ಜಗಳೂರು ಸುದ್ದಿ
ಶುಕ್ರದೆಸೆ ನ್ಯೂಸ್:-
ಜಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2022._23 ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಯುವ ರೆಡ್ ಕ್ರಾಸ್ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ತೃತೀಯ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ಶಾಸಕ ಬಿ ದೇವೆಂದ್ರಪ್ಪ ಕಾರ್ಯಕ್ರಮವನ್ನು ಉದ್ಗಾಟಿಸಿ ವಿದ್ಯಾರ್ಥಿಗಳುನ್ನು ಕುರಿತು ಮಾತನಾಡಿದರು.
ವಿದ್ಯಾದಿಂದ ವಿನಯ ಹಣ ಸಂಪತ್ತು ಶಾಂತಿ ಇತರೆ ಎಲ್ಲಾ ಸೌಲಭ್ಯಗಳು ತಮಗೆ ಲಭಿಸುವುವು ಆದ್ದರಿಂದ ವಿದ್ಯಾರ್ಥಿಗಳು ಸಂಸ್ಕಾರಯುತ ಓದಿನ ಪರಿಶ್ರಮದಿಂದ ಉತ್ತಮ ಸಂಸ್ಕಾರ ಬದುಕು ತಮ್ಮದಾಗಿಸಿಕೊಳ್ಳಲು ಸಹಕಾರಿಯಾಗುವುದು.
ಮನುಷ್ಯನಾದವನು ಸಕಾಲ ಜೀವಾತ್ಮ ರಿಗೆ ಲೇಸನ್ನು ಬಯಿಸುವವನೆ ನಿಜವಾದ ಮನುಷ್ಯರು..ಮೊದಲು ಮಾನವನಾಗಬೇಕು.ನಾನು ಕೂಡ ಸಾಮಾನ್ಯ ಡಿ ಗ್ರೂಪ್ ನೌಕರಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೋಡಿಸಿದರ ಫಲವಾಗಿ ನನ್ನ ಪುತ್ರ ವಿಜಯ್ ಕುಮಾರ್ ಉನ್ನತ ಸ್ಥಾನದಲ್ಲಿ ಆಲಂಕರಿಸಿದ್ದಾನೆ .ತಾವುಗಳು ಕೂಡ ಅದ್ಯಾಪಕರು ನೀಡಿದ ಪಾಠ ಪ್ರವಚನಗಳುನ್ನು ಪಡೆದು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಮತ್ತೊಬ್ಬ ವಿಜಯ್ ಕುಮಾರಂತೆ ಉನ್ನತ ಹುದ್ದೆ ಹಿಡಿಯಬೇಕು.ನಮ್ಮಗೂ ಸಹ ಶಿಕ್ಷಕರು ನೀಡಿದ ಶಿಕ್ಷಣದಿಂದ ನಾವು ಉನ್ನತ ಸ್ಥಾನ ಗಳಿಸಲು ಸಹಕಾರಿಯಾಗಿದೆ.
