ಶುಕ್ರದೆಸೆ ನ್ಯೂಸ್,:-
ಅಲೆಮಾರಿ ಸುಡುಗಾಡ ಸಿದ್ದರ ಸಿಂದೊಳ ಸಮಾಜದ
ಶೀಘ್ರವೆ ನಿವೇಶನ ಹಕ್ಕು ಪತ್ರ ವಿತರಣೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ತಿಳಿಸಿದರು
ಜಗಳೂರು ಪಟ್ಟಣಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಭೇಟಿ ನೀಡಿ ತಾಲ್ಲೂಕು ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ನಡೆಸುವ ಸಭೆಯಲ್ಲಿ ತಾಲ್ಲೂಕಿನಲ್ಲಿರುವ ಸಮಸ್ಯೆಗಳು ಮತ್ತು ಸಾರ್ವಜನಿಕ ಆವಾಲುಗಳುನ್ನು ಆಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂದ ಶೇ 40 ರಷ್ಟು ಕಡಿಮೆ ಮಳೆಯಾಗಿದ್ದು ರೈತರು ಕಡಿಮೆ ಅವಧಿಯಲ್ಲಿ ಬೆಳೆ ಕೈಗೆ ಸಿಗುವಂತ ತಳಿಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕಾಗಿದೆ .ಯಾವ ಬೆಳೆ ಬೆಳೆಯಲು ಸೂಕ್ತವೆಂದು ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು . .ಕಳೆದ ವರ್ಷದ ಅವಧಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎಲ್ಲೊ ಕಂಡು ಬಂದಿಲ್ಲ
ತಾಲ್ಲೂಕಿನ 57 ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿ ಚುರುಕುಗೊಂಡಿದೆ.
ಬಹು ದಿನದ ಬೇಡಿಕೆಯಾದ ಅಲೆಮಾರಿ ಸುಡುಗಾಡ ಸಿದ್ದರ ಜನಾಂಗದವರು ಸುಮಾರು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಹೊರಹೊಲಯದಲ್ಲಿ ಜೋಪಾಡಿಯಲ್ಲಿಯೇ ಜೀವನ ನಡೆಸುವಂತ ಬಡವರಿಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ನಮ್ಮ ಕಛೇರಿಯಿಂದ ನಿರಾಶ್ರಿತರಿಗೆ ನಿವೇಶನ ಸೂರು ಕಲ್ಪಿಸಲು ಉದ್ಗಾಗಟ ಗ್ರಾಮದ ಬೆಚ್ಚರ ಗ್ರಾವಾದ ರೆಡ್ಡಿಹಳ್ಳಿ ಬಳಿ ಅಲೆಮಾರಿ ಸುಡುಗಾಡ ಸಿದ್ದರ ಸಮಾಜದ ಬಡವರಿಗೆ ಜಮೀನು ಕಾಯ್ದಿರಿಸಿ ಆದೇಶ ನೀಡಲಾಗಿದ್ದು ಆ ಸಮುದಾಯದ ಹೆಸರಿನಲ್ಲಿ ಪಹಣಿ ದಾಖಲೆಯನ್ನು ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ರವರಿಗೆ ಜಿಲ್ಲಾಧಿಕಾರಿಗಳು ವಿತರಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ಮಾತನಾಡಿ ಈಗಾಗಲೇ ಕಳೆದ ಬಾರಿ ಆ ಕುಟುಂಬಗಳಿಗೆ ನೀವೆಶನಕ್ಕಾಗಿ ಪಟ್ಟಿ ತಯಾರಿಸಲಾಗಿದ್ದು ಒಂದು ವಾರದೊಳಗೆ ನಿವೇಶನ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನ ಅಣಬೂರು ಗ್ರಾಮದಲ್ಲಿ ಇಬ್ಬರು ರೈತರು ಸಿಡಿಲಿಗೆ ಬಲಿಯಾದವರಿಗೆ ಪರಿಹಾರ ನೀಡಲಾಗಿದ್ದು .800 ಎಕರೆ ಬೆಳೆ ಪರಿಹಾರ ಒದಗಿಸಲಾಗಿದೆ. ಎಂದು ತಿಳಿಸಿದರು.
ಕಛೇರಿಯಲ್ಲಿ ಕೆಂಪೆಗೌಡ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಅವರ ಸಾಧನೆಗಳುನ್ನು ಸ್ಮರಿಸಿದರು
ತಾಲ್ಲೂಕಿನ ಬಿಳಿಚೋಡು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಔಷಧೋಪಚಾರಗಳುನ್ನು ಸರಿಯಾದ ರೀತಿ ವಿತರಿಸುವಂತೆ ತಿಳಿಸಿದರು.
ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್,ಸಮಾಜ ಕಲ್ಯಾಣ ಇಲಾಖೆಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ತೋಟ ಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ,ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ವುಲ್ಲಾ,ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಅಸ್ಮಾ,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.