posted by shukradeshe news jun 30 at jlr

ಶುಕ್ರದೆಸೆ ನ್ಯೂಸ್:-

ಕೆರೆ ತುಂಬಿಸುವ ಯೋಜನೆ‌ ಕಾಮಗಾರಿ ಪ್ರಗತಿ ವರದಿ ಪಟ್ಟಿ ಸಲ್ಲಿಸಿ:ಸಿರಿಗೆರೆ ಶ್ರೀಗಳು ಅಧಿಕಾರಿಗಳಿಗೆ ಸೂಚನೆ.

ಜಗಳೂರು ಸುದ್ದಿ:ಸಾಸ್ವೆಹಳ್ಳಿ ಏತನೀರಾವರಿ ಕಾಮಗಾರಿ ಪ್ರಗತಿಯ ಮಾದರಿಯಲ್ಲಿ ಜಗಳೂರು 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯ ವರದಿ ಪಟ್ಟಿ ತಯಾರಿಸಿ ಶೀಘ್ರ ಪ್ರತ್ಯೇಕ ಸಭೆ ನಡೆಸಲು ಸಿರಿಗೆರೆ ಬೃಹನ್ಮಠದ ಶ್ರೀ ಶ್ರೀ ಶ್ರೀ 1108 ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿ ಗಳು ಸಲಹೆ ನೀಡಿದರು.

ಸಿರಿಗೆರೆ ಬೃಹನ್ಮಠದ ನ್ಯಾಯಪೀಠದಲ್ಲಿ ಕರೆದಿದ್ದ 57 ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ 6 ವರ್ಷಗಳ‌ ಹಿಂದೆ ಭರಮಸಾಗರ ಹಾಗೂ ಜಗಳೂರು ಕೆರೆ ತುಂಬಿಸುವ ಅವಳಿ ಯೋಜನೆಗಳು ಒಟ್ಟಿಗೆ ಸಾಕಾರಗೊಂಡಿದ್ದವು.ಆದರೆ ಜಗಳೂರು ಕೆರೆ ತುಂಬಿಸುವ ಯೋಜನೆ ಪೈಪ್ ಲೈನ್ ಕಾಮಗಾರಿ ವಿಳಂಬವಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕೊನೆಯಲ್ಲಿ ಆರಂಭವಾಗಿದ್ದರೂ ತ್ವರಿತಗತಿಯಲ್ಲಿ ಕಾಮಗಾರಿ ನಡೆದು ಮುಕ್ತಾಯದ ಹಂತದಲ್ಲಿದೆ.ಕೂಡಲೇ ಅಧಿಕಾರಿಗಳು ಗುತ್ತಿಗೆದಾರರು ಪೂರ್ಣ ಹಾಗೂ ಅಪೂರ್ಣಗೊಂಡಿರುವ ಕಾಮಗಾರಿಗಳ ದಾಖಲು ವರದಿ ತಯಾರಿಸಿ ಸಂಸದ ,ಶಾಸಕರಿಗೆ ಹಾಗೂ ನ್ಯಾಯಪೀಠಕ್ಕೆ ತಲುಪಿಸಬೇಕು ಎಂದು ತಿಳಿಸಿದರು.

ತುಪ್ಪದಹಳ್ಳಿ ಕೆರೆಯ ನೀರಿನ ಪೌಂಟೇನ್(ಚಿಲುಮೆ) ಭರಮಸಾಗರ ಕೆರೆಯ ಮಾದರಿಯಲ್ಲಿ ನಿರ್ಮಾಣ ಮಾಡಬೇಕು.ತುಪ್ಪದಹಳ್ಳಿ ಕೆರೆಯಿಂದ ಉಳಿದ ಕೆರೆಗಳಿಗೆ ಶೀಘ್ರ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿ ಮಾರ್ಗ ಮಧ್ಯೆ ಅರಣ್ಯ ಇಲಾಖೆ,ಇತರೆ ಅಡೆತಡೆಗಳು ಬಂದರೆ ಸ್ಥಳಿಯ ಶಾಸಕರ ಗಮನಕ್ಕೆ ತಂದು ತಾಂತ್ರಿಕ‌ ದೋಷ ಸರಿಪಡಿಸಿಕೊಳ್ಳಬೇಕು ಅಲ್ಲದೆ ಕಾಮಗಾರಿ ವಿಳಂಬ ಮಾಡಿದರೆ ಪೆನಾಲ್ಟಿ ಹಾಗೂ ನೊಟೀಸ್ ಜಾರಿ ಮಾಡಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಬಸಪ್ಪ ಗುಂಗೆ ಅವರಿಗೆ ಸೂಚಿಸಿದರು.

ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಧನಂಜಯ್ ಮಾಹಿತಿ ನೀಡಿ,ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.ಶೀಘ್ರದಲ್ಲಿ 11 ಕೆರೆಗಳಿಗೆ ನೀರು ಹರಿಸಲು ಸಿದ್ದತೆ ನಡೆಸಲಾಗಿದೆ.
ದಿಟೂರು ಬಳಿ ಜಾಕ್ ವೆಲ್, ಪಂಪ್ ಹೌಸ್,ಕಂಟ್ರೋಲ್‌ ರೂಂ,ಸ್ಟ್ರೀಮಿಂಗ್,ಚಟ್ನಹಳ್ಳಿ ಡಿಲೆವರಿ ಛೇಂಬರ್,ಕಾಮಗಾರಿ ಮುಕ್ತಾಯವಾಗಿದೆ.1.2,1.8,0.8 ಸುತ್ತಳತೆಯ ಪೈಪ್ ಗಳು ಪೂರೈಕೆಯಾಗಿವೆ.ಇದರಿಂದ 18 ಕಿಮೀ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ.7 ಕಿಮೀ ಪೈಪ್ ಲೈನ್ ಕಾಮಗಾರಿಗೆ 1.5 ಸುತ್ತಳತೆಯ ಪೈಪ್ ಗಳು ಪೂರೈಕೆಯಾಗಿಲ್ಲ ವಾರದೊಳಗೆ ಪೂರೈಕೆಯಾಗುವುವು ಎಂದರು.

ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೆವೇಂದ್ರಪ್ಪ ಮಾತನಾಡಿ,ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಿದಾಗ ಕ್ಷೇತ್ರದ ರೈತರಲ್ಲಿ ಮಂದಹಾಸ ಮೂಡಿತ್ತು.

ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗಳ ನಿರ್ಲಕ್ಷ್ಯತನದಿಂದ ಪೈಪ್ ಲೈನ್
ಕಾಮಗಾರಿ ವಿಳಂಬವಾಗಿದೆ.ಜಗಳೂರು ಕ್ಷೇತ್ರದ ರೈತರು ನೀರು ಬರುವ ನಿರೀಕ್ಷೆಯಲ್ಲಿದ್ದಾರೆ.ಜಗಳೂರು ಕೆರೆಗೆ ನೀರು ಹರಿಸಿದರೆ 30 ಕೆರೆಗಳು ಭರ್ತಿಯಾಗಲಿವೆ ಸಬೂಬು ಹೇಳುವುದು ಬಿಡಿ ಕೆಲಸಮಾಡಿ ಎಂದು ಶಾಸಕ ಬಿ ದೇವೆಂದ್ರಪ್ಪ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು

ಕರ್ನಾಟಕ ನೀರಾವರಿ ನಿಗಮ‌ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಬಸಪ್ಪ ಗುಂಗೆ ಮಾತನಾಡಿ

,ಜಗಳೂರು ತಾಲೂಕಿನ 57 ಕೆರೆ ತುಂಬಿಸುವ ಯೋಜನೆಯ ಪೈಪ್ ಲೈನ್ ಕಾಮಗಾರಿ ಪ್ರಗತಿ ವರದಿ ಪಡೆಯಲಾಗುವುದು.ನಂತರ ತಾಂತ್ರಿಕ ದೋಷ ಸರಿಪಡಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು.ವಿಳಂಬ ನೀತಿ ಅನುಸರಿಸಿದರೆ ನಿಗಮದ ನಿಯಮಾವಳಿಯಂತೆ ಗುತ್ತಿಗೆದಾರರಿಗೆ ಪೆನಾಲ್ಟಿ ಹಾಗೂ ನೊಟೀಸ್ ಜಾರಿ ಮಾಡಲಾಗುವುದು ಎಂದರು.

ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್,ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ,ಮಾಯಕೊಂಡ ಶಾಸಕ ಬಸವಂತಪ್ಪ,ಶಿವಮೊಗ್ಗ ನೀರಾವರಿ ನಿಗಮ ಮುಖ್ಯ ಇಂಜಿನಿಯರ್ ಪ್ರಶಾಂತ್,ಅಪ್ಪರ್ ಭದ್ರಾ ಇಲಾಖೆಯ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್,ಗುತ್ತಿಗೆದಾರ ದಯಾನಂದ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ಶಶಿಧರಪಟೇಲ್,ಗೌಸ್ ಪೀರ್,ಓಮಣ್ಣ,ಪಲ್ಲಾಗಟ್ಟೆ ಶೇಖರಪ್ಪ,ಪ್ರಕಾಶ್ ರೆಡ್ಡಿ,ಸುಧೀರ್ ರೆಡ್ಡಿ,ಕೆಳಗೋಟೆ ಅಹಮ್ಮದ್ ಅಲಿ,ಸೇರಿದಂತೆ ರೈತ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!