posted by shukradeshenews jlr
ರೈತರ ಬದುಕಿನಲ್ಲಿ ಆಡಳಿತ ಸರಕಾರಗಳ ಚೆಲ್ಲಾಟ:- ಹುಚ್ಚವ್ವನ ಹಳ್ಳಿ ಮಂಜುನಾಥ್ ಆರೋಪ.
ಸುದ್ದಿ ಜಗಳೂರು :- ಆಡಳಿತ ಸರಕಾರಗಳು ರೈತರ ಬದುಕಿನಲ್ಲಿ ಚೆಲ್ಲಾಟ ನಡೆಸುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.
ತಾಲೂಕಿನ ತಾಯಿಟೋಣಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ(ಹುಚ್ಚವ್ವನಹಳ್ಳಿ ಮಂಜುನಾಥ್)ಬಣದ ಗ್ರಾಮಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಪಂಪ್ ಸೆಟ್ ಗಳಿಂಗೆ ಮೀಟರ್ ಅಳವಡಿಕೆ ರದ್ದಪಡಿಸ ಬೇಕು.ಹಗಲಿನ ವೇಳೆ 7 ಗಂಟೆಗಳ ಕಾಲ ವಿದ್ಯುತ್ ಒದಗಿಸಬೇಕು. ರಾತ್ರಿ ವೇಳೆ ಅರಣ್ಯದಂಚಿನಲ್ಲಿನ ಜಮೀನುಗಳಲ್ಲಿ ಕಾಡುಪ್ರಾಣಿಗಳ ಹಾವಳಿಗೆ ಹಾಗೂ ವಿಷ ಜಂತುಗಳಿಂದ ಸಾವನ್ನಪ್ಪುತ್ತಿದ್ದಾರೆ ಅಧಿಕಾರಿಗಳು ಕೂಡಲೇ ಜಾಗೃತರಾಗಬೇಕು ಇಲ್ಲವಾದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಬಿತ್ತನೆ ಬೀಜ,ರಸಗೊಬ್ಬರಗಳನ್ನು ಸರಿಯಾದ ಸಮಯಕ್ಕೆ ವಿತರಿಸ ಬೇಕು.ರೈತರು ಜಾಗೃತರಾಗಿ ತಮ್ಮನ್ಯಾಯಬದ್ದ ಹಕ್ಕುಗಳನ್ನು ಪ್ರಶ್ನಿಸ ಬೇಕು.ಆದ್ದರಿಂದ ಸಂಘಟಿತ ಹೋರಾಟಕ್ಕಾಗಿ ಗ್ರಾಮಶಾಖೆಗಳನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದರು.
ಕರುನಾಡ ನವ ನಿರ್ಮಾಣ ವೇಧಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ.ಹೊಳೆ ಮಾತನಾಡಿ,ಸರಕಾರ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು.ನೀರಾವರಿ ಯೋಜನೆಗಳ ಸಾಕಾರದಿಂದ ತಾಲೂಕಿಗೆ ಶೀಘ್ರ ನೀರು ಹರಿಯಲಿದ್ದು. ರೈತರ ಜಮೀನು ಖರೀದಿಸುವ ಖಾಸಗಿ ಕಂಪನಿಗಳಿಗೆ ಕಡಿವಾಣ ಹಾಕಿ.ರೈತ ಪರ ಆಡಳಿತಕ್ಕೆ ಮುಂದಾಗಲಿ.ಬೆಳೆದ ಬೆಳೆಗೆ ಬೆಲೆ ಸಿಗದೆ ಬೇಸತ್ತ ರೈತರ ಆತ್ಮಹತ್ಯೆ ಕೊನೆಗೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ರೈತ ಸಂಘಟನೆಗೆ ಶಾಲು ಹೊದಿಸುವ ಮೂಲಕ ಸೇರ್ಪಡೆಮಾಡಿಕೊಂಡರು.
ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಅರವಿಂದ್ ಪಾಟೀಲ್, ರೈತ ಸಂಘದ ಜಿಲ್ಲಾ ಮುಖಂಡ ಕಾನನಕಟ್ಟೆ ತಿಪ್ಪೇಸ್ವಾಮಿ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ.ಹೊಳೆ ಚಿರಂಜೀವಿ, ರೈತ ಸಂಘದ ಯುವ ಘಟಕದ ಅಧ್ಯಕ್ಷರಾದ ಬೈರನಾಯಕನಹಳ್ಳಿ ರಾಜು, ತಾಯಿಟೋಣಿ ಮಂಜಣ್ಣ, ದಿಬ್ಬದ ಹಳ್ಳಿ ಗಂಗಾದರಪ್ಪ , ಗ್ರಾಮ ಘಟಕದ ಅಧ್ಯಕ್ಷ ಮಹಾದೇವ ರೆಡ್ಡಿ,ದೇವಿಪುರ ಮಂಜುನಾಥರೆಡ್ಡಿ,ಎಮ್. ಟಿ .ಬಾಬು, ತಿಪ್ಪೇಸ್ವಾಮಿ,ಸೇರಿದಂತೆ ಇದ್ದರು.