ಶಿಥಿಲಗೊಂಡಿರುವ ಶತಮಾನೋತ್ಸವ ಶಾಲೆಗೆ ಶಾಶ್ವತ ಕೊಠಡಿಗಳುನ್ನು ಕಲ್ಪಿಸಿ ಕೊಡುವೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವಿಶ್ವಾಸ
ಹಾಲೆಕಲ್ಲು ಗ್ರಾಮದ ಬಹುದಿನದ ಕನಸು ಈ ಶಾಲಾ ಕೊಠಡಿಗಳ ದುರಸ್ತೆ ಹಾಗೂ ನೂತನ ಕೊಠಡಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಶತಮಾನೋತ್ಸವ ಶಾಲೆ ಶಿಥಿಲಗೊಂಡಿವೆ ಎಂದು ಶಾಸಕರು ಖುದ್ದು ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ಶಾಲಾ ಕೊಠಡಿಗಳು ಮಳೆ ಬಂದರೆ ಸೋರುತ್ತಿವೆ ಎಂದು ಈ ಹಿಂದೆ ಸುದ್ದಿ ಮಾಧ್ಯಮದವರು ಸುದ್ದಿ ಬಿತ್ತರಿಸುವ ಮೂಲಕ ಅಧಿಕಾರಿಗಳ ಮತ್ತು ಕ್ಷೇತ್ರದ ಶಾಸಕರ ಗಮನ ಸೆಳೆಯಲಾಗಿತ್ತು.ಗ್ರಾಮಸ್ಥರು ಸಹ ನೂತನ ಶಾಸಕರಿಗೆ ಕರೆ ಮಾಡಿ ಶಾಲಾ ಕಟ್ಟಡಗಳುನ್ನು ನವಿಕರಿಸುವಂತೆ ತಿಳಿಸಿದ್ದರು ಶಾಸಕರು ಗ್ರಾಮಕ್ಕೆ ಖುದ್ದ ಶಾಲೆಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಲು ತಿಳಿಸಿದಂತೆ ಶನಿವಾರ ಶಿಥಿಲವಾದ ಶಾಲಾ ಕೊಠಡಿಗಳುನ್ನು ಪರಿಶೀಲನೆ ನಡೆಸಿದರು.ಹಾಲೆಕಲ್ಲು ಗ್ರಾಮದ ಹಿರಿಯ ಪ್ರಾಥಮಿಕ ಪಾಠ ಶಾಲೆ ಈಗಾಗಲೇ ಶತಮಾನೋತ್ಸವ ಶಾಲೆಯಾಗಿದ್ದು ಕಟ್ಟಡಗಳು ಶಿಥಿಲಗೊಂಡು ಹಳೆಯದಾಗಿವೆ ಎಂದು ಗ್ರಾಮಸ್ಥರು ತಿಳಿಸಿದರು.
ಹೊಸ ಕಟ್ಟಡಕ್ಕೆ ರೂಪರೇಷೆ:
ಗ್ರಾಮದ ಶತಮಾನೋತ್ಸವದ ಹಳೆಯ ಕಟ್ಟಡಗಳನ್ನು ವೀಕ್ಷಣೆ ನಡೆಸಿದ ಶಾಸಕರು ಖುದ್ದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು
ಅಧಿಕಾರಿಗಳು ಮುಖೇನೆ ಶಾಲೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ನೂತನವಾಗಿ ನಾಲ್ಕು ಕಟ್ಟಡಗಳುನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಗ್ರಾಮಸ್ಥರ ಅಭಿಪ್ರಾಯದಂತೆ ಕಾರ್ಯಯೋಜನೆ ರೂಪಿಸಲಾಗುತ್ತದೆ. ಶಾಶ್ವತ ಶಾಲಾ ಕಟ್ಟಡ ನಿರ್ಮಿಸಲು ಬದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು..
ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷ ರೇವಣಸಿದ್ದಪ್ಪ ಮಾತನಾಡಿ ಇಲ್ಲಿ ವಿದ್ಯಾಭ್ಯಾಸ ಮಾಡುವಂತ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು ಅಮೂಲ್ಯವಾದ ಜೀವಗಳು ವಿದ್ಯಾದೇಗಲದಲ್ಲಿರುವುದು ತಿಳಿದಿದೆ ಆದ್ದರಿಂದ ಶಾಲಾ ದುರಸ್ಥೆಗೆ ಮುಂದಾಗುವಂತೆ ತಿಳಿಸಿದರು. ಇತ್ತೀಚೆಗೆ ಸರ್ಕಾರಿ ಶಾಲೆಗೆ ದಾಖಲಾತಿ ಸಂಖ್ಯೆ ಕ್ಷಿಣಿಸುತ್ತಿದೆ ಉತ್ತಮ ಬೌತಿಕ ಕಟ್ಟಡದ ಕೊರತೆಯಿಂದ ಖಾಸಗಿ ಶಾಲೆಗಳಿಗೆ ಮಾರು ಹೋಗುವಂತಾಗಿದೆ ಎಂದು ಅಧಿಕಾರಿಗಳ ಮತ್ತು ಶಾಸಕರ ಗಮನಕ್ಕೆ ತಂದರು.
ಜಿಲ್ಲಾ ಶಿಕ್ಷಣ ಇಲಾಖೆ ಉಪಾ ನಿರ್ದೇಶಕರಾದ ತಿಪ್ಪೇಶಪ್ಪ ಜಿ ಆರ್. ಮಾತನಾಡಿ ಇಲಾಖೆಯಿಂದ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಶಾಲೆಗಳ ಸ್ಥಿತಿಗತಿಗಳ ಶಾಲಾ ದುಸ್ಥಿತಿಗಳ ಬಗ್ಗೆ ವರದಿ ತಯಾರಿಸಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್. ಬಿ ಆರ್ ಸಿ ಹಾಲಪ್ಪ. ಪ್ರಭಾರ ಬಿಇಓ ಸುರೇಶ್.ಗ್ರಾಪಂ ಅದ್ಯಕ್ಷ ಬಸವರಾಜ್.ಗ್ರಾಪಂ ಸದಸ್ಯರು .ಶಾಲಾ ಮುಖ್ಯಶಿಕ್ಷಕಿ ಶಿವಕ್ಕ.ಮುಖಂಡರಾದ ಹೊಮಣ್ಣ.ಸಣ್ಣಸೂರಜ್ಹ.ಪಲ್ಲಾಗಟ್ಟೆ ಶೇಖರಪ್ಪ. ಸೇರಿದಂತೆ ಮುಂತಾದವರು ಹಾಜರಿದ್ದರು.