posted by shukradeshenews
ರಾಜ್ಯ ಬಜೆಟ್-2023
2023-24 ನೇ ಸಾಲಿನ ಮುಂಗಡ ಪತ್ರದಲ್ಲಿ ವಿಷಯವಾಗಿ ಶಿಕ್ಷಣ ಕ್ಷೇತ್ರಕ್ಕೆ 37,589 ಕೋಟಿ, ಮಹಿಳಾ ಸಬಲೀಕರಣಕ್ಕೆ 34,294 ಕೋಟಿ ಹಣವನ್ನು ಮೀಸಲು ಇಟ್ಟು ಮತ್ತು ವಿದ್ಯಾ ಸಿರಿ ಶಿಕ್ಷಣ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತಂದಿರುವುದರಿಂದ ಶಿಕ್ಷಣ ಸಭಲೀಕರಣಕ್ಕೆ ಒತ್ತು ನೀಡಲಾಗಿದೆ. ಸಮಾಜ ಕಲ್ಯಾಣದ ಹಿತ ದೃಷ್ಠಿಯಿಂದ 5 Guarantee ಗಳನ್ನು ನೀಡುವುದರಿಂದ ಪ್ರತಿ ವರ್ಷ 57 ಸಾವಿರ ಕೋಟಿ ಖರ್ಚು ಅಗುತ್ತದೆ. ಇದರ ಫಲವನ್ನು ರಾಜ್ಯದ 1.30 ಲಕ್ಷ ಜನರು ಈ ವ್ಯಾಪ್ತಿಗೆ ಒಳಪಡುತ್ತಾರೆ. ಪ್ರತಿ ತಿಂಗಳು 4 ಸಾವಿರ ರೂಪಾಯಿಗಳಿಂದ 5 ಸಾವಿರ ರೂ.ಗಳವರೆಗೆ ಕುಟುಂಬಕ್ಕೆ ಆಧಾಯವಾಗುವುದರಿಂದ 1 ವರ್ಷಕ್ಕೆ ಸರಾಸರಿ ಒಂದು ಕುಟುಂಬಕ್ಕೆ 48,000 ರಿಂದ 60,000 ರವರೆಗೆ ಬಡವರಿಗೆ ಆರ್ಥಿಕ ನ್ಯಾಯ ಒದಗುತ್ತದೆ. ಅದ್ದರಿಂದ ಅಭಿವೃದ್ಧಿ ಚಟುವಟಿಕೆಗಳಿಗೂ ಕಾರಣವಾಗುತ್ತದೆ. ಜೊತೆಗೆ ರಾಜ್ಯದ ಎಲ್ಲಾ ಅಭಿವೃದ್ಧಿಗಳಿಗೆ ಒತ್ತು ನೀಡಲಾಗಿದೆ. ಅದರಲ್ಲಿ ವಿಶೇಷವಾಗಿ ಡಾ. ಪುನೀತ್ ರಾಜ್ ಕುಮಾರ್ ರವರ ಹೆಸರಿನಲ್ಲಿ ತಾಲ್ಲೂಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೃದಯಘಾತಕ್ಕೆ ಸಂಬಂಧಿಸಿದಂತೆ A.E.D ಎಂಬ ಹೆಸರಿನಲ್ಲಿ ತುರ್ತು ಚಿಕಿತ್ಸಾ ವಿಭಾಗವನ್ನು ಸ್ಥಾಪಸಿಸಲಾಗಿದೆ. ಅದರಲ್ಲಿ ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವುದು ಸಂತೋಷವನ್ನುಂಟುಮಾಡಿದೆ.
ಡಾ, ಪ್ರವೀಣ್ ಕುಮಾರ್ ಹೆಚ್ ಎಲ್
ಅರ್ಥಶಾಸ್ತ್ರ ಪ್ರಾಧ್ಯಾಪಕರು,
ಹೊಳಲ್ಕೆರೆ.
