ಹಿರಿಯ ಶ್ರಮಜೀವಿ
ಕರಿಯಪ್ಪ ಮಾದಾರ ಇನ್ನಿಲ್ಲ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ , ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸಮಾಡಿದ್ದ ಬಾಳಪ್ಪ ನವರ ತಂದೆಯವರಾದ ಶ್ರೀ ಕರಿಯಪ್ಪ ಮಾದಾರ (68 ) ನಿನ್ನೆ ಬೆಳಗಿನ ಜಾವ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ . ಕಳೆದ ಗುರವಾರವಷ್ಟೆ ಕರಿಯಪ್ಪನವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಆಗಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದರು . ಕರಿಯಪ್ಪನವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ಬಸವನಬಾಗೇವಾಡಿ ಸಮೀಪದ ಹನುಮನಾಳಿನಲ್ಲಿ ನಿನ್ನೆ ಮಧ್ಯಾಹ್ನ ನೆರವೇರಿಸಲಾಯಿತು .

ಕರಿಯಪ್ಪನವರು ಕಷ್ಟ ಸಹಿಷ್ಣುಗಳಾಗಿ , ಕೃಷಿ ಕಾರ್ಮಿಕರಾಗಿ ಬದುಕು ಕಟ್ಟಿಕೊಂಡವರು . ತಮ್ಮ ನಾಲ್ಕು ಮಕ್ಕಳಲ್ಲಿ ಕರಿಯಪ್ಪನವರು ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾದದ್ದು ಎರಡನೇಯ ಮಗ ಬಾಳಪ್ಪನವರಿಗೆ ಮಾತ್ರ . ಓದಿದ ಮಗ ಸಮಾಜಕಾರ್ಯಕ್ಕಾಗಿ ಹೊರಟು ನಿಂತಾಗ ಬೇಸರಿಸದೇ ಹರಸಿದವರು ಕರಿಯಪ್ಪ . ಬಾಳಪ್ಪ ( Balappa Vivek ) ಹಲವು ವರ್ಷಗಳ ಕಾಲ ಶಿವಮೊಗ್ಗ , ಚಿತ್ರದುರ್ಗ , ದಾವಣಗೆರೆ , ಬಳ್ಳಾರಿ ಭಾಗದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯ ವಿಸ್ತಾರದಲ್ಲಿ ಹೊಣೆ ನಿರ್ವಹಿಸಿದವರು .
ಕರಿಯಪ್ಪನವರು ಬಾಳಪ್ಪ ಅಲ್ಲದೆ – ಪೀರಪ್ಪ , ಪರಸಪ್ಪ , ಯಲ್ಲಪ್ಪ – ನಾಲ್ವರು ಪುತ್ರರನ್ನು , ಧರ್ಮಪತ್ನಿ ಚಂದ್ರವ್ವ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .

ಬಾಳಪ್ಪನವರ ತಂದೆ ಆಸ್ಪತ್ರೆಯಲ್ಲಿರುವ ಸುದ್ದಿ ತಿಳಿದು ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಸೋಮವಾರ ಬಾಗಲಕೋಟೆಗೆ ತೆರಳಿ ಆಸ್ಪತ್ರೆಗೆ ಭೇಟಿಕೊಟ್ಟು ವೈದ್ಯರೊಂದಿಗೆ ಚರ್ಚಿಸಿ , ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಮೃತರ ಆತ್ಮಕ್ಕೆ ಶ್ರೀಗಳಿಂದ ಸಂತಾಪ

ಅಗಲಿದ ಶ್ರಮಜೀವಿ ಕರಿಯಪ್ಪ ಮಾದಾರ ಅವರಿಗೆ ಗೌರವಪೂರ್ಣ ನಮನಗಳು

Leave a Reply

Your email address will not be published. Required fields are marked *

You missed

error: Content is protected !!