ತಾಲ್ಲೂಕಿನ ಚಿಕ್ಕಬನಿಹಟ್ಟಿ ಗ್ರಾಮದಲ್ಲಿ ರೈತ ಸಂಘದ ಶಾಖೆ ಉದ್ಗಾಟನೆ

ಜಗಳೂರು ತಾಲ್ಲೂಕಿನ ಚಿಕ್ಕಬನಿಹಟ್ಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮಂಜುನಾಥ ಬಣದ ಸಂಘದ ವತಿಯಿಂದ ಗ್ರಾಮದಲ್ಲಿ ನಾಮಫಲಕ ಅನಾವರಣ ಹಾಗೂ ಶಾಖೆ ಉದ್ಗಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು. ಕಾರ್ಯಕ್ರಮದಲ್ಲಿ ಉದ್ಗಾಟನೆ ನೇರವೇರಿಸಿ ನಂತರ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿದರು ರೈತರ ಬದುಕು ಅಸನಾಗಲು ಸರ್ಕಾರ ಶೀಘ್ರವೆ ರೈತ ಬೆಳೆದ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು .ತಾಲ್ಲೂಕಿನ ಗ್ರಾಮೀಣ ಬಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ.ರೈತರ ಬಿತ್ತನೆ ಬೀಜ ರಸಗೊಬ್ಬರದ ಬೆಲೆ ಏರಿಕೆ ಇಳಿಸಿ ಎಂದು ಒತ್ತಾಯಿಸಿದರು. ರಸ್ತೆ ಚರಂಡಿ ಕುಡಿಯುವ ನೀರು ಇನ್ನಿತರೆ ಸೌಕರ್ಯಗಳುನ್ನು ಒದಗಿಸಬೇಕು.ಬಹುರಾಷ್ಟ್ರೀಯ ಕಂಪನಿಗಳ ವಿಂಡ್ ಮಿಲ್ ನಂತ ಹಾವಳಿಯಿಂದ ರೈತರ ಬದುಕು ದುಸ್ತರವಾಗಿದೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೇರ ಮಾರುಕಟ್ಟೆ ತರವಲ್ಲ .ಬ್ಯಾಂಕ್ ರೈತರು ರೈತರಿಗೆ ಸಾಲ ಭಾದೆಯಿಂದ ರೈತರಿಗೆ ಕಿರುಕುಳ್ಳ ನೀಡುತ್ತಿದ್ದಾರೆ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ‌ಕಾರ್ಯಧರ್ಶಿ ಚಿರಂಜೀವಿ. ತಾಲ್ಲೂಕು ಕಾರ್ಯಧರ್ಶಿ ರಾಜು ಬೈರನಾಯಕನಹಳ್ಳಿ..ಸತೀಶ್ ಗೌಡಗೋಡನಹಳ್ಳಿ.ಹಿರಿಯ ರೈತ ಹೋರಾಟಗಾರ ಕಾನನಕಟ್ಟೆ ತಿಪ್ಪೇಸ್ವಾಮಿ. ಸೇರಿದಂತೆ ರೈತಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!