ಶುಕ್ರದೆಸೆ ನ್ಯೂಸ್:-

posted by shukradeshenews 29 jlr news at shukradeshenews

ಜಗಳೂರು
ತಾಲ್ಲೂಕಿನ ದೋಣಿಹಳ್ಳಿ‌ ಹೊಸಹಟ್ಟಿ (ಮಜರೆ)ಗ್ರಾಮದಲ್ಲಿ ಸುಮಾರು.22.50.ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ. ಆರ್ ಅಂಬೇಡ್ಕರ್ ಮುರಾರ್ಜಿ ವಸತಿಯುತ ಶಾಲಾ ಸಂಕೀರ್ಣ ಕಾಮಗಾರಿಯನ್ನು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ವೀಕ್ಷಣೆ ನಡೆಸಿದರು.
ಗುರುವಾರ ಅಧಿಕಾರಿಗಳೊಂದಿಗೆ ವಸತಿ ಶಾಲಾ ಕಟ್ಟಡ ಕಾಮಗಾರಿ ವೀಕ್ಷಣೆ ನಡೆಸಲು ದಿಢೀರನೆ ಭೇಟಿ ನೀಡಿದ ಶಾಸಕರು ಅಂಬೇಡ್ಕರ್ ವಸತಿ ಯುತ ಶಾಲಾ ಕಟ್ಟಡವನ್ನು ವೀಕ್ಷಣೆ ನಡೆಸಿ ನಂತರ ಮಾತನಾಡಿದರು
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊರಾರ್ಜಿ .ಅಂಬೇಡ್ಕರ್ ‌ವಸತಿಯುತ ಶಾಲೆಗಳನ್ನು ‌ಸ್ಥಾಪನೆ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಂತ ಸಹಕಾರಿಯಾಗಿದ್ದು .ಗುತ್ತಿಗೆದಾರರು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಿ ಅಸ್ತಂತರಿಸಬೇಕು.ಈಗಿರುವ ಬಿದರಕೆರೆಯಲ್ಲಿನ ತಾತ್ಕಾಲಿಕವಾಗಿ ತಂಗಿರುವ ಅಂಬೇಡ್ಕರ್ ವಸತಿ ಶಾಲಾ ವಿದ್ಯಾರ್ಥಿ ಗಳಿಗೆ ಕೊಠಡಿಗಳ ಸಂಖ್ಯೆ ‌ಸಾಕಗುತ್ತಿಲ್ಲ ಆದ್ದರಿಂದ ಶೀಘ್ರವೆ ಕಾಮಗಾರಿ ಮುಗಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ‌.ಮಹೇಶ್ ಕೆಪಿಸಿಸಿ ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್.ಕಾಂಗ್ರೆಸ್ ಮುಖಂಡ ಗೌಸ್. ತಿಮ್ಮಣ್ಣ ಮಾಳಮ್ಮನಹಳ್ಳಿ ವೆಂಕಟೇಶ. ಮುಖಂಡ ತಿಪ್ಪೇಸ್ವಾಮಿ.ಮುಖಂಡ ಹಟ್ಟಿ ತಿಪ್ಪಣ್ಣ.ಶೇಖರಪ್ಪ. ಕ್ರೈಸ್ ಅಧಿಕಾರಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!