ದಾವಣಗೆರೆ ಜಿಲ್ಲಾ ಕ್ರೈಂ ನ್ಯೂಸ್
:posted by shukradeshe news July 0 1 at jlr
ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ದಾವಣಗೆರೆ ವಲಯ ಹೆಬ್ಬಾಳು ಶಾಖೆಯ ಆನಗೋಡು ಗಸ್ತಿನಲ್ಲಿ ಜೂನ್ 26 ರಂದು ಹೆಬ್ಬಾಳು ಶಾಖೆಯ ಸಿಬ್ಬಂದಿಯವರು ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಟಾವಣೆ ಮಾಡುತ್ತಿದ್ದ ಆರೋಪಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್ ಜಗನ್ನಾಥ ಹಾಗೂ ತಂಡದವರು ಬಂಧಿಸಲಾಗಿದೆ.
ಒಬ್ಬ ಆರೋಪಿಯನ್ನು ಬಂಧಿಸಿ ಅಂದಾಜು ರೂ. 1 ಲಕ್ಷ ಮೌಲ್ಯದ 15 ಕೆ.ಜಿ ಶ್ರೀಗಂಧವನ್ನು ಜಪ್ತು ಪಡಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಾಗೂ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಸಾರ್ವಜನಿಕರು ನಿಮ್ಮ ಹತ್ತಿರದ ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ವನ್ಯಜೀವಿ, ಅರಣ್ಯ ಸಂಪತ್ತಿಗೆ ಮಾರಕವಾಗುವಂತಹ ಕಾರ್ಯಚಟುವಟಿಕೆಗಳು ಕಂಡುಬಂದಲ್ಲಿ ಇಲಾಖೆ ಉಚಿತ ಸಹಾಯವಾಣಿ 1926ಗೆ ಕರೆ ಮಾಡಲು ಕೋರಲಾಗಿದೆ ಎಂದು ತಿಳಿಸಿದ್ದಾರೆ.
*