ಶುಕ್ರದೆಸೆ ನ್ಯೂಸ್:-
posted at by shukradeshenews 29 jlr news
ಬಕ್ರೀದ್ ಹಬ್ಬ ತ್ಯಾಗದ ಸಂಕೇತ ಜಗಳೂರು ತಾಲ್ಲೂಕು ಹಿಂದು ಮುಸ್ಲಿಂ ಭಾವೈಕ್ಯತೆ ಸಂಗಮವಾಗಿದೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಶುಭಾ ಹಾರೈಸಿದರು
ಜಗಳೂರು ಪಟ್ಟಣದಲ್ಲಿ ಪವಿತ್ರ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕರು ಭಾಗವಹಿಸಿ ಮಾತನಾಡಿದರು.ಸರ್ವಧರ್ಮಗಳ ನೆಲೆಯಾಗಿರುವ ಭಾರತ ದೇಶದಲ್ಲಿ ಹಿಂದು ಮುಸ್ಲಿಂರ ಬಹುತ್ವ ಪರಂಪರೆಯಿದೆ.
ಜಗಳೂರು ನೆಲದ ಮಣ್ಣಿನಲ್ಲಿ ಜನಿಸಿ
ಮೈಸೂರು ಅರಸರ ಆಡಳಿತ ಅವಧಿಯಲ್ಲಿ ಆಡಳಿತ ಮಂತ್ರಿಯಾಗಿ ಅನೇಕ ಕೆರೆಕಟ್ಟೆಗಳುನ್ನು ಕಟ್ಟಿ ಜನೋಪಯೋಗಿ ಸೇವೆ ನೀಡಿರುವ ದಿವಾನರಾದ ಇಮಾಮ್ ಸಾಹೇಬ್ ಈ ನಾಡಿಗೆ ಆದರ್ಶವಾಗಿರುತ್ತಾರೆ .ಮುಸ್ಲಿಂ ಸಮಾಜದ ಬಾಂದವರು ಅಗತ್ಯವಾದ ಬೇಡಿಕೆಗಳಿದ್ದರೆ ನಮಗೆ ತಿಳಿಸಿ
ನಾವು ಕೂಡ ಮುಸ್ಲಿಂ ಸಮಾಜದ ಬಾಂದವರೊಂದಿಗೆ ಒಟ್ಟಿಗೆ ಒಟ್ಟಿಗೆ ಬೆಳೆದು ಕೂಡಿ ಬಾಳುವ ವಿಶ್ವಾಸವನ್ನು ಹೊಂದಿದ್ದು ಸಮಾಜದವರ ಸಮಸ್ಯೆಗಳಿಗೆ ಸದಾ ದ್ವನಿಯಾಗಿ ಕೆಲಸ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ ನಮ್ಮ ತಾಲ್ಲೂಕು ಹಿಂದು ಮುಸ್ಲಿಂರ ನಡುವೆಯಿರುವ ಸಾಮರಸ್ಯ ಜೀವನ ಮತ್ತು ಸಹೋದರತೆ ಮಾದರಿಯಾಗಿದೆ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೋಡಿಸಿ ಸರ್ಕಾರಿ ಸೌಕರ್ಯಗಳನ್ನು ಪಡೆಯುವಂತೆ ಸಲಹೇ ನೀಡಿದರು.
ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಏರ್ಪಡಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈದ್ಗಾ ಮೈದಾನದಲ್ಲಿ ಶಾಸಕರ ಸಸಿನೆಟ್ಟು ನೀರು ಎರೆಯುವ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಪ್ರತಿಯೊಬ್ಬರು ಗಿಡ ಮರ ಬೆಳೆಸಿ ಪರಿಸರ ಉಳಿಸಿ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ವಿಚಾರವಾದಿ ಮುಪ್ತಿ ಮೌಲಾನ್ ಸಮೀವುಲ್ ಖಾನ್.ಮುಸ್ಲಿಂ ಸಮಾಜದ ಅದ್ಯಕ್ಷ ಆಥರ್ ವುಲ್ ಖಾನ್ .ಮುಖಂಡರಾದ ಉಬೇದಲ್ ಖಾನ್.ಮಹಮದ್ ಆಲಿ.ಇಕ್ಬಾಲ್ ಆಹಮದ್ ಖಾನ್. ಮುಖಂಡ ಕಲ್ಲೇಶ್ ರಾಜ್ ಪಟೇಲ್ .ಮುಖಂಡ ಶೇಖರಪ್ಪ. ಖಲಂದರ್ ಖಾನ್.ಬಿಲಾಲ್ ಮಸೀದಿ ಅದ್ಯಕ್ಷ ಇಮಾಮ್ ಆಲಿ .ಷಂಷದ್ದಿನ್.ಕಾಂಗ್ರೆಸ್ ಮಹಮದ್ ಗೌಸ್ .ಜಾಮೀಯ ಮಸೀದಿ ಮಾಜಿ ಅದ್ಯಕ್ಷರು ಆನ್ವರ್ ಸಾಬ್.ಪಪಂ ಸದಸ್ಯರಾದ ಲುಖ್ಮಾನ್ ಖಾನ್ .ಶಕೀಲ್ ಆಹಮದ್ .ಮಹಮದ್ ಆಲಿ.ಮುಖಂಡ ತಿಮ್ಮಣ್ಷ ಸೇರಿದಂತೆ ಹಾಜರಿದ್ದರು.