ಜಗಳೂರು ಸುದ್ದಿ
ತಾಲ್ಲೂಕಿನ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ವಿಳಂಬ ಹಿನ್ನಲೆಯಲ್ಲಿ ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.ಎಂದು ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ ದೇವೆಂದ್ರಪ್ಪ ತಿಳಿಸಿದರು
ಪಟ್ಟಣದಲ್ಲಿರುವ ಶಾಸಕರ ಜನ ಸಂಪರ್ಕ ಕಛೇರಿಯಲ್ಲಿ ಪೂರ್ವಭಾವಿ ಸಭೆಯನ್ನುದ್ದೆಶಿಸಿ ಶಾಸಕ ಬಿ ದೇವೆಂದ್ರಪ್ಪ ಮಾತನಾಡಿದರು ಕಳೆದ ಎರಡು ಶಾಸಕರು ಕ್ಷೇತ್ರ ಆಡಳಿತ ನಡೆಸಿಹೋದರು ಸಹ ನೀರಾವರಿ ನಿಗಮದ ಅಧಿಕಾರಿಗಳು ಕೆರೆ ತುಂಬಿಸುವ ಯೋಜನೆಡಿ ಕೆರೆಗಳಿಗೆ ನೀರು ಹರಿಸಿರುವುದಿಲ್ಲ ಈ ಹಿನ್ನಲೆಯಲ್ಲಿ ಏಕೆ ಈ ಯೋಜನೆ ವಿಳಂಬಾವಾಗಿದೆ ಎಂಬುದನ್ನ ದಿನಾಂಕ 19 ರಂದು ತರಳಬಾಳು ಭವನದಲ್ಲಿ ಸಿರಿಗೆರೆ ಶ್ರೀ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸ್ವಷ್ಟನೆ ನೀಡಲಿದ್ದಾರೆ .ನಾನು ವಿಧಾನಸಭಾ ಕಲಾಪದಲ್ಲಿ ರಾಜ್ಯಪಾಲರ ಭಾಷಣದಲ್ಲಿ ತಾಲ್ಲೂಕಿನ ಮಹತ್ವದ ಯೋಜನೆ ಬಗ್ಗೆ ಜಗಳೂರು ಕ್ಷೇತ್ರಕ್ಕೆ ನೀರು ಬಿಡಲು ಏಕೆ ವಿಳಂಬ ನೀತಿ ಎಂದು ಪ್ರಸ್ತಾಪಿಸಿರುವೆ . ನಮ್ಮ ರೈತರು ಕೆರೆ ತುಂಬಿಸುವ ಯೋಜನೆ ಬರುವುದು ಎಂಬ ಆಶಾಭಾವನೆಯಿದೆ ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯನ್ನು ಇದುವರೆಗೂ ಪೂರ್ಣಗೂಳುಸುತ್ತಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದು ಸಭೆಯಲ್ಲಿ ದ್ವನಿ ಎತ್ತಿರುವೆ . ಈ ಸಭೆಗೆ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರ.ಹೆಚ್ ಪಿ ರಾಜೇಶ್ ಸೇರಿದಂತೆ ತಾಲ್ಲೂಕಿನ ರೈತರು ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮಲ್ಲಿಕಾರ್ಜುನ ಬಸಪ್ಪ ಗುಂಗೆ ಸೇರಿದಂತೆ ವಿವಿಧ ನೀರಾವರಿ ನಿಗಮ ಅಧಿಕಾರಿಗಳು ಸೇರಿದಂತೆ ಭಾಗವಹಿಸುವರು
ಆದ್ದರಿಂದ
57 ಕೆರೆ ತುಂಬಿಸುವ ಯೋಜನೆ ವಿಳಂಬ ನೀತಿಗೆ ರಾಜ್ಯ ಮಟ್ಟದ ಅಧಿಕಾರಿಗಳೆ ಕ್ಷೇತ್ರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು. ಈ ಮಹತ್ವದ ಯೋಜನೆ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯರವರ ಅಧಿಕಾರಾವಧಿಯಲ್ಲಿ ಚಾಲನೆಗೆ ಬಂತು ನಂತರ ಜಂಟಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ.ನಂತರದ ಬಿಜೆಪಿ ಯಡಿಯೊರಪ್ಪ ಸರ್ಕಾರದಲ್ಲಿ ಕಾರ್ಯರೂಪಕ್ಕೆ ಬಂದ ಯೋಜನೆ ಎರಡು ಶಾಸಕರುಗಳು ಆಡಳಿತ ಮುಗಿದು ಹೋದರು ಕಾಮಗಾರಿ ಮುಗಿಯದೇ ಇರುವುದು ಬೇಸರದ ಸಂಗತಿ ಎಂದರು.ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ. ಕಾಂಗ್ರೆಸ್ ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್.ಪಪಂ ಸದಸ್ಯರಾದ ರಮೇಶ್ ರೆಡ್ಡಿ..ಮುಖಂಡರಾದ ಪ್ರಕಾಶರೆಡ್ಡಿ.ಕಾಂಗ್ರೆಸ್ ಜಿಲ್ಲಾ ಕಾರ್ಯಧರ್ಶಿ ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಹಾಜರಿದ್ದರು.