ನಾನು ಬರೀ ಶಾಸಕನಲ್ಲ ನಾನೊಬ್ಬ ಸೇವಕ ದೇವೆಂದ್ರಪ್ಪ. ನೀವು ಎಷ್ಟೋ ಜನ ಶಾಸಕರುನ್ನು ನೋಡಿರಬಹುದು ಆದರೆ ನನ್ನಂತ ಶಾಸಕರುನ್ನು ನೋಡಿರಲು ಸಾದ್ಯವಿಲ್ಲ. ವಿದ್ಯಾರ್ಥಿಗಳೆ ನಿಮ್ಮ ಕೈಯಲ್ಲಿ ನಿಮ್ಮ ಭವಿಷ್ಯವಿದೆ ಉತ್ತಮ ಬದುಕು ಕಟ್ಟಿಕೊಳ್ಳಲು ಮಹಾನ್ ನಾಯಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬುದ್ದ ಬಸವ ಆ ದರ್ಶವಾಗಬೇಕೆ ಹೊರೆತು ಕೇವಲ ಸಿನಿಮಾ ಹಾಡುಗಳಿಂದಲ್ಲ ಈಗಾಗಲೇ ಕಾಲೇಜಿಗೆ 50 ಲಕ್ಷ ಅನುದಾನ ಲಭ್ಯವಿದ್ದು ಉತ್ತಮ ಕೊಠಡಿ ನಿರ್ಮಿಸಲು ಅನುದಾನ ಕಲ್ಪಿಸಲಾಗಿದೆ. ಕಾಲೇಜು ಅಭಿವೃದ್ಧಿ ಪದಾಧಿಕಾರಿಗಳೊಂದಿಗೆ ಕಾಲೇಜಿಗೆ
ಅಗತ್ಯ ಮೂಲಭೂತ ಸೌಕರ್ಯಗಳುನ್ನು ಒದಗಿಸಿ ಮಾದರಿ ಕಾಲೇಜುನ್ನಾಗಿ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕರಿಯಪ್ಪ ಮಾಳಿಗೆ ಮಾತನಾಡುತ್ತಿರುವುದು
ತಂತ್ರಜ್ಞಾನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸರ್ಧಾತ್ಮಕ ಪರೀಕ್ಷೆ ಎದುರಿಸುವುದರ ಜೊತೆಗೆ ಬದುಕು ರೂಪಿಸಿಕೊಳ್ಳುವಂತ ಕೌಶಲ್ಯ ಜ್ಞಾನ ಅತ್ಯವಶ್ಯಕವಾಗಿದೆ.ಎಂದು ಕನ್ನಡ ಪ್ರಾಧ್ಯಾಪಕ ಕರಿಯಪ್ಪ ಮಾಳಿಗೆಯವರು ಮುಖ್ಯ ಭಾಷಣಕಾರರಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಸ್ತುತ ದಿನ ಮಾನಗಳಲ್ಲಿ ವಿದ್ಯಾರ್ಥಿ ಯುವ ಸಮುದಾಯ ಹಾಗೂ ಸಮಾಜದಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಭಾವನಾತ್ಮಕ ಸಂಬಂಧಗಳು ಮತ್ತು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಮೌಲ್ಯಗಳು ಅಪಮೌಲ್ಯಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ ಶಿಕ್ಷಣ ಎನ್ನುವುದು ಜ್ಘಾನ ಕೊಟ್ಟರೆ ಕೌಶಲ್ಯ ತಮ್ಮ ಬದುಕುನ್ನು ಕಟ್ಟಿ ಕೊಡಲು ಸಹಕಾರಿಯಾಗುವುದು ಆದ್ದರಿಂದ ಜ್ಞಾನದ ಜೊತೆ ಜೊತೆಗೆ ಕೌಶಲ್ಯ ಜ್ಞಾನ ಅಗತ್ಯ ಎಂದರು ಕಳೆದ ವರ್ಷಗಳಲ್ಲಿ .
