posted by shukradeshenews Kannada jlr July 7
ಜಗಳೂರು ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿರುವ ರೈತರ ಖಾತೆಗೆ ಹಣ ನೀಡದೆ ವಿಳಂಬ ಮಾಡಿದ್ದಾರೆ ಶಾಸಕ ದೇವೆಂದ್ರಪ್ಪ ರೈತರ ಜೊತೆ ಆಹಾರ ನಾಗರೀಕ ಸಚಿವ ಕೆ ಎಚ್ ಮುನಿಯಪ್ಪರವರನ್ನು ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ಚರ್ಚೆ ನಡೆಸಿದರು. ರೈತರ ಸಂಕಷ್ಟದಲ್ಲಿದ್ದು ಖಾತೆಗೆ ಹಣ ಜಮಾ ಮಾಡುವಂತೆ ಅಧಿಕಾರಿಗಳು ಮೂಲಕ ಸೂಚನೆ ನೀಡಲು ಸಚಿವರಿಗೆ ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿಕೊಂಡಿದ್ದಾರೆ..
ಜಗಳೂರು ತಾಲ್ಲೂಕಿನ ರಾಗಿ ಬೆಳೆದ ಸಾವಿರಾರು ರೈತರು ಬೆಳೆದ ರಾಗಿಯನ್ನು ಖರಿದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದು ಎಪಿಎಂಸಿ ಅಧಿಕಾರಿಗಳು ಸುಮಾರು ಆರು ತಿಂಗಳುಗಳಿಂದ ಬಿಲ್ ಮಾಡದೇ ರೈತರ ಖಾತೆಗೆ ಹಣ ಸಂದಾಯ ಮಾಡದೇ ಅಲೆದಾಡಿಸುತ್ತಿದ್ದಾರೆ ಎಂದು ಕ್ಷೇತ್ರದ ಶಾಸಕರು ೯ ರೈತರೊಂದಿಗೆ ಸಂಬಂಧಿಸಿದ ಆಹಾರ ಇಲಾಖೆ ಸಚಿವ ಕೆ ಎಚ್ ಮಯನಿಯಪ್ಪರವರುನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೆಂಗಳೂರಿನ ಆಹಾರ ಸರಬುರಾಜು ನಿಗಮದ ಮುಂದೆ ಎರಡು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಮಾನ್ಯ ಶಾಸಕರಾದ ಬಿ.ದೇವೇಂದ್ರಪ್ಪ ರವರು ಆಗಮಿಸಿ ರೈತರೊಂದಿಗೆ ಪ್ರತಿಭಟನೆಗಿಳಿಯಲು ಮುಂದಾಗುತ್ತಿದ್ದಂತೆ
ಈ ಸುದ್ದಿ ತಿಳಿಯದಂತೆ ಸ್ಥಳಕ್ಕೆ ಆಹಾರ ನಾಗರೀಕ ಸರಬುರಾಜು ಸಚಿವರಾದ ಸನ್ಮಾನ್ಯ ಕೆ.ಎಚ್.ಮುನಿಯಪ್ಪರವರು ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ.ಟಿ.ರೇಜು ರವರು ಆಗಮಿಸಿ ಏಂಟು ದಿನಗಳಲ್ಲಿ ಜಗಳೂರು ತಾಲ್ಲೂಕಿನ ರೈತರ ಖಾತೆಗೆ ಹಣ ಸಂದಾಯ ಮಾಡುವ ಭರವಸೆ ನೀಡಿದ್ದಾರೆ ಈ ಸಂದರ್ಭದಲ್ಲಿ ತಾಲ್ಲೂಕಿನ ರೈತ ಮುಖಂಡರು ಹಾಜರಿದ್ದರು.