ಶುಕ್ರದೆಸೆ ನ್ಯೂಸ್:-
ಇತ್ತೀಚೆಗೆ ಮುಖ್ಯಮಂತ್ರಿಗಳ ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ರವರು ಸ್ವಲ್ಪ ಅನಾರೋಗ್ಯಕ್ಕೆ ತುತ್ತಾಗಿದ್ದರು, ಈ ಸಂಬಂಧ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮೂರು ದಿನಗಳ ಹಿಂದೆಯಷ್ಟೇ ಮನೆಗೆ ಹಿಂತಿರುಗಿದ್ದರು ನೆನ್ನೆ ಪುನಃ ಪರೀಕ್ಷೆಗೆಂದು ಮುಖ್ಯಮಂತ್ರಿಗಳ ಜೊತೆ ಆಸ್ಪತ್ರೆಗೆ ಪಾರ್ವತಿ ಅಮ್ಮವರು ಬಂದಿದ್ದರು .
ಈ ಸಂದರ್ಭದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ಟಿಎ ನಾರಾಯಣಗೌಡರು ಅದೇ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮೂರು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಈ ವಿಚಾರವನ್ನು ಅಲ್ಲೇ ಇದ್ದ ಅವರ ಕಾರ್ಯಕರ್ತರು ಅಧಿಕಾರಿಗಳ ಗಮನಕ್ಕೆ ತಂದರು ಸಿದ್ದರಾಮಯ್ಯನವರು ಬೇಸರ ವ್ಯಕ್ತಪಡಿಸಿ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾರಾಯಣ ಗೌಡರ ಕೋಣೆಗೆ ಭೇಟಿಕೊಟ್ಟು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಸುದೀರ್ಘ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾರಾಯಣಗೌಡರ ಆರೋಗ್ಯ ಬೇಗ ಚೇತರಿಕೆಯಾಗಲಿ ,ಪುನಃ ನಾಡ ಸೇವೆಗೆ ಸಜ್ಜಾಗಲಿ ಎಂದು ಹಾರೈಸಿದ್ದಾರೆ..