by shukradeshenews Kannada. Jlr news July 7
ರೈತರ ಮೇಲೆ ನಿಲ್ಲದ ವಿಂಡಮಿಲ್ ಕಂಪನಿ ಮಾಲಿಕರ ದೌರ್ಜನ್ಯ ರೈತರ ಸಂಘದ ಪದಾಧಿಕಾರಿಗಳು ಆಕ್ರೋಶ
ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ರೈತ ಮಂಜಪ್ಪ ಎಂಬುವ ರೈತನ ಜಮಿನಿನಲ್ಲಿ ವಿಂಡಪ್ಯಾನ್ ರೆಕ್ಕೆ ಸಾಮಾನು ಸರಂಜುಗಳು ತೆಗೆದುಕೊಂಡು ಹೋಗಲು 6 ತಿಂಗಳು ಅಂಗ್ರಿಮೆಂಟ್ ಮಾಡಿಕೊಂಡಿದ್ದರು ಆದರೆ ಈಗಾಗಲೇ ಅಗ್ರಿಮೆಂಟ್ ವಾಯಿದೆ ಮುಗಿದು 6 ತಿಂಗಳಾಗಿದ್ದು ಪುನ ಜಮಿನಿನಲ್ಲಿ ಬೃಹತ್ತಾದ ಲಾರಿಗಳು ಸಂಚಾರ ಮಾಡುವುದರಿಂದ ರೈತರು ಈಗ ಬಿತ್ತನೆ ಕಾಲದಲ್ಲಿ ಜಮಿನು ಬಿತ್ತನೆಗೆ ಅಡ್ಡಿಪಡಿಸುತ್ತಿದ್ದಾರೆ.
ರೈತರು ನಮ್ಮ ಭೂಮಿಯಲ್ಲಿ ನಾವು ಬಿತ್ತನೆ ಮಾಡಿಕೊಳ್ಳುತ್ತೆವೆ ಎಂದು ಪ್ರಶ್ನೆಸಿದರೆ ಪೊಲೀಸ್ ರ ಮೂಲಕ ದಬ್ಬಾಳಿಕೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಪದಾಧಿಕಾರಿಗಳು ಕೆಲವೊತ್ತು ವಿಂಡಮಿಲ್ ಆಳವಡಿಸಿರುವ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿದರು . ನಮಗೆ ಭೂಮಿ ಬಿತ್ತನೆ ಮಾಡಲು ಆವಕಾಶ ಕೋಡಿ ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿ ಎಂ ಹೊಳೆ.ತಾಲ್ಲೂಕು ಕಾರ್ಯಧರ್ಶಿ ರಾಜು ಬೈರನಾಯಕನಹಳ್ಳಿ .ರೈತ ಸಂಘದ ಪದಾಧಿಕಾರಿಗಳಾದ ಗಂಗಾಧರಪ್ಪ.ಸೇರಿದಂತೆ ಮಂಜಪ್ಪ ಹಾಜರಿದ್ದರು