by shukradeshenews 3 the jlr news Kannada
ಹಡಪದ ಅಪ್ಪಣ್ಣನವರು 12 ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ತಹಶೀಲ್ದಾರ್ ಜಿ ಸಂತೋಷಕುಮಾರ್.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು ಹಡಪದ ಅಪ್ಪಣ್ಣ ಇವರು “ಹಡಪದ” ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಖ್ಯಾತಿ ಗಳಿಸಿದ್ದರು..
- 12 ನೇ ಶತಮಾನದ ಬಸವಣ್ಣರವರ ಕ್ರಾಂತಿಕಾರಿ ನಿಲುವಿನ ಹೋರಾಟದೊಂದಿಗೆ ಸಾಮಾಜಿಕ ಕ್ರಾಂತಿ ಮೂಲಕ ಅನುಭವ ಮಂಟಪ ಸ್ಥಾಪಿಸಿ ಸಮಾಜದಲ್ಲಿ ಸಮನತೆ ಸಾರಿದ ಪ್ರತಿಫಲವಾಗಿ ಶರಣರು ಸಂತರು ನಾಡು ಭಾರತ ಎಂಬ ಹೆಗ್ಗಳಿಕೆಯಿದೆ.ಪಾಶ್ಚಿಮತ್ಯ ದೇಶಗಳಲ್ಲಿಯು ಸಹ ಭಾರತ ದೇಶದ ಮಹನೀಯರಾದ ಬುದ್ದ ಬಸವ ಅಂಬೇಡ್ಕರ್ ರಂತ ಆದರ್ಶಗಳನ್ನು ಪಾಲಿಸುವ ಮೂಲಕ ನಮ್ಮ ದೇಶದ ಆಚಾರ ವಿಚಾರಗಳನ್ನು ಅನುಸರಿಸುವರು.ಸಮಾಜದ ಬಾಂದವರು ಸರ್ಕಾರದ ಸೌಲಭ್ಯಗಳನ್ನು ಪಡೆದು ತಮ್ಮ ಮಕ್ಕಳಿಗೆ ಶಿಕ್ಷಣ ಕೋಡಿಸಲು ಮುಂದಾಗಬೇಕು ಎಂದು ಸಲಹೇ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ಮಾತನಾಡಿ ಅಂದಿನ ದಿನಮಾನಗಳಲ್ಲಿ ಸಮಾಜ ಸುಧಾರಕರಾಗಿ ಅನುಭವ ಮಂಟಪದಲ್ಲಿದ್ದ ಪ್ರತಿಯೊಬ್ಬ ಶರಣ,ಶರಣೆಯರು ಕಾಯಕಕ್ಕೆ ಪ್ರೋತ್ಸಾಹಿಸಿದರು. ಬಸವಣ್ಣನವರ ಜತೆ ನಿಂತಿದ್ದ ಅಪ್ಪಣ್ಣ ಅವರು ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
.ಬಸವಣ್ಣನವರ ಜೊತೆಗೂಡಿ ಹಡಪದ ಅಪ್ಪಣ್ಣರಂತ ಶರಣರು
ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಹಡಪದ ಅಪ್ಪಣ್ಣ ಸಮುದಾಯದ ಅದ್ಯಕ್ಷ ವಿಜಯಕುಮಾರ್ ಮಾತನಾಡಿ ನಮ್ಮ ಸಮಾಜ ಈ ಆಧುನಿಕ ಕಾಲದಲ್ಲಿಯು ಸಹ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯ .ಶೈಕ್ಷಣಿಕವಾಗಿ ಹಿಂದೂಳಿದಿದ್ದು ಸರ್ಕಾರ ನಮ್ಮ ಸಮಾಜವನ್ನ ಮೀಸಲು ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್,ಸಮಾಜದ ಮುಖಂಡರಾದ ಷಡಕ್ಷರಿ,ತಿಪ್ಪೇ ಸ್ವಾಮಿ,ಸೇರಿದಂತೆ ಮುಂತಾದವರು ಹಾಜರಿದ್ದರು .