ಕೊರೊನ್ ವೆಂಬ ಮಹಾಮಾರಿಯಿಂದ ದೇಶವೆ ತಲ್ಲಣವಾಗಿ ವಿದ್ಯಾರ್ಥಿಗಳ ವಿದ್ಯಾಬ್ಯಾಸದ ಕೌಶಲ್ಯವನ್ನೆ ಮೊಟುಕುಗೊಳಿಸಿತ್ತು.ದೇಶದ ಜನರ ಬದುಕು ದುಸ್ತರವಾಗಿತ್ತು.ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೇಶದ ಮಹಾನ್ ನಾಯಕರ .ಗ್ರಾಮೀಣ ಜನಪದರ .ಬುದ್ದ ಬಸವ ಅಂಬೇಡ್ಕರ್ ರವರುನ್ನು ಸರಿಯಾದ ರೀತಿ ಅದ್ಯಯನ ಮಾಡಿದಾಗ ತಮ್ಮ ಜೀವನವನ್ನ ಉಜ್ವಲಗೋಳಿಸಿಕೊಳ್ಳಲು ಸಹಕಾರಿಯಾಗುವುದು .ಜಗಳೂರು ಬರಪೀಡಿತ ಪ್ರದೇಶ ಇಲ್ಲಿ ಬೆವರು ಸುರಿಸಿ ದುಡಿಯುವ ವರ್ಗದ ಜನರ ಸೃಜನಶೀಲ ಬದುಕಿನ ಬವಣೆಯನ್ನು ತಾವು ಅರಿಯಬೇಕು. ನಿಮ್ಮಗಾಗಿ ನಿಮ್ಮ ಪೋಷಕರು ತ್ಯಾಗ ಮಾಡಿ ಹೊಲಗದ್ದೆಗಳಲ್ಲಿ ದುಡಿದು ನಿಮ್ಮನ್ನ ಕಾಲೇಜು ವಿದ್ಯಾಬ್ಯಾಸಕ್ಕೆ ಕಳುಹಿಸಿದವರಿಗೂ ಗುರು ಹಿರಿಯರಿಗೆ ಕೀರ್ತಿ ತರುವಂತೆ ಉನ್ನತ ಸ್ಥಾನ ಗಳಿಸುವಂತೆ ಕಿವಿ ಮಾತು ಹೇಳಿದರು. .ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳಿಲ್ಲದೆ ಪ್ರಥಮ ಶ್ರೇಣಿಯಲ್ಲಿ ಅಂಕ ಗಳಿಸಿದರೇನು ಫಲ .ಹಳ್ಳಿಜನರ ಬದುಕಿನ ಬಾಗಗಳಾದ ಒಗಟು .ಗಾಧೆಗಳು.ಯುವಜನರ ಬದುಕಿಗೆ ರಹದಾರಿಯಾಗಲಿವೆ ಅವುಗಳುನ್ನು ತಾವು ಓದಬೇಕು.
ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರೆಂದರೆ ಕೇವಲ ಮೀಸಲಾತಿ ಒಂದೆಲ್ಲ ಮಾನವೀಯತೆ ನೆಲೆಯಿದೆ.ಶ್ರೇಷ್ಠ ಸಂವಿಧಾನದ ಹೊಂದಿರುವ ದೇಶದಲ್ಲಿಯು ಸಹ ಪ್ರಸ್ತುತತೆಯಲ್ಲಿ
ಮಾನವರು ಇಕ್ಕಟ್ಟು ಮತ್ತು ಬಿಕ್ಕಟ್ಟು ಗಳ ಮದ್ಯೆ ಬದುಕುವಂತ ಸ್ಥಿತಿಯಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಸಿಪಿಐ ಶ್ರೀನಿವಾಸ್ ರಾವ್ ಮಾತನಾಡಿ ಸರ್ಕಾರಿ ಕಾಲೇಜಿನಲ್ಲಿ ಓದಿದವರಿಂದ ಮಾತ್ರ ದೇಶ ಉಳಿವಿಗಾಗಿ ಹೋರಾಟ ಸಾಧ್ಯ
ವಿಧ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಬಗ್ಗೆ ಅಸಡ್ಡೆ ಭಾವನೆ ತೋರದೆ ಗೌರವಿಸಬೇಕು .
ನಿಮ್ಮ ಹೆತ್ತವರು ಹಿರಿಯರ ಹಬ್ಬದಲ್ಲಿ ಒಂದು ವರ್ಷಕ್ಕೆ ಒಂದೇ ಜೊತೆ ಬಟ್ಡೆ ಧರಿಸಿ ತಮ್ಮಗಳಿಗೆ ಪ್ರತಿ ಹಬ್ಬಗಳಿಗೆ ಬಟ್ಟೆ ಕೋಡಿಸುವುದರ ಜೊತೆಗೆ ನಿಮ್ಮ ಹೆತ್ತಮ್ಮ ಹಳಸಿದ ಅನ್ನ ಉಂಡು ನಿಮಗೆ ಬಿಸಿ ಆಹಾರ ಉಣಬಡಿಸಿದ ಆ ದಿನಗಳುನ್ನು ವಿದ್ಯಾರ್ಥಿಗಳು ಮರೆಯದೆ ವಿದ್ಯಾಬ್ಯಾಸ ಮಾಡಿ ಯಶಸ್ಸು ಕಾಣಬೇಕು. ಕ್ಷಣಿಕ ಅತುರದ ವ್ಯಾಮೋಹಕ್ಕೆ ಬಲಿಯಾಗದೆ ಉತ್ತಮ ವಿದ್ಯಾಬ್ಯಾಸ ಮಾಡಿ ಐ ಎ ಎ ಎಸ್ ನಂತ ಪದವಿಗಳನ್ನು ಪಡೆದು ಸಮಾಜದಲ್ಲಿ ಗೌರವದ ಬದುಕು ರೂಪಿಸಿಕೊಳ್ಳುವಂತ ವಿವೇಚನೆ ಕಡೆಗೆ ಕನಸು ಕಾಣುವಂತೆ ವಿದ್ಯಾರ್ಥಿಗಳಿಗೆ ಸಲಹೇ ನೀಡಿದರು.
