ದುರ್ಗ ಕೋಟೆಗಳ ನಾಡು
ಶಿವಮೊಗ್ಗ ಮಲೆನಾಡಿನ ಬೀಡು
ಜಗಳೂರು ರಂಗಯ್ಯನದುರ್ಗ ದ ನಾಡು …………
ಯಾವಜನ್ಮದ ಪುಣ್ಯವೋ ತನ್ನದು
ಸುತ್ತಲೂ ದುರ್ಗದ ಕೋಟೆಯಂಗ ಕವಿದಿರುವ
ಬೆಟ್ಟ ಗುಡ್ಡಗಳ ಸಾಲು
ಮಲೆನಾಡು ಅನುಭವದ ಬೀಡು…….”೧”
ಕಪ್ಪು ಕವಿದು ಸಾಲು ಸಾಲಾಗಿ ಸಾಗುವ ಮೋಡ
ಕೃತಿಕ ಮಳೆಯ ರಥ
ತಂಪು ಗಾಳಿ ದೇಹಕ್ಕೂ ಆತ್ಮಕ್ಕೂ……
ಹಕ್ಕಿ- ಅಳಿಲುಗಳ ಕಂಪು ಇಂಪುನಾದ
ಕಣ್ಣಿಗೆ ಕಾಣದ ಮೋಡಗಳ ಪಥ
ಮಂಜಿನ ಮುಸುಕು ಒದ್ದಿರುವ ಗುಡ್ಡ ಬೆಟ್ಟ…..”೨”
ಕಡು ಹಸಿರು ಉಟ್ಟು
ಮೇಲೆ ಗಿಳಿ ಹಸಿರ ಬಾಸಿಂಗ ತೊಟ್ಟು
ಹೂವು – ಹಣ್ಣುಗಳ ಬಿಟ್ಟು
ಗುಡ್ಡಗಳ ತುಂಬೆಲ್ಲ ಹಚ್ಚ ಹಸಿರು……….”೩”
ಮೆಲ್ಲ ಮೆಲ್ಲನೆ ಗುಡಿಗಿನ ನಾದ
ಅಲ್ಲಿ…. ಇಲ್ಲಿ….. ಎಲ್ಲೋ…….
ಮೆಲ್ಲ ಮೆಲ್ಲನೆ ಪಟ ಪಟ ಎಲೆಗಳ ಮೇಲಿಂದ ಜಾರುವ ಮುತ್ತಿನ ಮಳೆಯಹನಿ
ಕಾಲಕಸದೊಡನೆ ಹರಿಯುತ್ತಿರುವ ಹಳ್ಳ
ಮೆಲ್ಲ ಮೆಲ್ಲನೆ ಮಿಟುಕುತ್ತ ಹುತ್ತದಿಂದ ಏಳುತ್ತಿರುವ
ಗೆದ್ದಿಲ ಹುಳಗಳ ಸಾಲು
ಮರದ ಕೊಂಬೆ ಮೇಲೆ ಕುಳಿತು ವೀಕ್ಷಿಸುವ ನವಿಲು
ಅಲೆ ಅಲೆಯಾಗಿ ಅಲ್ಲಾಡುವ ರೆಂಬೆ….ಕೊಂಬೆ ….”೩”
ದುಂಡು ದುಂಡಾಗಿ ಎದ್ದಿರುವ ಅಣಬೆ
ಕಾಲಿಗೆ ಸುತ್ತಿಕೊಳ್ಳುವಂತಿರುವ ಸ್ವರ್ಣದ ಲತೆ
ಮೇಲೆಯೇ ಬಿಳುವಂತಿರುವ ಮುತ್ತಿನ ಮೋಡ
ಸಿಡಿಲು ಶಬ್ದಗಳೊಡನೆ ಬೆಳ್ಳಿಯ ಮಿಂಚು…….”೪”
ಇವು ರಂಗಯ್ಯನದುರ್ಗ ಜಗಳೂರು ನಾಡಿನ ಸೌಂದರ್ಯ….
ಸೌಂದರ್ಯ ಸರಸ್ವತಿಯ ವರವೋ ಈ ಪ್ರಕೃತಿ
ಕಾಡು ಹೂವು ಮೊಗ್ಗು ಗಳ ಸುವಾಸನೆಯೊಂದಿಗೆ
ತಂಪು ಗಾಳಿಯೊಡನೆ ಮೈಗೆ ಸ್ಪರ್ಶಿಸಿದಾಗ
ಕವಿಯ ಮೈ – ಮನಸಿನಲ್ಲಿ
ರೋಮ ರೋಮ ಹಂಚಿನಲ್ಲೂ ರೋಮಾಂಚನವಾಗಿತ್ತು
ರಚನೆ
ಅಂಜಿನಪ್ಪ ಗೌಡಿಕಟ್ಟೆ . ಬಿ ಎ ವಿದ್ಯಾರ್ಥಿ