 12 ನೇ ಶತಮಾನದ ಬಸವಣ್ಣನವರ ಕಾಯಕದ ಬದುಕು ನನಗೆ ಆದರ್ಶವಾಗಿವೆ. ನಗರದ ಕೊಳಚೆ ನೀರು ಹೃದಯ ಭಾಗದಲ್ಲಿರುವ ಕೆರೆಗೆ ಹಾದುಹೋಗದಂತೆ ತಾಂತ್ರಿಕ ಯೋಜನೆ ತಯಾರಿಸಿ ಮಲಿನ ನೀರು ಒಂದೆಡೆ ಹೋಗಲು ವ್ಯವಸ್ಥೆ ಕಲ್ಪಿಸಿ .ಈಗಿರುವ ಪಟ್ಟಣ ಪಂಚಾಯತಿಯನ್ನ ಪುರ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸಿ ಪಟ್ಟಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸೇವೆ ಅಗತ್ಯವಾಗಿದೆ ನಿಮ್ಮೆಲ್ಲರ ಸಹಕಾರದಿಂದ ನಗರದ ಜನತೆ ನಮ್ಮನ್ನು ಸದುಪಯೋಗ ಪಡೆದುಕೊಳ್ಳುವಂತೆ ಪಪಂ ಸದಸ್ಯ ವರ್ಗ ಸೇರಿದಂತೆ ಅಧಿಕಾರಿಗಳಿಗೆ ತಿಳಿಸಿದರು.
ಕ್ಷೇತ್ರದಲ್ಲಿ ಆಡಳಿತ ನಡೆಸಿದ ಮಾಜಿ ಶಾಸಕರುಗಳು ಇಂತ ಪ್ರಮುಖವಾದ ಯುಜಿಡಿ ಯೋಜನೆಗಳುನ್ನು ಅಭಿವೃದ್ಧಿ ಪಡಿಸಲು ವಿಫಲವಾಗಿದ್ದಾರೆ .ಅಂತ ಅಂತವಾಗಿ ನನ್ನ ಅಧಿಕಾರಾವಧಿಯಲ್ಲಿ ಪ್ರಮುಖ ಯೋಜನೆಗಳಿಗೆ ಚುರುಕು ಮುಟ್ಟಿಸಲು ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಲು ಸಹಕರಿಸಿ ಇಲ್ಲಿ ಕಳ್ಳಾಟದ ಅಧಿಕಾರಿಗಳಿಗೆ ಜಾಗವಿಲ್ಲ ಎಂದು ಚಾಟಿ ಬೀಸಿದ್ದಾರೆ.
ಈ ಸಂದರ್ಭದಲ್ಲಿ ಪಪಂ ಆಡಳಿತ ಅಧಿಕಾರಿ ತಹಶೀಲ್ದಾರ್ ಜಿ ಸಂತೋಷಕುಮಾರ್. ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಪಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಆರ್ ತಿಪ್ಪೇಸ್ವಾಮಿ. ಪಪಂ ಸದಸ್ಯರಾದ ರೇವಣ್ಣ .ಬಿ ಕೆ ರಮೇಶ್.ರವಿಕುಮಾರ್ .ಲುಖ್ಮಾನ್ .ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಮಂಜಮ್ಮ.ಮಾಜಿ ಅಧ್ಯಕ್ಷೆ ಹಾಲಿ ಸದಸ್ಯ ವಿಶಾಲಾಕ್ಷಿ .ಮಾಜಿ ಪಪಂ ಉಪಾಧ್ಯಕ್ಷೆ ಹಾಲಿ ಸದಸ್ಯೆ ಲಲಿತಾಮ್ಮ. ಮಂಜಣ್ಣ.ಪಾಪಲಿಂಗಪ್ಪ. ದೇವರಾಜ್. ಪಪಂ ಆರೋಗ್ಯ ಅಧಿಕಾರಿ ಕಿಪಾಯತ್.ಇಂಜಿನಿಯರ್ ಶ್ರತಿ ಪೌರ ನೌಕರರ ಸಂಘದ ಅಧ್ಯಕ್ಷ ಬಸವರಾಜ್.ರಾಜು ಸೇರಿದಂತೆ ಹಾಜುರಿದ್ದರು.