ಸಂಸದ ಜಿ.ಎಂ.ಸಿದ್ದೇಶ್ವರ್ ಹುಟ್ಟುಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ:ಮಾಜಿ ಶಾಸಕ ಎಸ್.ವಿ.ಆರ್.ಕರೆ
ಜಗಳೂರು ಸುದ್ದಿ:
ಸಂಸದ ಜಿ.ಎಂ.ಸಿದ್ದೇಶ್ವರ್ ಅವರ 71 ನೇಹುಟ್ಟು ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಇಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಕರೆ ನೀಡಿದ್ದಾರೆ.
ಪಟ್ಟಣದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜುಲೈ 5 ರಂದು ದಾವಣಗೆರೆಯ ಪಿಬಿ.ರಸ್ತೆಯ ವಾಣಿ ಹೊಂಡಾ ಶೋರೂಂ ಆವರಣದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಜರುಗಲಿದ್ದು.ಕ್ಷೇತ್ರದಿಂದ 7 7ಸಾವಿರಕ್ಕೂಅಧಿಕ ಕಾರ್ಯಕರ್ತರು ಅಭಿಮಾನಿಗಳು ಸೇರಲಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ,ಸಾಮಾಜಿಕನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ,ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ,ಮಾಜಿ ಸಚಿವರಾದ ಶ್ರೀ ರಾಮುಲು,ಮುರುಗೇಶ್ ನಿರಾಣಿ,ಎಸ್.ಎ.ರವೀಂದ್ರನಾಥ್,ಎಂ.ಪಿ.ರೇಣುಕಾಚಾರ್ಯ,ಜಿ.ಕರುಣಾಕರ ರೆಡ್ಡಿ,ವಿಧಾನ ಪರಿಷತ್ತು ಸದಸ್ಯರಾದ ವೈ.ಎ.ನಾರಾಯಣಸ್ವಾಮಿ,ಕೆ.ಎಸ್.ನವೀನ್,ಶಾಸಕರಾದ ಬಿ.ಪಿ.ಹರೀಶ್,ಎಂ.ಚಂದ್ರಪ್ಪ,ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ,ಮಾಡಾಳ್ ವಿರುಪಾಕ್ಷಪ್ಪ,ಪ್ರೋ.ಲಿಂಗಣ್ಣ,ಬಸವರಾಜ್ ನಾಯ್ಕ,ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ,ಮಾಜಿ ಮಖ್ಯ ಸುಚೇತಕ ಶಿವಯೋಗಿ ಸ್ವಾಮಿ,ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್,ಸೇರಿದಂತೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹಾಲಿ ಶಾಸಕ ಬಿ.ದೆವೇಂದ್ರಪ್ಪ ಅವರಿಗೆ ಸಹಕಾರವಿದೆ:ನನ್ನಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳೇ ಸೋಲಿಗೆ ಮುಳುವಾಯಿತು.ಆದರೂ ವೈಯಕ್ತಿಕ ರಾಜಕೀಯ ಹಿತಾಸಕ್ತಿ ನನಗಿಲ್ಲ.ಅಭಿವೃದ್ದಿಯೇ ನನ್ನ ಗುರಿ
ನನ್ನ ಆಡಳಿತಾವಧಿಯಲ್ಲಿ ಮೂರು ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು.ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಿ ತಾಲೂಕಿನ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿ.ಮುಗಿಲಿನತ್ತ ಮುಖಮಾಡುವುದಕ್ಕೆ ಮುಕ್ತಿ ಸಿಗಲಿ ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ಹಾಲಿ ಶಾಸಕ ಬಿ.ದೆವೇಂದ್ರಪ್ಪ ಅವರಿಗೆ ಸಂಪೂರ್ಣ ಸಹಕಾರವಿದೆ ಎಂದು ಶುಭ ಹಾರೈಸಿದರು.
ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಜಿಲ್ಲಾಉಪಾಧ್ಯಕ್ಷ ಡಿ.ವಿ.ನಾಗಪ್ಪ,ಪ.ಪಂ ಸದಸ್ಯರಾದ ಪಾಪಲಿಂಗಪ್ಪ,ದೇವರಾಜ್,ನಾಮನಿರ್ದೇಶಿತ ಸದಸ್ಯರಾದ ರುದ್ರಮುನಿ,ಬಿ.ಪಿ.ಸುಬಾನ್,ಮುಖಂಡರಾದ ಶಿವಕುಮಾರ್ ಸ್ವಾಮಿ,ಬಸವರಾಜ್,ಸೇರಿದಂತೆ ಇದ್ದರು.