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎಂದರೆ ಭಯ ಮತ್ತು ಅತಂಕ ಬೇಡ ನಿರ್ಭಯದಿಂದ ಪರೀಕ್ಷೆ ಎದುರಿಸಿ ಎಂದು ತಿಳಿಸಿದರು.
ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ ಯುವಕರು ವಾಟ್ಸಪ್ ಯುನಿವರ್ ಸಿಟಿಯನ್ನು ಮರೆಯಬೇಕು ಈಗಿನ ಪ್ರಜೆಗಳೆ ಮುಂದಿನ ದೇಶ ಕಟ್ಟುವ ನಾಯಕರಾಗಿ ಬೆಳೆಯಲು ಸಮಾಜದಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾಗಿದೆ .ಶಾಸಕರು ಕ್ಷೇತ್ರದ ಶಾಲಾ ಕಾಲೇಜುಗಳಲ್ಲಿರುವ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಗೆ ಸ್ವಂದಿಸಿ ಅಗತ್ಯ ಸೇವೆ ನೀಡಬೇಕು. ನಮ್ಮ ಕ್ಷೇತ್ರ ಶೈಕ್ಷಣಿಕ ಚಟುವಟಿಕೆಗಳಲ್ಲಿ ತನ್ನದೆಯಾದ ಛಾಪು ಮೂಡಿಸುತ್ತಿದೆ ಎಂದರೆ ಇಲ್ಲಿನ ಅದ್ಯಾಪಕ ವರ್ಗದ ಶ್ರಮ ಆಪಾರ ಎಂದರು.
. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗೈ ಅಧ್ಯಕ್ಷರು ಷಂಷೀರ್ ಆಹಮದ್. ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ ರಾಜೇಶ್ವರಿ ಪೂಜಾರಿ.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಪ್ರಶಾಂತ . ಅಮರ ಭಾರತಿ ವಿದ್ಯಾಕೇಂದ್ರದ ಶ್ವೇತಾ ಮಧುಕುಮಾರ್ .ತಿಪ್ಪೇಸ್ವಾಮಿ ಸಿ.ಖಲಂದರ್.ಜಯಶೀಲರೆಡ್ಡಿ.ಬಸವ ಭಾರತಿ ಕಾಲೇಜಿನ ಹೆಚ್ ಪ್ಯಾರಿಜನ್.ಉಪನ್ಯಾಸಕ ಷಂಷುಧಿನ್ .ವೀರಣ್ಣ ವಕೀಲರು.ಲೋಕೇಶ್ ಐಹೊಳೆ .ನಂಜುಂಡಸ್ಬಾಮಿ.ಹೊಮಣ್ಣ.ಮಹಿಳಾ ಪ್ರತಿನಿಧಿ ಸಾವಿತ್ರಮ್ಮ.ಶರಣಪ್ಪ.ಮೊಹನ್.ಪ್ರಾಂಶುಪಾಲ ಜಗದೀಶ್.ಪಲ್ಲಾಗಟ್ಟೆ ಶೇಖರಪ್ಪ.
ಆಹಮದ್ ಆಲಿ . ಮಾಜಿ ತಾಪಂ ಅದ್ಯಕ್ಷ ಸಣ್ಣಸೂರಜ್ಜ .ಅಜ್ಮೂಲ.ಮಹಮದ್ ಆಲಿ..ಸಣ್ಣ ತಾನಾಜಿ ಗೋಸಾಯಿ ಸೇರಿದಂತೆ ಕಾಲೇಜು ಸಿಬ್ಬಂದಿ ವರ್ಗದವರು ಹಾಜರಿದ್ದರು.
.